ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ, ತಿಳಿಯಬೇಕಾದ ವಿಷಯ. ಇದನ್ನು ಕೇಳಿದವರು ಸಾಹಿತ್ಯವು ಆವೇಶ ದಿಂದ ಬರುವುದಾದರೆ ನಾವು ಇನ್ನು ಏನು ಮಾಡುವುದಕ್ಕಾಗುತ್ತದೆ ಆವೇ ಶಬರುವುದಕ್ಕೆ ಕಾಯಬೇಕು ಎನ್ನ ಬಹುದು, ಆವೇಶಬರುವುದಕ್ಕೆ ಕಾಯಬೇಕೆನ್ನು ವುದು ಸರಿಯೆ : ಆದರೆ ಆ ಆವೇಶ ನಮಗೆ ಬರುವುದಕ್ಕೆ ತಕ್ಕವರಾಗುವುದು ನಾವು ಮಾಡಬೇಕಾದ ಕೆಲಸ. ಈ ಆವೇಶವು ಅದನ್ನು ಪಡೆಯುವುದಕ್ಕೆ ಯೋಗ್ಯರಾದವರಿಗೆ ಮಾತ್ರ ಬರುತ್ತದೆ. ನಮ್ಮ ಕನ್ನಡದ ಆನಂದರಾಮಾಯಣದ ಕವಿಯು ಸ್ನಾನಮಾಡಿ ದೇವಾ ಲಯಕ್ಕೆ ಬಂದು ಕೊಡುತ್ತಿದ್ದನಂತೆ ; ಒಡನೆ ಸರಸ್ವತಿ ಆವಾಹನವಾ ದಂತೆ ಅವನ ಬಾಯಿಂದ ಪದ್ಯಗಳು ಬರುವುವ, ಆ ಸ್ಥಾನವನ್ನು ವುದು ಕೇವಲ ಬಾಹ್ಯವಾದ ಒಂದು ಚಿಹ್ನೆ ಮಾತ್ರ ; ಅದರೊಂದಿಗೆ ಕವಿಯ ಮನಸ್ಕ ಪರಿಶುದ್ಧವಾಗಿ ಆವೇಶಕ್ಕೆ ತಕ್ಕುದಾಗುತ್ತಿತ್ತು, ಇದನ್ನೇ ನಮ್ಮ ಕವಿವರರಾದ ಠಾಕೂರರ, “ ನೀನು ಗಾನದಿಂದ ತುಂಬುವ ದಕ್ಕೆ ತಕ್ಕ ಒದುರ ಕೊಳಲೆಂಬಂತೆ ನನ್ನ ಜೀವನವನ್ನು ನಾನು ಸಮವಾ iNಯ ಸರಳವಾಗಿಯೂ ಮಾಡುವಂತೆ ನನಗೆ ಅನುಗ್ರಹಮಾಡು.” ಎಂದು ಹೇಳಿರುವುದು, ಕವಿಯು ಕವನವೆಲ್ಲದರ ಮಲನಾದ ಭಗವಂತನ ಕೇವಲ ಒಂದು ಕೊಳಲು ಮಾತ್ರ ; ಗಾನಕ್ಕೆ ಅವನು ಅಧಿಕಾರಿಯಲ್ಲ ; ಆದರೂ ಆ ಗಾನಕ್ಕೆ ತಕ್ಕ ಕೊಳಲಾಗಲು ಅವನು ಪ್ರಯತ್ನ ಮಾಡಬೇಕು. - ಇದು ಗ್ರಂಥಕರ್ತನನ್ನು ಮಾತ್ರವೇ ಸೇರಿದ್ದಲ್ಲ. ಉತ್ತಮ ಕಾವ್ಯವನ್ನು ರಚಿಸುವುದಕ್ಕೆ ತಕ್ಕವನಾಗುವುದು ಕವಿ ಯು ಒಬ್ಬನ ಕೆಲಸ ಮಾತ್ರವೂ ಅಲ್ಲ; ಅವನ ಜನಾಂಗದಲ್ಲಿ ಅದನ್ನು ಸಾಧ್ಯವನ್ನಾಗಿ ಮಾಡುವ ಬುದ್ದಿಯ ಚಟುವಟಿಕೆ ಇರಬೇಕು, ಕವಿಯ ಆವೇಶವು ಅವನ ಬುದ್ದಿ ರಾಗಗಳನ್ನ ನುಸರಿಸುವುದು ; ಅವನ ಬುದ್ದಿ ರಾಗ ಗಳು ಜನಾಂಗದ ಬುದ್ದಿರಾಗಗಳಿಗೆ ಅನುಗುಣವಾಗಿ ಇರುವುವು, ಜನಾಂ ಗವು ತನ್ನ ಕಲ್ಪನಾಶಕ್ತಿಯನ್ನು ವೃದ್ಧಿಗೊಳಿಸಿಕೊಂಡಹಾಗೆಲ್ಲಾ ಅದು ಜನಗಳಲ್ಲಿ ಕವನಕ್ಕೂ ಉತ್ತಮ ಸಾಹಿತ್ಯವನ್ನು ಬರೆಯುವುದಕ್ಕೂ ದಾರಿಯಾಗುತ್ತದೆ. ಒಂದು ಪುಸ್ತಕವನ್ನು ಬರೆಯುವುದು ಒಂದು ಅವಸ್ಥೆಯಲ್ಲಿ ಒಬ್ಬ ಮನುಷ್ಯನಿಗೆ ಆವಶ್ಯಕ ಕರ್ಮವಾಗುವುದು. ಆದರೆ