ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿರಾಪಘಾತಗಳು

     ಚಿಹ್ನೆಗಳು ಬಹಳ ಸಮಯ ಹಾಗೇ ಮುಂದವರಿಯಬಹುದು .ಅಂತವರ ಕೆರಳಿಕೆ ಮತ್ತು ಗಲಿಬಿಲಿಯ ನಡವಳಿಕೆಗಳಿಂದ ಮಾನಸಿಕ ಸ್ವಾಸ್ಥ್ಯ ಕೆಟ್ಟಿರಬಹುದೆಂಬ ಭಾವನೆಯೂ ಉಂಟಾಗಬಹುದು .ಬಾಯಿಂದ ಮದ್ಯಸಾರದ ವಾಸನೆಯೇನಾದರೂ ಬಂದರೆ,ಅವನೊಬ್ಬ ಸಮಾಜ ಘಾತುಕ ಕುಡುಕನೆಂದು ಶಿಕ್ಷೆಗೂ ಗುರಿಯಾಗಬಹುದು.
           ರಕ್ತಸ್ರಾವ ಹಚ್ಚಾಗಿ ಅದೇ ಭಾಗದ ಮಿದುಳಿನ ಮೇಲೆ ಒತ್ತಡ ಹೆಚ್ಚಾಗುವುದಲ್ಲದೆ, ಮಿದುಳಿನ ಇನ್ನೊಂದು ಹಾಲೆಯ ಕಡೆಗೂ ಒತ್ತಡ ಮುಂದುವರಿಯುತ್ತದೆ. ಆ ಭಾಗದ ಮಿದುಳಿಗೂ ಒತ್ತಡ 
ಬೀಳುವುದರಿಂದ ರೋಗಿಯನ್ನು ಇನ್ನು  ಹೆಚ್ಚಿನ ಗಂಭೀರ ಪರಿಸ್ಥಿತಿಗೆ ತಳ್ಳಿದಂತ್ತಾಗತದೆ.ಇದರಿಂದ ಮಿದುಳಿನಲ್ಲಿರುವ ಜೀವಾಳದ ಕೇಂದ್ರಗಳ ಮೇಲೂ ಪರಿಣಾಮಗಳಾಗುತ್ತವೆ .ಅವನು ಪೂರ್ಣ ಪ್ರಮಾಣದ ಮಯಕದ ಸ್ಥಿತಿಗೆ ತಲುಪುತ್ತಾನೆ .ಕಣ್ಣಿನ ತಾರಕೆ ಮೊದಲು ಕಿರಿದಾಗಿ ನಂತರ ಹಿರಿದಾಗುತ್ತಾ ಬರುತ್ತದೆ. ಮುಂದೆ ಬ್ಯಾಟರಿಯ ಬೆಳಕಿನ ಕಿರಣಗಳಿಗೆ ವಿಫಲವಾಗುತ್ತದೆ .ಏಟು ತಗುಲಿದ ಎದುರು ಬದಿಯ ಕೈ ಕಾಲುಗಳೂ ನಿಶ್ಚೇತನಗೊಳ್ಳುತ್ತವೆ .ಸಂಪೂರ್ಣ ಮಯಕದ ಸ್ಥಿತಿಗೆ ಬಂದ ರೋಗಿ ಸ್ವಲ್ಪ ಸಮಯದಲ್ಲೇ ಅಸು ನೀಗುತ್ತಾನೆ.
           ಈ ತರಹೆಯ ಎಪಿಡ್ಯೂರಲ್ ರಕ್ತಸ್ರಾವ ಉಂಟಾದವರ ಕಪಾಲದ ಹೊರಬದಿಯ ಚರ್ಮದಡಿಯಲ್ಲೂ ರಕ್ತಸ್ರಾವವಾಗಿ ಊದಿಕೊಂಡಿರುವುದನ್ನು ಗುರುತಿಸಬಹುದು .ದೇಹದ ಇತರ ಭಾಗಗಳಲ್ಲೂ ಗಂಭೀರ ರೀತಿಯ ಜಖಂಗಳಾಗಿರಬಹುದು .ಈ ರೋಗಿಗಳ ಪ್ರಜ್ಞೆಯ ಮಟ್ಟ,ನಾಡಿ ಮಿಡಿತ, ತಾರಕೆಗಳ ಪ್ರತಿಕ್ರಿಯೆ, ಉಸಿರಾಟ ,ರಕ್ತದೊತ್ತಡ ,ಜ್ವರದ ತಾಪಮಾನ ,ನೋವಿನ ಪ್ರತಿಕ್ರಿಯೆ  - ಮುಂತಾದವುಗಳನ್ನು ಪ್ರತಿ ಅರ್ಥ ಅಥವಾ ಒಂದು ಗಂಟೆಗೊಮ್ಮೆಯಾದರೂ ಪರೀಕ್ಷಿಸಿ ದಾಖಲು ಮಾಡುತ್ತಿರಬೇಕು .ಅಪಾಯದ ಮೊದಲ ಸಂಕೇತಗಳು ಗೋಚರಿಸಿದಾಕ್ಷಣ ತುರ್ತು ಶಸ್ತ್ರಚಿಕಿತ್ಸೆ ಜರುಗಿಸಲು ಎಲ್ಲಾ ಸಜ್ಜಾಗಿರಬೇಕು.
‍  ಸ್ಥಳೀಯ ಪ್ರಭಾವ ಬೀರುವ ಅರಿವಳಿಕೆಯ ಮದ್ದನ್ನು ನೀಡುವುದರಿಂದಲೇ ಇವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ .ಕಿವಿಯ ಮೇಲ್ಬಾಗದ ಕಪಾಲದ ಚರ್ಮದಲ್ಲಿ ಕತ್ತರಿಕೆ ಮಾಡಿ ಕಪಾಲದ ಚಪ್ಪಟೆ ಮೂಳೆಯನ್ನು ಹೋರಗೆ ಕಾಣುವಂತೆ ತೆರೆಯುವರು .ಭೈರಿಗೆಯಿಂದ ಆ ಭಾಗದ ಮೂಳೆಯಲ್ಲಿ ತೂತು ಕೊರೆಯಲಾಗುತ್ತದೆ .ಅಲ್ಲಿ ರಕ್ತ ಶೇಖರಣೆಯಾಗಿದ್ದರೆ ತೂತು ಮೂಳೆಯನ್ನು