ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ೭. ಟಾನ್ಸಿಲೈಟಿಸ್‌ ಪಂಪಚದಾದ್ಯಂತ ಪ್ರತಿವರ್ಷವೂ ಕೋಟ್ಯಾಂತರ ಜನರ ಗಂಟಲೊಳಗಿನ ಟಾನ್ಸಿಲ್‌ (ಮೆಂಡಿಕೆ) ಗ್ರಂಥಿಗಳನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆ - 'ಟಾನ್ಸಿಲೆಕ್ಟೇಮಿ'- ಜರುಗುತ್ತವೆ. ಎಲ್ಲಾ ಕಡೆ ನಡೆಯುವ ಸಾಮಾನ್ಯ ಶಸ್ತ್ರಚಿಕಿತ್ಸೆಗಳ ಸಂಖ್ಯೆಯಲ್ಲಿ ಟಾನ್ಸಿಲೆಕ್ಟಮಿಗೇ ಅಗ್ರ ಮಾನ್ಯತೆ ಇರುವಂತಿದೆ. ಇದೊಂದು ನಿರಪಾಯಕರ ಹಾಗೂ ಒಳ್ಳೆಯ ಪರಿಣಾಮಗಳನ್ನು ನೀಡುವ ಸರಳ ಶಸ್ತ್ರಚಿಕಿತ್ಸೆಯೆಂದು ಹೆಸರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅದರ ದುರುಪಯೋಗವಾಗುತ್ತಿದೆಯೆಂಬ ಅವಹೇಳನೆಗೂ ಗುರಿಯಾಗುತ್ತಿರುವುದು ವಿಪರ್ಯಾಸದ ಸಂಗತಿ. ಟಾನ್ಸಿಲ್‌ಗಳ ರಚನೆ ಮತ್ತು ಉಪಯುಕ್ತತೆ ನಾಲಿಗೆಯ ಹಿಂಭಾಗದಲ್ಲಿ, ಬಾಯಿ-ಗಂಟಲು ಸಂಧಿಸುವ ಇಕ್ಕೆಲಗಳಲ್ಲಿ ಟಾನ್ಸಿಲ್ ಗ್ರಂಥಿಗಳು ನೆಲೆಗೊಂಡಿವೆ. ಆಕಾರ ಮತ್ತು ಗಾತ್ರಗಳಲ್ಲಿ ಬಾದಾಮಿ ಚಿತ್ರ ೮. ಟಾನ್ಸಿಲ್ ಮತ್ತು ಅಡಿನಾಯಿಡ್ಸ್ ಟಾನ್ಸಿಲ್ : ೧. ಕಿರುನಾಲಿಗೆ, ೨. ಸಹಜ ಟಾನ್ಸಿಲ್‌, ೩. ನಾಲಿಗೆ, ೪, ಉರಿಯೂತದ ಟಾನ್ಸಿಲ್ ಅಡಿನಾಯಿಡ್ಸ್ : ೧. ನಾಲಿಗೆ, ೨. ಅಡಿನಾಯಿಡ್ಸ್, ೩. ಟಾನ್ಸಿಲ್