ಸಾಹಿತ್ಯ, 99 ಕಾವ್ಯರೂಪದ ವಿವರ ತಿಳಿದವರಾದರೆ ಪಾಠಕರು ಭಾವವನ್ನು ಸುಲಭ ವಾಗಿ ಗ್ರಹಿಸುವರು, ಕಾವ್ಯದ ರೂಪವೇನೋ ನಾಟಕದಂತಿರಬಹುದು ; ಮಾತೆಲ್ಲ ಒಂದು ವಿಷಯದ ಚರ್ಚೆಯನ್ನು ಎರಡು ಪದದಿಂದ ವಿಶದ ಪಡಿಸುವುದಾಗಿರಬಹುದು. ಹೀಗಿದ್ದರೆ ಇದನ್ನು ಗ್ರಹಿಸಿದವರು ಕಾವ್ಯ ದಿಂದ ಏನನ್ನು ತಿಳಿಯಬೇಕೆಂಬುದನ್ನು ಶೀಘ್ರವಾಗಿ ನಿಷ್ಕರ್ಷಿಸು ವರು ; ಇಲ್ಲದಿರುವವರು ಪಾತ್ರಗಳ ಸ್ವಭಾವ ನಿರೂಪಣ ಸರಿಯಾಗಿಲ್ಲ ವಲ್ಲ ಬರಿಯ ಚರ್ಚೆಯಾಗಿ ಹೋಗಿದೆ ಎಂದು ಅತೃಪ್ತರಾಗುವರು. ಆಂಗ್ಟಯರ ನವೀನ ನಾಟಕ ಅನೇಕದರಲ್ಲಿ ಈ ವಿರೂಪವು ಕಾಣು ವದು: ಮಾತನಾಡುವವರು ನಾಲ್ಕಾರು ಜನ ; ಕೆಲವರು ಬುದ್ದಿ ವಂತರು, ಕೆಲವರು ದಡ್ಡರು, ಕೆಲವರು ನಯದ ಜನ, ಕೆಲವರು ಒರಟರು; ಆದರೆ ಎಲ್ಲರು ಆಡುವುದೂ ಒಂದೇ ಮಾತು, ಎಲ್ಲರ ಉಕ್ತಿ ಯಲ್ಲಿಯೂ ಒಂದೇ ರೀತಿಯ ಚಮತ್ಕಾರ, ಒಂದೇ ರೀತಿಯ ಹಾಸ್ಯ. ಇದು ನಾಟಕದ ಶಿಕ್ಷಣಕ್ಕೆ ವಿರೋಧ: ಗ್ರಂಥಕರ್ತನು ಇಲ್ಲಿ ಮಾಡು ತಿರುವುದೇನೆಂದರೆ ತಾನು ಚರ್ಚಿಸಬೇಕೆಂಬ ಒಂದು ವಿಷಯವನ್ನು ತೆಗೆದುಕೊಂಡಿದ್ದಾನೆ; ಅದಕ್ಕೆ ನಾಲ್ಕು ರೀತಿಯ ಜನ ನಾಲ್ಕು ವಿಧ ವಾದ ಅಭಿಪ್ರಾಯವನ್ನು ಹೇಳಬಹುದು, ಅದನ್ನೆಲ್ಲಾ ತನ್ನ ಮಾತಿನಲ್ಲಿ ಚಮತ್ಕಾರವಾಗಿ ಹಾಸ್ಯರಸಯುಕ್ತವಾಗಿ ಬರೆದು ಅವರ ಹೆಸರಿನಲ್ಲಿ ಹೇಳಿದಾನೆ. ನಾಟಕವನ್ನು ಬರೆಯುವುದಕ್ಕೆ ಬದಲಾಗಿ, ನಯ ವಾದವನು ಹೀಗೆನ್ನ ಬಹುದು ಅದಕ್ಕೆ ಒರಟು ಮನುಷ್ಯನದು ಇದು ಉತ್ತರ : ದಡ್ಡನು ಹೀಗೆನ್ನ ಬಹುದು ಅದಕ್ಕೆ ಬುದ್ಧಿವಂತನು ಹೇಳುವ ಮಾತು ಇದು, ಎಂದು ನಾನಾಮುಖದಿಂದ ಒಂದು ವಿಷಯವನ್ನು ಚರ್ಚಿಸಿ ಉಪನ್ಯಾಸ ಬರೆಯಬಹುದಾಗಿತ್ತು; ಉಪನ್ಯಾಸವನ್ನು ಬರೆ ಯಲಿಲ್ಲ ನಾಟಕವನ್ನು ಬರೆದಿದ್ದಾನೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಓದಿದರೆ ನಾಟಕ ಕೆಟ್ಟು ಹೋಯಿತಲ್ಲ ಎಂಬ ಅಸಮಾಧಾನಕ್ಕೆ ಬದ ಲಾಗಿ ನಮಗೆ ಈ ವಿಷಯವನ್ನು ಎಷ್ಟು ಚಮತ್ಕಾರವಾಗಿ ಚರ್ಚೆ ಮಾಡಿದಾನೆಂಬ ಉತ್ಸಾಹವು ಉಂಟಾಗುವರು, ಕವಿಯ ಆಶಯವ ನಮಗೆ ತಿಳಿದ ಹಾಗಾಗುವುದು.
ಪುಟ:ಸಾಹಿತ್ಯ1924.djvu/೧೧೨
ಗೋಚರ