ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಸಾಹಿತ್ಯ. ಇದು ಹೇಗೆ ಆದರೂ ಮೊದಲು ಹೇಳಿದಂತೆ ಭಾವವು ಜನಾಂಗದ ಜೀವನದಲ್ಲಿ ಐಕ್ಯವಾಗಿದ್ದು ಸಾಹಿತ್ಯದಲ್ಲಿ ಬಂದಿರುವುದಾದರೆ ಭಾವದ ಮೂಲವು ಯಾವುದಾದರೂ ಸಾಹಿತ್ಯದ ಬೆಲೆಗೆ ಅದರಿಂದ ಕುಂದು ಬಾರದು, ಹೀಗೆ ಬಂದಿರುವ ಭಾವದ ಮೂಲವನ್ನು ಹುಡುಕಿ ನಿರ್ಧ ರಿಸುವೆನೆನ್ನುವವನು ಒಂದು ಹೂವಿನ ಇಷ್ಟು ಭಾಗವು ತನ್ನ ಗಾಡಿಯಲ್ಲಿ ತಂದ ಗೊಬ್ಬರದಿಂದ ಬಂದಿತೆಂದು ಹೇಳುವವನಂತಾಗುವವನು. ಹೇಳಿ ರುವುದು ಸರಿಯೇ ಎಂದು ಸಂದೇಹಕ್ಕಲ್ಲದೆ ಸರಿಯಾದರೆ ತಾನೆ ಏನು ಎಂಬ ಆಕ್ಷೇಪಕ್ಕೂ ಅವನು ಒಳಗಾಗುವನು. ... ೬, ಆವೇಶ ಪ್ರಮುಖವಲ್ಲದ ಸಾಹಿತ್ಯ, ಇದುವರೆಗೆ ಹೇಳಿರುವುದರಲ್ಲಿ ಸಾಹಿತ್ಯವು ಕಾವ್ಯಮಾತ್ರವೆಂದೂ ಕಪಿಯಿಂದ ಆವೇಶಫಲವಾಗಿ ಬರೆಯಲ್ಪಡತಕ್ಕದ್ದೆಂದೂ ಭಾವವನ್ನು ಇಟ್ಟುಕೊಂಡು ಎಲ್ಲ ಮಾತನ್ನೂ ಹೇಳಿದೆ. ಇದರಿಂದ ಸಾಹಿ ತ್ಯವು ಬರಿಯ ಕಾವ್ಯ ಎಂದರೆ ಸದ್ಯಕಾವ್ಯವೆಂದಾಗಲಿ ಸಾಹಿತ್ಯವೆಲ್ಲಾ ಬರಿಯ ಆವೇಶದಿಂದಲೇ ಬರತಕ್ಕದ್ದೆಂದಾಗಲಿ ಅಭಿಪ್ರಾಯವಲ್ಲ, ಕವಿ ಯು ಸಾಹಿತ್ಯದ ಪ್ರಪಂಚದಲ್ಲಿ ಕಾರಣಪುರುಷನು, ಉಳಿದವರು ಅವನ ಪ್ರಪಂಚದಲ್ಲಿರುವ ಸಾಮಾನ್ಯರು, ಅವರು ಬರೆಯುವ ಇತಿಹಾಸ, ಜೀವನ ಚರಿತೆ, ವಿಮರ್ಶೆ ಇವ್ರ ಎಲ್ಲವೂ ಆ ಪುಸ೦ಚದ ಭಾಗಗಳು ಅಥವಾ ಆ ಮುಖ್ಯನಗರದ ಉಪಪ್ರದೇಶಗಳು, ಇವೂ ಸಾಹಿತ್ಯವೇ ಸರಿ ; ಅವು ಎಲ್ಲಕ್ಕೂ ಆವೇಶವು ಮಲವಲ್ಲ ಎಂಬುದೂ ಸರಿ, ಆದರೆ ಎಲ್ಲಕ್ಕೂ ಈ ಅಕ್ಷಣವಿದೆ: ಅವು ರಾಗಗಳ ಸಂಸ್ಕಾರವನ್ನು ಮುಖ್ಯವಾಗಿ ಉಳ್ಳುವ, ಅಥವಾ ಅವುಗಳ ತೃಪ್ತಿಗಾಗಿ ತಿದ್ದಿದ ಭಾಷೆ, ಶೈಲಿ ಅಥವಾ ರೂಪನ್ನು ಳ್ಳುವಾಗಿರುವುವು; ಅಥವಾ ಅಂಥವಿಷಯವನ್ನುಳ್ಳು ವಾಗಿರುವವ; ಯಾ ವುದಾದರೂ ಒಂದು ಮುಖ್ಯಭಾಗದಲ್ಲಿ ಅವು ಉತ್ತಮಕಾವ್ಯದ ರೀತಿಯ ನ್ನು ಅನುಸರಿಸಿರುವುವು, ಅದರಿಂದಲೇ ಅವೂ ಸಾಹಿತ್ಯವೆಂಬ ಹೆಸರಿಗೆ ಅರ್ಹವಾಗುವುವು. ಈ ಉಪನ್ಯಾಸದಲ್ಲಿ ಇವುಗಳನ್ನೆಲ್ಲಾ ಬಿಟ್ಟು ಕಾವ್ಯ ವನ್ನು ಮಾತ್ರ ಕುರಿತು ಮಾತನಾಡಿರುವುದು ಮನೆಯ ಎಲ್ಲರನ್ನೂ ಉದ್ದೇಶಿಸಿ ಯಜಮಾನನನ್ನು ಮುಖ್ಯವಾಗಿ ಕರೆಯುವ ಮರಾದೆ