100 ಸಾಹಿತ್ಯ, ರೂಪುಸರಿಯಾಗುವುದಕ್ಕೆ ಸಾಮಗ್ರಿಯು ಸರಿಯಾದ ಪಾಕಕ್ಕೆ ಬಂದಿರಬೇಕು. ಹೀಗೆ ತನ್ನ ಕಾವ್ಯ ಕೆಡುವುದಲ್ಲದೆ ಓದುವವರಿಗೆ ಕಷ್ಟವೂ ಆಗುವುದಾದರೆ ಕವಿಯು ಸರಿಯಾದ ರೂಪವನ್ನು ಕೊಡದೆ ಬೇರೆ ರೂಪವನ್ನು ಕೊಡುವುದು ಏಕೆ ಎಂದು ಯಾರಾದರೂ ಕೇಳಬಹುದು. ಇದು ಒಟ್ಟಿನಲ್ಲಿ ಚರ್ಚಿಸುವುದಕ್ಕೆ ಸಾಧ್ಯವಾದ ವಿಷಯವಲ್ಲ. ಒಂದೊಂದು ಸಂದರ್ಭದಲ್ಲಿಯೂ ಬೇರೆಬೇರೆ ಕಾರಣವಿರಬಹುದು. ಆದರೆ ಕವಿಯು ಉದ್ದೇಶಪೂರ್ವಕವಾಗಿ ಕೆಡಿಸದಿದ್ದರೂ ಒಂದು ಕಾರಣ ದಿಂದ ಸಾಮಗ್ರಿಗೆ ಸರಿಯಾದ ರೂಪುಬಾರದೆ ಹೋಗಬಹುದು. ಈ ಕಾರಣ ಯಾವುದೆಂದರೆ ಸಾಮಗ್ರಿಯ ಪಾಕದಲ್ಲಿ ಊಹೆ ಎಷ್ಟರ ಮಟ್ಟಿಗೆ ಸೇರಿದೆ ಎನ್ನು ವುದು. ಒಬ್ಬ ಕವಿಯು ವ್ಯಕ್ತಿಗಳನ್ನು ನಿರ್ಮಿಸಿ ನಾಟಕವನ್ನು ಬರೆದಿದ್ದೇನೆ ಎಂದು ತಿಳಿದುಕೊಂಡಿರಬಹುದು ; ಆಯಾ ವ್ಯಕ್ತಿಗೆ ತಕ್ಕ ಮಾತನ್ನು ಅದರ ಬಾಯಲ್ಲಿಟ್ಟಿದೇನೆಂದು ಕೊಂಡಿರಬಹುದು, ಆದರೆ ಸ್ವಭಾವನಿರೂಪಣಕ್ಕೆ ಆವಶ್ಯಕವಾದ ಊಹಾಶಕ್ತಿಯು ಕವಿಯಲ್ಲಿಲ್ಲದಿದ್ದರೆ ಅಥವಾ ಅಷ್ಟು ಊಹೆಯು ಆ ಪಾಕದಲ್ಲಿ ಸೇರದಿದ್ದರೆ ಸ್ವಭಾವನಿರೂಪಣವ್ರ ಸಂಪೂರ್ಣವಾಗುವು ದಿಲ್ಲ. ಇದರಿಂದ ಆ ವ್ಯಕ್ತಿಯು ನಿಜವಾದ ವ್ಯಕ್ತಿಯಂತೆ ತೋರದೆ ಈ ಅಭಿಪ್ರಾಯವನ್ನು ಹೇಳುವುದಕ್ಕೆ ಬಂದ ಗೊಂಬೆಯಂತೆ ಕಾಣು ವನು. ಸರಿಯಾದ ನಾಟಕದಲ್ಲಿ ವ್ಯಕ್ತಿಯೇ ನಿಜವಾಗಿ ಮುಖ್ಯ ; ಅವನು ಆಡುವ ಈ ಮಾತು ಇನ್ನೊಂದು ಮಾತು ಅವನ ಮಾತುಗಳಲ್ಲಿ ಒಂದೆ ರಡು, ಸರಿಯಲ್ಲದ ನಾಟಕದಲ್ಲಿ ಈ ಮಾತು ಮುಖ್ಯ ; ಆ ವ್ಯಕ್ತಿ ಈ ಮಾತನ್ನೂ ಇನ್ನೂ ಇದರಂತ ಹತ್ತು ಮಾತನ್ನೂ ಹೇಳುವುದಕ್ಕಾಗಿ ನಿರ್ಮಿತವಾಗಿರುವ ಪಾತ್ರ. ಇದಿಷ್ಟಕ್ಕೂ ಮುಖ್ಯ ಕಾರಣ ನಾಟಕ ಬರೆಯುವುದಕ್ಕೆ ಬೇಕಾದ ಊಹೆಯಿಲ್ಲದೆ ಉಪನ್ಯಾಸ ಬರೆಯುವುದಕ್ಕೆ ಬೇಕಾದಷ್ಟು ಮಾತ್ರ ಊಹೆಯುಳ್ಳ ಕವಿಯು ಉಪನ್ಯಾಸವನ್ನು ಬರೆಯುವುದನ್ನು ಬಿಟ್ಟು ನಾಟಕವನ್ನು ಬರೆಯುವುದೇ, ಆದರೆ, ಈ ಮೊದಲೇ ಹೇಳಿರುವಂತೆ ವಿಷಯವು ಮುಖ್ಯವಾದದ್ದಾದರೆ ಕವಿಯು. ಅದನ್ನು ಉಪನ್ಯಾಸವಾಗಿ ಹೇಳಿದರೂ ನಾಟಕವಾಗಿ ಹೇಳಿದರೂ
ಪುಟ:ಸಾಹಿತ್ಯ1924.djvu/೧೧೩
ಗೋಚರ