112 ಸಾಹಿತ್ಯ. ಗ್ರಂಥವು ಒಳ್ಳೆಯದಾಗಬೇಕಾದರೆ ಅದು ಕವಿಯ ಜೀವನದ ನಿಜವಾದ ಅನುಭವಕೆ ಅಥವಾ ತಿಳುವಳಿಕೆಗೆ ಸಂಬಂಧಪಟು ದಾಗಿರಬೇಕು, ಅವನ ಜೀವನವು ಒಳ್ಳೆಯದಾಗಿದ್ದು ಅವನ ಜನಾಂಗದ ಜೀವನದಲ್ಲಿ' ಯೋಗ್ಯ ವಾದ ಸ್ಥಾನವನ್ನು ಉಳ್ಳುದಾಗಿ ಇರಬೇಕು, ಹೀಗಿದ್ದಲ್ಲಿ ಅದರ ಸಾಮಗ್ರಿಯು ಒಳ್ಳೆಯದಾಗಿರಬಹುದು, ಕಾವ್ಯದ ರೂಪವು ಸಾಮ ಗಿಗೆ ತಕ್ಕುದಾಗಿರಬೇಕು. ಪದ್ಧತಿಯು ವಿಷಯರೂಪಗಳ ಮೇರೆ ಯನ್ನು ಅತಿಕ್ರಮಿಸಬಾರದು, ವ್ಯಂಜಕಕಾವ್ಯವಾದರೂ ಇತರ ಕಾವ್ಯ ವಾದರೂ ಹೆಚ್ಚು ಮಾತಿಲ್ಲದೆ ಮಿತವಾದ ಮಾತಿನಿಂದ ತುಂಬಿದಭಾವ ವನ್ನು ತಿಳಿಸಬೇಕು, ಮಿತವಾದ ಮಾತಿನಿಂದಲಾದರೂ ಭಾವವು ಸ್ಪಷ್ಟ ವಾಗಿರಬೇಕು, ಹೀಗೆ ಬರೆದ ಗ್ರಂಥವು ಒಳ್ಳೆಯ ಗ್ರಂಥ. ಎಂದರೆ ಈ ಶಾಸನವನ್ನೆಲ್ಲಾ ಓದುವ ನಾವು ಬರೆಯುವ ಇನ್ನೊಬ್ಬನಲ್ಲಿ ಮಾಡ ಬೇಕೆಂದಲ್ಲ, ಬರೆಯುವವನೇ ಈ ವಿಷಯಗಳನ್ನು ಚೆನ್ನಾಗಿ ಯೋಚಿಸ ಬೇಕು, ಯೋಚಿಸಿ ಬರೆದಲ್ಲಿ ಅಂಥ ಒಳ್ಳೆಯ ಜೀವನದ ಫಲವಾದ ಕಾವ್ಯವು ಈ ಯೋಚನೆಯಿಂದೆಲ್ಲ ಸರಿಷ್ಕಾರವಾದ ರೂಪಮಾರ್ಗಗಳಿಂದ ಉತ್ತಮವಾದ ಕಾವ್ಯವಾಗಿ ಸಾಹಿತ್ಯದ ಮುಖ್ಯಲಕ್ಷ್ಯವಾದ ಸೌಂದರ್ಯ ವನ್ನು ಮಾನವನಿಗೆ ಜಯಿಸಿಕೊಡುವುದು, ಹೀಗೆ ಮಾಡುವುದರಲ್ಲಿ ಕಾವ್ಯವು ಕವಿಯ ಜನಕ್ಕ ಪ್ರಾಯಶಃ ಇತರ ಮಾನವರಿಗೂ ನೀತಿ ಯನ್ನೂ ಸಾಧಿಸಿಕೊಡುವುದು, ಅಂಥ ಕಾವ್ಯವು ತನ್ನ ಸಾಹಿತ್ಯದಲ್ಲಿ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಸಾಹಿತ್ಯದ ಮಧ್ಯೆ ಒಂದು ಉನ್ನತ ಸ್ಥಾನಕ್ಕೆ ಅಧಿಕಾರಿಯಾಗುವುದು, ಮಾನವವರ್ಗವು ತನ್ನ ಜೀವನ ದಲ್ಲಿ ಎಡೆಬಿಡದೆ ನಿರ್ಮಿಸುತ್ತಿರುವ ದೇವದೇವನ ವ್ಯಕ್ತರೂಪವಾದ ಚರಿತ್ರಸೌಧದ ಕಟ್ಟಡದಲ್ಲಿ ಒಂದು ಸ್ವಂಭವಾಗಿ ನೆಲೆಸಿ ಆ ಸೌಧವು ಭದ್ರವಾಗಿರುವುದಕ್ಕೆ ತಾನೂ ಕಾರಣವಾಗುವುದು. - ಇದು ಉತ್ತಮ ಕಾವ್ಯವಿರಬೇಕಾದ ರೀತಿ, ಕಾವ್ಯವನ್ನು ಬರೆಯು ವವನು ಪ್ರಾಯಶಃ ಇಂತ ಆಸೆಯನ್ನು ಇಟ್ಟುಕೊಂಡು ಬರೆಯಬೇಕು. ಇಂಥ ಕಾವ್ಯವೇ ಓದುವವನಿಗೆ ಸಿಕ್ಕಿದರೆ ಅದೂ ಒಳ್ಳೆಯದೆ, ಆದರೆ ಇಷ್ಟು ಉತ್ತಮವಾಗಿರಬೇಕಾದರೆ ಇದುವರೆಗೆ ಬಹಳ ಕಾವ್ಯ ಇರ
ಪುಟ:ಸಾಹಿತ್ಯ1924.djvu/೧೨೫
ಗೋಚರ