ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ. ಮುಂದೆ ವಿಚಾರಿಸೋಣ, ಆದರೆ ಈ ಸ್ವಲ್ಪಮಟ್ಟಿಗೆ ಹೊರತು ಉಳಿದ ಹಾಗೆ ಬಹಳಮಟ್ಟಿಗೆ ಈ ಮಾತು ಸರಿಯಲ್ಲ. ಜನಾಂಗದಲ್ಲಿ ಮೊದ ಲಿಂದ ಬೆಳೆದು ಉಂಟಾಗಿರುವ ಗುಣಗಳು ರಾಜ್ಯ ಚರಿತ್ರೆಯಲ್ಲಿ ಒರುವ ಸಂದರ್ಭಗಳಲ್ಲಿಯ ಸಾಹಿತ್ಯದಲ್ಲಿಯೂ ಫಲವನ್ನು ತೋರುವವು. `ಚರಿತ್ರೆಯ ಸಾಹಿತ್ಯವೂ ಈ ಸಾಮಾನ್ಯ ಕಾರಣದ ಫಲವೇ ಹೊರತು ಒಂದರ ಫಲ ಒಂದು ಅಲ್ಲ. ಇದನ್ನು ನಾವು ತಿಳಿಯದೇ ಇದ್ದರೆ. ರಾಜ್ಯದ ಚರಿತ್ರೆಯು ಉದ್ಯಮಯುಕ್ತವಾದರಲ್ಲದೆ ಸಾಹಿತ್ಯಕ್ಕೆ ಮುಂದು ವರಿಯಲು ದಾರಿಯಿಲ್ಲವೆಂದು ಅಭಿಪ್ರಾಯ ಬರಬಹುದು, ಒಳ್ಳೆಯ ಸಾಹಿತ್ಯವನ್ನು ಬರೆಯಬೇಕಾದಾಗಲೆಲ್ಲ ಸ್ಥಾನಿಷ್ ಆರ್ಮೇಡಾವನ್ನು ಎಲ್ಲಿಂದ ತರುವುದು ? ಅಥವಾ ಇಂಗ್ಲಿಷ ಜನಗಳಿಗೂ ಅವರಂತಹ ಪ್ರಬಲ ರಾದ ಜನಾಂಗಗಳಿಗೂ ಆ ರೀತಿಯ ಜೀವನವು ಸಾಧ್ಯವಾದರೂ ಆ ಶಕ್ತಿ ಯಿಲ್ಲದವರ ಪಾಡೇನು ? ಅವರಿಗೆ ಉತ್ತಮ ಸಾಹಿತ್ಯವು ಸಾಧ್ಯವಲ್ಲವೆ ? ಹಾಗೂ ಈ ದೊಡ್ಡ ಯುದ್ದವಾಯಿತಲ್ಲ ; ಷೇಕ್ಸ್‌ಪಿಯರು ಇನ್ನೂ ಬೂನು ಬಂದನೆ? ಇಲ್ಲ ಬರುವನೆ ? ಯೋಚಿಸಿ ನೋಡಿದೆವಾದರೆ ಸಾಹಿ ತ್ಯವು ಉತ್ತಮವಾಗುವುದಕ್ಕೆ ರಾಜ್ಯದ ಚರಿತ್ರೆಯ ಪರಾಕ್ರಮದಿಂ ದಲೇ ಆಗಲಿ, ಇತರ ವ್ಯಕ್ತವಾದ ಲಕ್ಷಣದಿಂದಲೇ ಆಗಲಿ ಕೂಡಿರಬೇಕಾ ದದ್ದಿಲ್ಲವೆಂದು ತೋರುವುದು, ಎಲ್ಲಾ ಉನ್ನತಿಗೂ ಮಲವಾದ ಭಾವ ಗಳ ಉನ್ನತಿಯು ಜನಾಂಗದಲ್ಲಿರಬೇಕು, ಈ ಭಾವೋನ್ನತಿಯು ಆಯಾ ಸಮಯದಲ್ಲಿ ಆವಶ್ಯಕವಾದರೆ ಆರ್ಮೆಡಾವನ್ನು ಜಯಿಸುವುದ ರಲ್ಲಿ ಉಪಯೋಗಿಸಲ್ಪಡುವ್ರದು ; ಅದಿಲ್ಲದಿದ್ದರೆ ತನ್ನ ಷ್ಟಕ್ಕೆ ತಾನು ಬೆಳ ಗುತ್ತಿರುವುದು, ಭಾವಗಳು ಸ್ವಭಾವದಲ್ಲಿ ಅಗ್ನಿ ಜ್ವಾಲೆಯಂತೆ : ಅವಕ್ಕೆ ಆವಶ್ಯಕವಿದ್ದಲ್ಲಿ ಕಾಡನ್ನು ಸುಡುವ ಅಗ್ನಿ ಯಂತೆ ದೊಡ್ಡ ಆಕಾರದಿಂದ ಚರಿತ್ರೆಯಲ್ಲಿ ಕಾಣುವುವು ; ಇಲ್ಲದಿದ್ದರೆ ಗಾಳಿಯಿಲ್ಲದೆಡೆಯಲ್ಲಿ ಸೌಮ್ಯ ವಾಗಿ ನಿಶ್ಚಲವಾಗಿ ಉರಿಯುವ ದೀಪದಂತೆ ಇರುವುವು. ಹೇಗಾದರೂ ಅವುಗಳ ಸ್ವಭಾವವು ಒಂದೇ, ಅವು ಇರುವವಾದರೆ ರಾಜ್ಯ ಚರಿತ್ರೆಯಲ್ಲಿ ಏನೂ ವಿಶೇಷವಿಲ್ಲದಿದ್ದರೂ ಸಾಹಿತ್ಯದಲ್ಲಿ ಉತ್ತಮವಾದ ಕೆಲಸ ನಡೆಯುವುದು ಸಾಧ್ಯವ.