ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ. 89 ಳನ್ನು ಒಪ್ಪುವ ವಿಷಯಗಳನ್ನು ವರ್ಣಿಸುತ್ತದೆ. ವಿಷಯವೂ ನಿರ್ಧಾರ್ಯ; ಪ್ರಮೇಯ, ಸಾಹಿತ್ಯವು ಮಾನವನ ಅನಿರ್ಧಾರ್ಯವೂ ಅಪ್ರಮೇ ಯವೂ ಆದ ಪ್ರವೃತ್ತಿಗಳನ್ನೂ ಒಪ್ಪುವ ವಿಷಯವನ್ನು ಕುರಿತದ್ದು. ವಿಷಯಗಳೂ ಅನಿರ್ಧಾರ್ಯಗಳು ; ಅಪ್ರಮೇಯಗಳು, ವಿಜ್ಞಾನ ಶಾಸ್ತ್ರಜ್ಞನು ಒಂದು ನಕ್ಷತುವನ್ನು ವರ್ಣಿಸಬಹುದು; ಒಂದು ಕಪ್ಪೆಯ ಮೈಯ ಕಟ್ಟಡವನ್ನು ವರ್ಣಿಸಬಹುದು. ಅವನು ಹೇಳಬೇಕಾದದ್ದು ಸಿರ್ಧರವಾದ ವಿಷಯವ. ನಕ್ಷತ್ರವು ಇಷ್ಟು ಸಹಸ್ರಯೋಜನ ದೂರ ದಲ್ಲಿದೆ ಅದರ ಗಾತ್ರವು ಇಷ್ಟು ಅದರ ತೇಜಸ್ಸು ಈ ವರ್ಣಗಳಿಂದ ಕೂಡಿರತಕ್ಕದ್ದು, ಇತ್ಯಾದಿ, ಅಥವಾ ಈ ಕಪ್ಪೆ ಕನಿಷ್ಠ ಪಕ್ಷ ಇಷ್ಟು ಉದ್ದ: ಅಧಿಕ ಪಕ್ಷ ಇಷ್ಟು ಉದ್ದ ಇರುವುದು ; ಇದರ ಕಾಲುಗಳ ರಚನೆ ಹೀಗೆ ತಲೆಯ ರಚನೆ ಹೀಗೆ ; ಇತ್ಯಾದಿ. ಒಂದು ವಿಷಯವನ್ನು ಹೇಳುವ ಅನೇಕ ವಿಜ್ಞಾನಶಾಸ್ತ್ರಜ್ಞರೂ ಅದೇ ಮಾತುಗಳನ್ನೇ ಹೇಳಬೇಕು, ಅದರಲ್ಲಿ ಅವರವರ ರಸಜತೆಗೆ ಏನೂ ಅವಕಾಶವಿಲ್ಲ. ಅಳತೆ ಮಾಡುವವನು ಯಾವನಾದರೂ ಉದ್ಭ ಒಂದೇ, ಒಂದೇ ಅಲ್ಲ ದಿದ್ದರೆ ಅಳತೆ ತಪ್ಪು,, ಸಾಹಿತ್ಯದಲ್ಲಿ ಹೀಗಲ್ಲ, ಕಾವ್ಯದಲ್ಲಿ ಕವಿಯು ವರ್ಣಿಸುವುದು ಆ ನಕ್ಷತ್ರವನ್ನೂ ಅಲ್ಲ, ಆ ಕಪ್ಪೆಯನ್ನೂ ಅಲ್ಲ, ಅವು ಗಳಿಂದ ತನ್ನ ಮನಸ್ಸಿನಲ್ಲಿ ಉಂಟಾಗುವ ಭಾವಗಳನ್ನು , ಈ ಭಾವಗಳ ಸ್ವಭಾವದಲ್ಲಿ ಸಾಮಾನ್ಯನಿಗೂ ಕವಿಗೂ ವ್ಯತ್ಯಾಸ ಉಂಟೆಂಬುದನ್ನು ಹೇಳಿಯೇ ಇದೆ. ಪೀಟರ್ ಬೆಲ್ ಎಂಬುವವನಿಗೆ ಪ್ರಿಮ್‌ರೋಸ್ ಪುಷ್ಟವು ಬರಿಯ ಒಂದು ಪ್ರಿಮ್‌ರೋಸ್ ಪುಷ್ಪಮಾತ್ರವಾಗಿತ್ತೆಂದು ವಡ್ಸ್ವರ್ತ್ ಕವಿಯು ಒಂದು ಕಡೆ ಹೇಳಿದ್ದಾನೆ, ಇನ್ನೊಂದು ಕಡೆ ತನ್ನ ಮಾತನ್ನು ಹೇಳುತ್ತ To me the meanest flower that blows can give Thoughts that do often lie too deep for tears. ಎಂದು ಹೇಳಿದ್ದಾನೆ, ಪುಷ್ಪಗಳಲ್ಲಿ ಕನಿಷ್ಠವಾದುದೂ ಕೂಡ ಕವಿಯ ಹೃದಯದಲ್ಲಿ ಹೇಳಲಾಗದ ಭಾವಗಳನ್ನುಂಟುಮಾಡುವುದು. ಇದಕ್ಕೆ ಅವನ ರಾಗದ ಸಂಸ್ಕಾರವು ಕಾರಣ. ಹೀಗೆಯೇ ಒಬ್ಬ