9 ಸಾಹಿತ್ಯ. ವೆಂದೂ ಹೀಗೆ ಭೌತಿಕಶಾಸ್ತ್ರಗಳು ಕಾವ್ಯ ನಿರ್ಮಾಣಕ್ಕೆ ಆವಶ್ಯಕ ವಾದ ರಸಗಳನ್ನು ನಾಶಪಡಿಸುವುವೆಂದೂ ಅಭಿಪ್ರಾಯವನ್ನು ಕೆಲವು ಕಡೆ ನೋಡಬಹುದು. ಈ ಮೊದಲು ಉಕ್ತನಾಗಿರುವ ಕೀಟ್ಸ್ ಕವಿಯು ಹೀಗೆ ಶಂಕೆಪಡುತ್ತಿದ್ದಂತೆ ಕಾಣುತ್ತದೆ, ಆವನು ಈ ವಿಷಯದಲ್ಲಿ ಒಂದು ಕಾವ್ಯವನ್ನು ಬರೆದನು, ಪ್ರಾಯಶಃ ಅವನ ಶಂಕೆಯು ಸಾಮಾನ್ಯರನ್ನು ಕುರಿತದ್ದಾಗಿರಬಹುದೇ ಹೊರತು ವಿಚಾರಪರರನ್ನು ಕುರಿತದ್ದಾಗಿರಲಾರದು, ಸಾಮಾನ್ಯ ಜೀವಿಗಳಲ್ಲಿ ಆತಿಪರಿಚಯದಿಂದ ಅಗೌರವವು ಮೊಳೆಯುವುದಾದರೂ ಉತ್ತಮ ಜೀವಿಗಳಲ್ಲಿ ಪರಿಚಯವು ಪೂರ್ಣಜ್ಞಾನವನ್ನೂ ಅದರಿಂದ ಅನುಭವಾ ಧಿಕ್ಯವನ್ನೂ ಮಾತ್ರ ಉಂಟುಮಾಡುವುದು, ಸರನು ಪಿತರಿಂದ ಇಷ್ಟು ಪ್ರಭೆಯುಳ್ಳವನಾಗಿದ್ದಾನೆ ಎಂಬುದನ್ನು ನಾವು ಕಾಣೆವೆನ್ನಿ, ಅಥವಾ ಹೈಡೋಜನ್ ಎಂಬ ವಾತದ ಒಂದು ಅದ್ಭುತಕವಚವು ಅವನನ್ನು ಸುತ್ತಿ ಸುಡುತ್ತಿರುವುದೆಂದೂ ಅದರಿಂದ ಅವನು ಆ ಪ್ರಭ ಯೆಂದ ಕಡಿದಾನೆ ಎಂದೂ ತಿಳಿದೆವೆನ್ನಿ, ಇದನ್ನು ಕಂಡರೂ ಕಾಣದಿದ್ದರೂ ಸರನ ಪ್ರಭೆಯು ಸುಳ್ಳಲ್ಲ. ಅದು ಅದ್ಭುತಪ್ರಭೆ ಯಲ್ಲದೆ ಹೋಗಲಿಲ್ಲ. ಹೈಡೋಜನ್ ಸುಟ್ಟು ಈ ಪ್ರಭೆಯುಂಟಾ ಯಿತೆಂದಮಾತ್ರಕ್ಕೆ ಪ್ರಧೆಯ ಆಶ್ಚರ್ಯೋತ್ಪಾದಕ ಶಕ್ತಿಯು ಹೋಯಿತೇನು ? ಹೋಗುವುದಕ್ಕೆ ಬದಲಾಗಿ ಒಂದು ಆಶ್ಚರ್ಯವಿದ್ದ ಕಡೆ ಎರಡು ಆಶ್ಚರ್ಯವಾಯಿತು. ಹೈದ್ರೋಜನ್ ಸುಟ್ಟರೆ ಪ್ರಭೆ ಉಂಟಾಗುವುದೇತಕ್ಕೆ? ಭಗವಂತನ ಮಾಯೆಯು ಸೂರ್ಯನ ಸುಭೆ ಯಲ್ಲಲ್ಲದೆ ಕೇವಲ ಸಭೆಯಲ್ಲಿಯೂ ಪ್ರತ್ಯಕ್ಷವಾದ ಹಾಗಾಯಿತು. ಪ್ರಭೆಯ ಸ್ವಭಾವವನ್ನು ತಿಳಿದೆವೆನ್ನೋಣ. ಆಮೇಲೆ ಅದು ನಮಗೆ ಕಂಡಾಗ್ಗೆ ನಮಗೆ ಅನುಭವ ಉಂಟಾಗುವುದು ಹೇಗೆ ಎಂಬ ಮಾಯೆ ನಿಲ್ಲುತ್ತದೆ, ನಾವು ಸರ್ವಪ್ರಯತ್ನದಿಂದಲೂ ಸೃಷ್ಟಿಯ ಮಾಯಾ ವಸ್ತ್ರವನ್ನು ಸೆಳೆದು ಹಾಕುತ್ತಿದೇವೆ ಎಂದು ತಿಳಿದುಕೊಂಡಿರಬಹುದು. ಸೆಳೆದು ಹಾಕಿದ ವಸ್ತ್ರವು ಕಣ್ಣಿಗೆ ತೋರವಾಗಿ ಕಾಣಬಹುದು. ಆದರೆ ಎಳೆದಿರುವುದಕ್ಕಿಂತ ಎಳೆಯಬೇಕಾಗಿರುವ ವಸ್ತ್ರವ ಯಾವಾ
ಪುಟ:ಸಾಹಿತ್ಯ1924.djvu/೧೦೫
ಗೋಚರ