ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಸಾಹಿತ್ಯ. ಯೆಂದು ತಿಳಿಯಬೇಕು. ಈ ಉಪನ್ಯಾಸದಲ್ಲಿ ಹೇಳಿರುವ ಮಾತು ಒಟ್ಟಿನಲ್ಲಿ ಇವು ಎಲ್ಲಕ್ಕೂ ವ್ಯಾಪಿಸುವುದು. ... ೬, ಒಂದು ವಿಶೇಷಾ೦ತ. ಚರ್ಚೆಯ ಆನುಕೂಲಕ್ಕಾಗಿ ಇಲ್ಲಿ ಒಂದು ವಿಧವಾಗಿ ವ್ಯವಹರಿಸಿ ದರೂ ವಾಸ್ತವವಾಗಿ ಸ್ವಲ್ಪ ಬೇರೆಯಾಗುವ ವಿಷಯ ಇನ್ನೊಂದುಂಟು. ಕವಿಯು ಉತ್ತಮವಾದ ಸಂಸ್ಕಾರವನ್ನು ಹೊಂದಿದ್ದರೆ ಜನಾಂಗವು ಅದನ್ನು ಹೊಂದಿದಂತೆ ಎಣಿಸುವದೆಂಬಂತೆ ಮೇಲೆ ಹೇಳಿದೆ. ಮೊತ್ತದಲ್ಲಿ ಜನರ ಮುಂದುವರಿದವರೇ ಇಲ್ಲವೇ ಎಂಬುದನ್ನು ನಿರ್ಧರಿಸುವುದಕ್ಕೆ ಇದು ಸರಿಯೇ, ಆದರೆ ಒಬ್ಬೊಬ್ಬನೂ ಬೇರೆ ಬೇರೆಯಾಗಿಯೇ ಮುಂದು ವರಿಯಬೇಕು, ಒಂದು ಜನಾಂಗದ ಉತ್ಕೃಷ್ಟ ಭಾಗವು ಇತರ ಜನಾಂ ಗದ ಉತ್ತಮ ಭಾಗಕ್ಕಿಂತ ಎತ್ತರದಲ್ಲಿರಬಹುದು; ಎರಡರಲ್ಲೂ ನಿಕೃಷ್ಟ ಭಾಗವೂ ನಾಯಶಃ ಒಂದೇ ಅಂತಸ್ತಿನಲ್ಲಿರುವುದು, ಪ್ರಪಂಚದಲ್ಲೆ ಲ್ಯಾ ಎತ್ತರವಾದ ಗೌರೀಶಂಕರ ಶಿಖರವನ್ನು ತನ್ನ ಸೀಮೆಯಲ್ಲಿ ಹೋಂ ಬರುವ ಭಾರತಭೂಮಿಯಲ್ಲೂ ನಿಮ್ಮ ತಮ್ಮ ಭೂಮಿಯು ಇತರ ಕಡೆಯಂತೆ ಸಮುದ್ರದದ ಮಟ್ಟಕ್ಕೆ ಇದೆ. ಅಲ್ಲದೆ ಕವಿಯಾದವನು ಎಷ್ಟು ಮುಂದುವರಿದಿದ್ದರೂ ಜನಾಂಗವೂ ಕೆಲವು ವೇಳೆ ಬೇಕಾಗಿ ಎಂ ಒಂತೆ ಹಿಂದಿರಬಹುದು, ಕೆಲವುವೇಳೆ ಕವಿಯ ಜನಾಂಗದ ಉತ್ತಮ ಭಾವಕ್ಕೆ ಕಡಿಮೆಯಾದ ಭಾವವನ್ನು ನುಡಿಯಬಹುದು, ಒಂದು ಜನಾಂ ಗದ ಪ್ರಸಿದ್ಧ ಕವಿಯು ತನ್ನ ವರು ಇತರ ಜನಾಂಗಕ್ಕೆ ಮಾಡಿದ ಉಪಕಾರ ಗಳನ್ನು ಸ್ತುತಿಸಿ ಆ ಜನಾಂಗವನ್ನು ನಿಂದಿಸಿ ತನ್ನ ಕಾವ್ಯದ ಮಹಿಮೆ ಯಿಂದ ಪಡೆಯಲಾಗದ ಕೀರ್ತಿಯನ್ನು ಈ ಮೃಷಾಸ್ತುತಿ ಪರ ನಿಂದೆಗಳಿಂದ ಪಡೆಯುವನು; ಇವನ ಜನಾಂಗದ ಅಲ್ಪಜೀವಿಗಳು ಇವನ ಕೊರಳಿಗೆ ಹೂವಿನ ಹಾರವನ್ನು ಹಾಕುವರು ; ಅದೇ ಜನರಲ್ಲಿ ಸಂತರು ದುಃಖಿಸುವರು, ಇನ್ನೊಂದು ಜನಾಂಗದ ಕವಿಯು ತನ್ನ ಜೀವನದ ಸರಸ್ವವನ್ನೂ ದೇವದೇವನಲ್ಲಿ ಅರ್ಪಿಸಿ ತಾನು ಪರಮಾತ್ಮನ ಗಾನಕ್ಕೆ ಸರಿಯಾದ ಕೊಳಲು ಮಾತ್ರವಾಗುವನು ; ಇವನನ್ನು ಇವನ ಜನಾಂ ಗವು ಹಿತ್ತಲಲ್ಲಿಯ ಮದ್ದಿನ ಗಿಡದಂತೆ ಕಾಣುವುದು, ಇದೆಲ್ಲವೂ