ಸಾಹಿತ್ಯ. 111 ನಾಟಕಗಳಿಗಿಂತ ಹೆಚ್ಚಾದ ರಚನಾಶುದ್ದಿ ರಸಸಾಮಂಜಸ್ಯ ಉಳ ನಾಟಕಗಳನ್ನು ಗ್ರೀಕರ ಕವಿಗಳು ಬರೆದಿದಾರೆ, ನಮ್ಮ ಮಹಾಕವಿ ಕಾಳಿದಾಸನ ಶಾಕುಂತಲವನ್ನು ಓದಿದರೂ ಷೇಕ್ಸ್‌ಪಿಯರ ಯಾವ ನಾಟಕದಲ್ಲಿ ಇಲ್ಲದ ರಚನಾಶುದ್ದಿಯ ರಸಸಾಮಂಜಸ್ಯವೂ ಕಾಣು ವುವು, ಉಳಿದ ಕವಿಗಳು ಒಂದೊಂದು ಸಲ ಏರುತ್ತಿದ್ದ ಆವೇಶದ ಅಂತಸ್ತಿನಲ್ಲಿ ಷೇಕ್ಸ್‌ಪಿಯರ ಕವಿಯು ಸರ್ವದಾ ಇರುತ್ತಿದ್ದಂತೆ ಅವನ ಕೊನೆಯ ನಾಟಕಗಳಿಂದ ತಿಳಿಯುತ್ತದೆ. ಆ ಅಂತಸ್ತು, ಉಳಿದವರಿಗೆ ಯಾತ್ರಾಸ್ನಾನ, ಅವನಿಗೆ ಅದೇ ಊರು, ಇತರರಿಗೆ ಪ್ರಯತ್ನ ಪೂರ್ವಕವಾಗಿ ಬರುತ್ತಿದ್ದ ಕಲಾಕೌಶಲವೂ ಚರನಿರೂಪಣವೂ ಅವನಿಗೆ ಸ್ವಭಾವದ ಸಾಮಾನ್ಯ ಸ್ಮೃತಿಯಲ್ಲಿ ಬರುತ್ತಿತ್ತು, ಈಗಲೂ ಇತರ ನಾಟಕಗಳು ಅವನ ನಾಟಕಕ್ಕಿಂತ ಚೆನ್ನಾಗಿ ಕಂಡರೂ ಅದರ ಕಾರಣವು ಅವನ ಕೆಲಸದಲ್ಲಿ ಪ್ರಯತ್ನ ವು ಕಾಣದೆ ಇತರರ ಕೆಲಸದಲ್ಲಿ ಕಾಣುವುದೇ. ಬೆವರದ ಬಲಿಷ್ಟನು ಮಾಡುವ ಕೆಲಸವು ಬೆವರುವ ದುರ್ಬಲನ ಕೆಲಸ ಕ್ಕಿಂತ ಕಡಿಮೆಯಲ್ಲದಿದ್ದರೂ ಬೆವರುವವನ ಕೆಲಸವೇ ಹೆಚ್ಚೆ_ಂಬಂತೆ ನಮಗೆ ತೋರುವುದು, ಹೀಗೆ ಷೇಕ್ಸ್‌ಪಿಯರ ಕಾವ್ಯದಲ್ಲಿ ಯತ್ನ ವು ಕಣ್ಣಿಗೆ ಬೀಳದೆ ಇರುವುದರಿಂದ ಕೆಲಸ ಎಷ್ಟು ಉನ್ನತವಾದದ್ದೆಂದು ನಮಗೆ ತಿಳಿಯುವುದಿಲ್ಲ. ಅವನ ಸಾಮಾನ್ಯ ಕವನವು ಇತರ ಉನ್ನತ ಕವನಕ್ಕಿಂತ ಎತ್ತರದಲ್ಲಿರತಕ್ಕದ್ದು, ಇಂಥ ಕವಿಯು ಪ್ರಯತ್ನ ಪೂರ್ವಕ ವಾರ ರಸಸಾಮಂಜಸ್ಯಕ್ಕೆ ಮನಸ್ಸನ್ನು ಕೊಟ್ಟಿದ್ದರೆ ಇನ್ನೂ ಹೇಗೆ ಬರೆಯಬಹುದಾಗಿತ್ತೊ ಎಂದು ತೋರುವುದು ತಪ್ಪಲ್ಲ. ಇಂಥ ಮಹಾಕವಿಯ ಸಿದ್ದಾಂತಮಾರ್ಗವನ್ನು ಅವಲಂಬಿಸಬೇಕಾದ ಕಡೆ ಸ್ವತಂತ್ರವಾರ್ಗವನ್ನು ಅವಲಂಬಿಸಿದ್ದರಿಂದ ಕಾವ್ಯದಲ್ಲಿ ಸೊಗಸು ಕಡಿಮೆಯಾಯಿತೆಂದರೆ ಸಾಮಾನ್ಯರು ಈ ವಿಷಯದಲ್ಲಿ ಎಷ್ಟು ಜಾಗ್ರತೆ ಯಿಂದ ನಡೆದುಕೊಳ್ಳಬೇಕು ಎಂಬುದನ್ನು ಹೇಳಬೇಕಾದದ್ದಿಲ್ಲ. ... ೨೬, ಫಲಿತಾಂಶ ವಿಷಯವೂ ಸಾಹಿತ್ಯದ್ದಾಗಿ ರೂಪೂ ಸಾಹಿತ್ಯದ ರೂಪಾಗಿರುವ. ಗ್ರಂಥದ ವಿಚಾರದಲ್ಲಿ ಇದುವರೆಗೆ ಹೇಳಿರುವ ಮಾತೆಲ್ಲ ಸಲ್ಲುವುದು.
ಪುಟ:ಸಾಹಿತ್ಯ1924.djvu/೧೨೪
ಗೋಚರ