ಸಾಹಿತ್ಯ. III ಸಾಹಿತ್ಯದ ಕಾರ. ಮೇಲೆ ಜನಾಂಗಗಳ ಸಾಹಿತ್ಯಕ್ಕೂ ಜೀವನಕ್ಕೂ ಇರುವ ಸಂಬಂಧವನ್ನು ವಿವರಿಸುವುದರಲ್ಲಿ ಸಾಹಿತ್ಯದ ಕಾರವೇನೆಂಬುದನ್ನು ಸೂಕ್ಷ್ಮವಾಗಿ ಹೇಳುತ್ತ ಸಾಹಿತ್ಯವು ಮನುಷ್ಯನ ರಾಗಗಳ ಸಂಸ್ಕಾರದ ಫಲವಾಗಿ ಅದರ ಒಂದ, ಅವಸ್ಥೆಯನ್ನು ಪೂರ್ತಿಗೊಳಿಸುವದೆಂದೂ ಆ ಸಂಸ್ಕಾರವ ಮ೦ದಣ ಅವಸ್ಥೆಗೆ ಜರಗಲು ಕಾರಣವಾಗುವ ದೆಂದೂ ತಿಳಿಸಿತು. ಈ ವಿಷಯವನ್ನು ಇಲ್ಲಿ ಇನ್ನು ಸ್ವಲ್ಪ ವಿವರವಾಗಿ) ವಿಚಾರಮಾಡಿ ಇದೆ. 8 ೯, ನಮ್ಮ ಪೂರ್ವಿಕರ ಸೂತ್ರ. ನಮ್ಮ ಪೂರ್ವಿಕರ ಸಾಹಿತ್ಯವೂ ಶಾಸ್ತ್ರವೂ ಪುರಾಣ ಇತಿಹಾಸ ಗಳೂ ಒಂದೇ ವಿಷಯವನ್ನು ಹೇಳುವವೆಂದೂ, ವೇದವ್ರ ಸುಭುವಿನಂತೆ ವಿಧಿಸುವುದನ್ನೆ ಶಾಸ್ತ್ರ ವಿತನಂತೆ ಕಾರಣಸಹಿತ ಹೇಳುವದೆಂದೂ, ಸಾಹಿತ್ಯವು ಅದೇ ವಿಷಯವನ್ನೇ ಕಾಂತೆಯಂತೆ ಸರಸವಾಗಿ ಹೇಳುವ ದೆಂದೂ ನಿರ್ಣಯಿಸಿದರು. ಅವರ ಇತರ ಎಲ್ಲಾ ಸೂತ್ರಗಳಂತೆಯೆ ಇದೂ ಅವರು ತಿಳಿದಿದ್ದ ವಿಷಯಗಳಿಗೂ ಅವರ ಉದ್ದೇಶಗಳಿಗೂ ಸಮ್ಮತ ವಾದ ಅಭಿಪ್ರಾಯವ್ಯ, ವೇದಗಳಾಗಲಿ, ಶಾಸ್ತ್ರಗಳಾಗಲಿ, ಪುರಾಣಗಳಾ ಗಲಿ ಮಾನವ ವರ್ಗವನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಿ, ಈ ಜನ್ಮ ಸಾರ್ಥಕವಾಗುವಂತೆ ಮಾಡುವುದಕ್ಕಾಗಿ ನಿರ್ಮಿತ ವಾದುವ, ವೇದಗಳು ಮೋಕ್ಷಕ್ಕೆ ಮಲಸಾಧನಗಳು, ಶಾಸ್ತ್ರಗಳು ಆಚಾರಕ್ಕೆ ಸಂಬಂಧಪಟ್ಟ ನಿಯಮಗಳನ್ನು ತಿಳಿಸುವುದಕ್ಕೆ ನಿರ್ಮಿತವಾಗಿ) ಈ ಕಾರಣದಿಂದ ಜನರು ಹೀಗೆ ಮಾಡಬೇಕು, ಜನಸಮುದಾಯವು ಹೀಗೆ ನಡೆಯಬೇಕು ಎಂದು ಮೊದಲಾ ಹೇಳಿ ಜನರನ್ನು ಸರಿಯಾದ ನಡತೆಯಲ್ಲಿ ನಿಲ್ಲಿಸಿ, ಅವರು ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುವಂತೆ ಮಾಡುವುವ, ಜನ್ಮದಿಂದ ಜನ್ಮಕ್ಕೆ ಉತ್ತಮರಾಗಿ ಜೀವನರು ಕೊನೆಗೆ ಮೋಕ್ಷವನ್ನು ಹೊಂದುವರು, ಸಾಹಿತ್ಯವೂ ಇದನ್ನೆ ತಿಳಿಸುವುದು.
ಪುಟ:ಸಾಹಿತ್ಯ1924.djvu/೪೪
ಗೋಚರ