ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಸಾಹಿತ್ಯ, 11 ರೋಮಾಂಟಿಕ್ ' ಆದ ಕತೆಯೂ ಕಾವ್ಯವೂ ( ಕ್ಲಾಸಿಕ್ ' ಆಗಿ ಇರಬಹುದು, ಮುಖ್ಯವಾಗಿ ನಿಯಮನಿಬದ್ಧವೆನ್ನು ವಲ್ಲಿ ನಿಯಮ ವೆನ್ನು ವುದು ಈ ಮೊದಲು ಹೇಳಿರುವಂತೆ ಉತ್ತಮ ಕಾವ್ಯಗಳಿಂದ ತಿಳಿದ ನಿಯಮ ಹೊರತು ಹೊರಗಣಿಂದ ಆರೋ ಪಿಸಿದ್ದು ಅಲ್ಲ, ಉತ್ತಮ ಸಾಹಿತ್ಯವು ಬೆಳೆದಹಾಗೆ ನಿಯಮಗಳೂ ಬೆಳೆಯುವುವು. ಇವು ಸಂಕೋಲೆ ಗಳಾಗಿ ಪರಿಣಮಿಸಬೇಕಾದದ್ದಿಲ್ಲ, ಸಂಪೂರ್ಣವಾದ ಆವೇಶಕ್ಕೆ ಸ್ವತಂತ್ರ ಮಾರ್ಗವು ಸಹಜವಾಗಿ ಬರುವುದು, ಉಳಿದ ಎಲ್ಲಾ ಆವೇಶಕ್ಕೂ ಸಿದ್ದಾಂತಮಾರ್ಗವೇ ಸರಿಯಾದದ್ದು. ಎಂದರೆ ಸ್ವತಂತ್ರವಾರ್ಗವನ್ನು ಅವಲಂಬಿಸಬೇಕಾದರೆ ಕೆಲವರು ಕವಿಗಳಿಗೆ ಮಾತ್ರ ತೊಂದರೆ ಇಲ್ಲದಿರ ಬಹುದು ; ಅನೇಕರಿಗೆ ಅದು ಸರಿಹೋಗದು. ಸರಿಹೋಗುವುದನ್ನು ವ ಕೆಲವರಿಗೂ ಕೂಡ ಯಾವಾಗಲೂ ಸ್ವತಂತ್ರವಾರ್ಗವು ಒಳ್ಳೆಯದೆನ್ನು ವುದಕ್ಕಿಲ್ಲ, ಅಲ್ಲದೆ ಕೆಲವು ರೂಪದ ಕಾವ್ಯದಲ್ಲಿ ಸ್ವತಂತ್ರವಾರ್ಗವು ಸರಿಹೋಗುವುದು, ಕೆಲವು ರೂಪದಲ್ಲಿ ಸಿದ್ದಾಂತಮಾರ್ಗವೇ ಸರಿ. ಕವಿಯ ಆತ್ಮದ ಅನುಭವವಿಶೇಷದ ಸಾರವನ್ನು ವ್ಯಂಜಕಕಾವ್ಯವಾಗಿ ಹೇಳುವಲ್ಲಿ ಎಂದರೆ ಲಿರಿಕ್ ಜಾತಿಯ ಕೃತಿಗಳಲ್ಲಿ ಆವೇಶವೇ ಮುಖ್ಯ ವಾದದ್ದರಿಂದ ಸ್ವತಂತ್ರವಾರ್ಗವ ಸ್ವಭಾವಜನ್ಯವೂ, ಉಳಿದ ಹಾಗೆ ಉಪನ್ಯಾಸ, ಕತೆ, ನಾಟಕ ಮೊದಲಾದ ರೂಪಗಳಲ್ಲಿ ರಾಗದ ಅಧಿಕಾರದ ಜತೆಗೆ ಬುದ್ದಿಯ ಅಧಿಕಾರವೂ ಹೆಚ್ಚು ಹೆಚ್ಚಾಗಿ ಮಿಳಿತವಾಗುತ ಬಂದ ಹಾಗೆ ಸಿದ್ಧಾಂತಪದ್ದತಿಯು ಕ್ಷೇಮಕರವಾಗಿ ತೋರುವುದು, ಸ್ವತಂತ್ರ) ಪದ್ದತಿಯಲ್ಲಿ ಉತ್ತಮವಾದ ನಾಟಕವಾಗುವುದಿಲ್ಲವೆಂದಲ್ಲ. ಪ್ರಪಂ ಚದ ನಾಟಕಗಳಲ್ಲಿ ಅತ್ಯುತ್ತಮಗಳಾದ ಕೆಲವನ್ನು ಬರೆದ ಷೇಕ್ಸ್‌ಪಿಯರ ಕವಿಯು ಯಾವ ಸಿದ್ದಾಂತದ ಮಾರ್ಗವನ್ನೂ ಅವಲಂಬಿಸಲಿಲ್ಲ, ಆದರೆ ಅವನು ಅಂಥ ಮಾರ್ಗವನ್ನು ಸ್ವಲ್ಪ ಯೋಚಿಸಿ ಅವಲಂಬಿಸಿದ್ದರೆ ಅವು ಇನ್ನೆಂಥ ನಾಟಕಗಳಾಗುತ್ತಿದ್ದವೋ ಎಂದು ನಮಗೆ ಕೆಲವು ವೇಳೆ ತೋರುತ್ತದೆ. ಗೀಕರ ನಾಟಕಗಳೊಂದೆರಡನ್ನು ಭಾಷಾಂತರದಲ್ಲಿ ನೋಡಿದರೆ ಈ ವಾಂಛಿಯು ಮತ್ತಷ್ಟು ಹೆಚ್ಚುವುದು, ಷೇಕ್ಸ್‌ಪಿಯರ ಕವಿಯಲ್ಲಿ ಕಾಣುವ ಆವೇಶಕ್ಕಿಂತ ಕಡಿಮೆಯಾದ ಆವೇಶದಿಂದ ಅವನ