ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ ಆರೋ ಪಿಸಲ್ಪಟ್ಟಿರುವ ಉತ್ತಮ ಗ್ರಂಥಗಳು ಕೆಲವು ಅವರವು ಅಲ್ಲವೆಂದು ಹೇಳುವುದುಂಟು. ಅವುಗಳನ್ನು ಬರೆದವರು ತಮ್ಮ ಖ್ಯಾತಿಗಾಗಿ ಬರೆದರಾದರೆ • ತಾವು ಬರೆದ ಕಾವ್ಯಗಳಿಗೆ ಇತರ ಪ್ರಸಿದ್ಧ ಕವಿಗಳ 'ಹಸ ರನ್ನು ಏಕೆ ಇರಿಸಿದರು ? ಹೀಗೆ ಮಾಡುವುದು ಖ್ಯಾತಿಗಾಗಿ ಗ್ರಂಥ ನಿರ್ಮಾಣ ಮಾಡುವವರ ನಡತೆ ಅಲ್ಲ. ಹೇಳುವದಾದರೆ, ತನ್ನ ಮಗು ಎಲ್ಲಿಯಾದರೂ ಸುಖವಾಗಿ ಬಾಳಿದರೆ ಸಾಕು, ತನ್ನದು ಎನ್ನ ದಿದ್ದರೆ ಹೋಗಲಿ ಎನ್ನು ವ ತಾಯ ನಡತೆಯಂತಿರುವುದು, ಅಲ್ಲದೆ ಗ್ರಂಥ ವನ್ನು ಬರೆದು ಖ್ಯಾತಿಯನ್ನು ಪಡೆಯಬಹುದಾದರೂ ಹೆಸರು ಕುಲ ಗೋವುಗಳನ್ನು ಹಾಕದೆ ಸಣ್ಣ ಹಾಡುಗಳನ್ನು ಒರೆದು ಜನರಲ್ಲಿ ಪ್ರಚುರಗೊಳಿಸಿದವರು ಖ್ಯಾತಿಗಾಗಿ ಹೀಗೆ ಮಾಡಿದರೆನ್ನಲಾಗುವುದಿಲ್ಲ. ಮುಖ್ಯವಾಗಿ ಉತ್ತಮ ಕಾವ್ಯಗಳನ್ನು ಬರೆಯುವವರು ಬಹುಮಟ್ಟಿಗೆ ಸ್ವಭಾವವಾಗಿಯೂ ಕವನವಾಡಬೇಕಾಗಿ ಬರುವುದರಿಂದ ಮಾಡುತ್ತಾರೆ ಎಂದು ಹೇಳಬೇಕು, ಮನುಷ್ಯನಲ್ಲಿ ಕಲ್ಪನಾಶಕ್ತಿ ಒಂದು ಉಂಟು. ಇದು ಹಲವು ವಿಧದಲ್ಲಿ ಹೊರಹೊಮ್ಮುತ್ತದೆ. ಈ ಕಲ್ಪನಾಶಕ್ತಿಯು ರಾಗಗಳ ಭಾವಗಳನ್ನು ವ್ಯಕ್ತಪಡಿಸುವುದಕ್ಕೆ ಉಪಯೋಗವಾದಾಗ ಕುಶಲಕಲೆಗಳನ್ನು ಉಂಟುಮಾಡುವದು. ಇವ್ರಗಳಲ್ಲಿ ಸಾಹಿತ್ಯ ವ ಒಂದು ಕಲ್ಲಿನಲ್ಲಿ ಕಡೆದಾಗ ಶಿಲ್ಪವಾಗತಕ್ಕದ್ದೇ ಚಿತ್ರಿಸಿದಾಗ ಚಿತ್ರವೂ ಆಗಿ ನುಡಿದಾಗ ಸಾಹಿತ್ಯವಾಗುವುದು, ಎಲ್ಲರಲ್ಲಿ ಕೊಂಚವಾ ದರೂ ಇರುವ ಈ ಕಲ್ಪನಾಶಕ್ತಿಯು ಕೆಲವರಲ್ಲಿ ಅಧಿಕವಾಗಿರು ವದು. ಈ ಶಕ್ತಿಯ ಆಧಿಕ್ಯದಿಂದ ಭಾವಗಳು ಅಧಿಕವಾಗಿ ಗುಂಥರಚನೆಯು ಕೇವಲ ಆವಶ್ಯಕವಾಗುವುದು, ಹೀಗಾದಾಗ ' ಗ್ರಂಥರಚನೆಯ ಸಾಧ್ಯವೂ ಆಗುವುದು, ಅದು ಕವಿಯ ಆವೇಶ, ಗ್ರಂಥವನ್ನು ರಚಿಸುವವನು ಈ ಕಾವ್ಯಾವೇಶವನ್ನು ವ್ಯಕ್ತಗೊಳಿಸಿ ಅನುಭವಿಸುವ ದಕ್ಕಾಗಿ ಗ್ರಂಥವನ್ನು ರಚಿಸುವನು. ಅದನ್ನು ಪಡೆಯಲು ಗ್ರಂಥಕರ್ತನು ಮಾಡಬೇಕಾದದ್ದು. ಕಾವ್ಯವನ್ನು ಬರೆಯುವುದು ಈ ಆದೇಶದ ದೆಸೆಯಿಂದ ಎಂಬುದೂ ಸಾಹಿತ್ಯವು ಬರಬೇಕಾದರೆ ಈ ಆವೇಶವು ಬರಬೇಕು ಎಂಬುದೂ ಚೆನ್ನಾಗಿ