ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ. ನಮಗೆ ತಿಳಿಯದು ; ನಮ್ಮಲ್ಲಿ ಅನೇಕರಿಗೆ ಕೊಳ್ಳದೆ ಹೂವಿಲ್ಲ, ಕೊಳ್ಳಲು ಹಣವಿಲ್ಲ. ಭೈಂಗವ ನಂದು ಹಾರುವುದು ; ಅದು ನಮಗೆ ಬೇಕಿಲ್ಲ. ಉಳಿದ ವಿಷಯವನ್ನೂ ನಮ್ಮ ಸಾಮಾನ್ಯ ಜೀವನವು ಅರಿಯದು. ಅಂತೂ ವಸಂತಾಗಮದ ಅತ್ಯಧಿಕವಾದ ಆನಂದವು ನಮ್ಮ ಪಾಡಿಗೆ ಇಲ್ಲವಾಗಿದೆ. ಈ ಪದ್ಯವನ್ನು ಬರೆದವನಿಗೆ ನಮಗೆ ಇರುವ ಹಾಗೆ ಇದ್ದಿರಲಾರದು, ಅವನ ಮನಸ್ಸು ಸರ್ವದಾ ಸ್ಟುರವಾಗಿದ್ದಿರಬೇಕು. ಅವನ ಸರ್ವೆಂದ್ರಿಯಗಳೂ ಈ ಪ್ರಪಂಚದ ವಿವಿಧ ಸೌಂದರ್ಯವನ್ನು ತಿಳಿಯುತ್ತಿದ್ದಿರಬೇಕು, ಈಗ ಕಾವ್ಯವಿಲ್ಲವೆಂದು ಪರಿತಾಪಪಡುವೆವು. ಕಾವ್ಯವು ಮುಖ್ಯವಲ್ಲ ; ಅದರ ಮೂಲವಾದ ಬುದ್ದಿ ಸೂರ್ತಿಯ ರಾಗಸ್ಪೂರ್ತಿಯ ಮುಖ್ಯ. ಈ ಸರ್ತಿಗಳು ಇದ್ದರೆ ಕಾವ್ಯ ಗಳು ತಾನಾಗಿ ಬರುವವು. ಕವಿಸಮಯದ ಪ್ರಸಾರವು ಬುದ್ದಿ ಸ್ಫೂರ್ತಿಗೆ ಸಾಧನ. ಕವಿಯ ಹಾಗೆ ಬರೆದ ಮಾತ್ರಕ್ಕೆ ಅವನು ಅದನ್ನೆಲ್ಲ ಅನುಭವ ಮಾಡಿದನೆಂದು ಹೇಳಲಾಗುವದೆ, ಕವಿಸಮಯವನ್ನ ನುಸರಿಸಿ ಒರೆದಿರ ಬಹುದಲ್ಲ, ಎಂದು ಇದಕ್ಕೆ ಕೆಲವರು ಹೇಳಬಹುದು, ಹಾಗೆಯೇ ಎನ್ನೋಣ. ಆದರೆ ಅದರಿಂದ ಜನರ ಬುದ್ದಿನ್ನೂರ್ತಿ ಆವಶ್ಯಕವಲ್ಲವೆಂದು ಹೇಳಿದ ಹಾಗಾಗಲಿಲ್ಲ. ಕವಿಸಮಯವು ಅನೇಕರಿಗೆ ತಿಳಿದ ಉತ್ತಮ ವಿಷಯದ ಪ್ರತಿಪಾದನೆ, ಒಂದು ತಲೆಮಾರಿನ ನೂತನ ಭಾವವ ಇನ್ನೊ೦ ದು ತಲೆಮಾರಿನ ಕವಿಸಮಯವಾಗುವದು, ಕಎಸಮಯವನ್ನು ವದು ಹೆಚ್ಚಿದಷ್ಟೂ ಜನರಲ್ಲಿ ರಸಿಕತೆಯ ಸಾಮi)ಹೆಚ್ಚಿತೆಂದು ಹೇಳಬಹುದು. ಕ್ರಮೇಣ ಸಾಮಾನ್ಯನಿಗೆ ಕವಿಸಮಯದ ವಾಡಿಕೆಯಾದ ಮಾತುಗಳ ಅರ್ಥವು ಮುಖ್ಯವಾಗದೆ ಹೋi ಅದರ ಸೊಗಸು ತಿಳಿಯದೆ, ಹಾಲು ಹ್ಯಾಗಿದೆ ಎಂದರೆ ಕೊಕ್ಕರೆಯಹಾಗಿದೆ ಎಂದು, ಕೊಕ್ಕರೆ ಹ್ಯಾಗಿದೆ ಎಂದರೆ ಡೊಂಕಾಗಿದೆ ಎಂದಂತೆ, ಭಾವಸಾಮಂಜಸ್ಯವು ಕೆಟ್ಟು ಕಾವ್ಯ ಜ್ಞಾನವು ವಕ್ರವಾಗಿ ಹೋಗುವುದು ಉಂಟು. ಆದರೆ ಪ್ರಾಯಶಃ ಕವಿ ಯಾಗಿ ಗ್ರಂಥವನ್ನು ಬರೆದವನು ಭಾವವನ್ನು ಗ್ರಹಿಸಿಯೇ ಬರೆಯುವನು. ಇಲ್ಲದಿದ್ದರೆ ಬರೆಯುವುದು ಸಾಧ್ಯವಲ್ಲ ; ಕಾವ್ಯದಲ್ಲಿ ಈ ಧಾಟಿಯ ಈ