114 ಸಾಹಿತ್ಯ, ಗ್ರಂಥ ಒಂದರಿಂದ ಸುಖವನ್ನು ಪಡೆಯುವ ಶಕ್ತಿಯನ್ನು ಸಂಪಾದಿಸು ವುದೇ ಈ ಉಪಯೋಗವು, ಪ್ರಪಂಚದಲ್ಲಿರುವ ಸೊಗಸನ್ನೆಲ್ಲ ಬಿಟ್ಟು ಚಂದ್ರನಲ್ಲಿರುವ ಕಳಂಕವನ್ನು ನೋಡುವುದಕ್ಕೆ ಸುಲೋಚನವನ್ನು ತೆಗೆದುಕೊಳ್ಳುವವರುಂಟೆ ? ಹೀಗೆ ಗ್ರಂಥಕರ್ತರು ಈ ವಿಷಯವನ್ನು ಯೋಚಿಸಿ ಬರೆದು ಪಾಠಕರು ಈ ವಿಷಯವನ್ನು ಯೋಚಿಸಿ ಓದಿದರೆ ಬರಬರುತ್ತ ಉತ್ತಮವಾದ ಗ್ರಂಥಗಳ ಸಂಖ್ಯೆಯು ಹೆಚ್ಚುವುದರಲ್ಲಿ ಸಂದೇಹವಿಲ್ಲ. ಸಾಹಿತ್ಯವು ಸ್ವರೂಪದಲ್ಲಿ ಜ್ಯೋತಿರ್ಮಯಮೂರ್ತಿ, ಅದಕ್ಕೆ ಸೇರುವ ಒಂದೊಂದು ನಿಜವಾದ ಮಾತೂ ಒಂದೊಂದು ನಕ್ಷ ತ್ರದ ಬೆಳಕನ್ನೋ ಒಂದೊಂದು ದೀಪದ ಬೆಳಕನ್ನೂ ಅದರ ಪ್ರಭೆಗೆ ಸೇರಿ ಸುವುದು, ಬಂದದ್ದೆಲ್ಲ ಬೆಳಕೇ. ಅಲ್ಲದೆ ದೀಪದ ಬೆಳಕುನಕ್ಷತ್ರದ ಬೆಳಕಿಗಿಂತ ಕಡಿಮೆಯದಾದರೂ ಅದಕ್ಕಿಂತ ಒಂದು ವಿಧದಲ್ಲಿ ಹೆಚ್ಚು ಅನುಕೂಲವಾ ದದ್ದು, ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿಕೊಳ್ಳಬಹುದು ; ನಕ್ಷತ್ರದಿಂದ ಇನ್ನೊಂದು ನಕ್ಷತ್ರವನ್ನು ಹಚ್ಚಿಕೊಳ್ಳುವ ಆಸೆ ಇಲ್ಲ. ಈ ರೀತಿಯಲ್ಲಿ ಕವಿಯಿಂದ ಕವಿಯು ಕಾವ್ಯದ ವಿಚಾರವನ್ನು ಕಲಿತು ಬರೆಯುವುದರಿಂದಲೂ ತಲೆಮಾರಿನಿಂದ ತಲೆಮಾರಿಗೆ ಜನ ಹೆಚ್ಚು ತಿಳಿವಿ ನಿಂದ ಗ್ರಂಥವನ್ನು ಪಠಿಸುವುದರಿಂದಲೂ ಜನಾಂಗವು ಏಳೆಗೆ ಬಂದು ಸಾಹಿತ್ಯವು ಮಾನವವರ್ಗವೆಲ್ಲದರ ಯಾವ ಒಂದು ಅನ್ವೇಷಣದ ಭಾಗ ವೆಂದು ಹೇಳಿದೆಯೋ ಆ ಅನ್ವೇಷಣದಲ್ಲಿ ಮುಂದುವರಿದು ತನ್ನ ಕರ್ತವ್ಯ ವನ್ನು ತಾನು ನೆರವೇರಿಸುವುದಕ್ಕೆ ದೃಢಪ್ರಯತ್ನವನ್ನು ಮಾಡಿ ದಂತಾಗುವುದು. VI $ ೨೭, ಉಪಸಂಹಾರ. ಈ ಉಪನ್ಯಾಸವನ್ನು ಇಲ್ಲಿಗೆ ಮುಗಿಸಬಹುದು. ಈಗ ನಮ್ಮ ಜನಾಂಗದ ಜೀವನದಲ್ಲಿ ಒಂದು ಹೊಸ ಯುಗವು ಆರಂಭವಾಗಿದೆ. ನಮ್ಮ ಸಾಹಿತ್ಯದಲ್ಲಿಯ ಇದು ಒಂದು ಹೊಸಯುಗದ ಆರಂಭ, ಈ ಸಂದರ್ಭದಲ್ಲಿ ಸಾಹಿತ್ಯದ ವಿಷಯವಾಗಿ ಈ ಉಪನ್ಯಾಸದ ಮೊದಲಲ್ಲಿ ಹೇಳಿದಂತೆ ಕೆಲವು ಮೂಲ ತತ್ವಗಳ ತಿಳಿವು ಜನಾಂಗದಲ್ಲಿ ಹರಡಬೇಕಾ
ಪುಟ:ಸಾಹಿತ್ಯ1924.djvu/೧೨೭
ಗೋಚರ