ಸಾಹಿತ್ಯ. 33 ವಾದ ಈತವಲ್ಲ. ಈ ಅರ್ಥವನ್ನು ಪಡೆಯಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿಳಿಯಲು ಯತ್ನಿ ಸುವುದು ಮನುಷ್ಯನ ಬಲಾಬಲ ಗಳನ್ನು ವಿವೇಚಿಸಿದವರು ಮಾಡುವ ಕೆಲಸ. ಇಷ್ಟನ್ನು ಮಾಡಿದ್ದಕ್ಕೆ ನಮ್ಮ ಪೂರ್ವಿಕರಿಗೆ ಎಷ್ಟು ಗೌರವವನ್ನು ಕೊಟ್ಟರೂ ಸಾಲದು. ಆದರೆ ರೇಖಾಗಣಿತದಲ್ಲಿ ಯಕ್ಷಗಳಿಗೆ ಉಪಯೋಗವಾಗುವಷ್ಟು ವಿಷಯವಲ್ಲದೆ ಇತರ ವಿಷಯಗಳೂ ಇವೆ ; ರಸಾಯನಶಾಸ್ತ್ರದಲ್ಲ ಇತರ ಭೌತಿಕಶಾಸ್ತ್ರದಲ್ಲಿ ಇಂತಹ ಅನೇಕ ವಿಷಯಗಳು ಇವೆ ; ಇವುಗಳಿಗೆಲ್ಲ ಇದೇ ರೀತಿಯ ನಿರ್ಧರವಾದ ಉಪಯೋಗವಿಲ್ಲ, ಈ ವಿಷ ಯಗಳನ್ನು ತಿಳಿಯುವುದಕ್ಕೆ ಪ್ರಯತ್ನ ಪಡುವುದು ಸರಿಯೇ ತಪ್ಪೇ ? ಸಾಹಿತ್ಯದಲ್ಲಿ ಹೇಳುವುದೆಲ್ಲ ನಮ್ಮ ಜೀವನಕ್ಕೆ ಸಂಬಂಧಪಟ್ಟದ್ದೆ ಆi) ಕಂಡಹಾಗೆ ನಡತೆಗೆ ಬೇಕಾಗುವ ನೀತಿ ಮಾತ್ರವೇ ಆಗಿರುವದಿಲ್ಲ. ಕೃಷ್ಣನ ಸೌಂದರವನ್ನು ಸುಮ್ಮನೆ ಸ್ತುತಿಮಾಡಿದರೆ ಅಥವಾ ಸುಂದರ ವಾದ ಸಂಜೆಯನ್ನು ವರ್ಣಿಸಿದರೆ ಶಾಸ್ತ್ರದ ಯಾವ ವಿಷಯವನ್ನು ಸರಸ ವಾಗಿ ಹೇಳಿದಂತಾಯಿತು ? ಹೀಗೆಂದು ವಿಚಾರಮಾಡಿದರೆ ಪ್ರಾಯಶಃ ಈ ಸೂತ್ರದಿಂದಲೇ ಸಮರ್ಪಕವಾದ ಉತ್ತರವು ಸಿಕ್ಕುವುದಿಲ್ಲ. ಸಾಹಿತ್ಯ ಇರಲೋ ಶಾಸ್ತ್ರ ಇರಲೊ. ನಮ್ಮವರು ಗೊತ್ತಾ ಒಂದು ಉದ್ದೇಶಕ್ಕೆ ಕಂಡುಹಿಡಿದ ವಿಷಯಗಳನ್ನು ಪಾಶ್ಚಾತ್ಯರು ಜೀವನಶಾಸ್ತ್ರದಲ್ಲಿ ಇಷ್ಟು ನಿರ್ಧರವಾದ ಒಂದು ಉದ್ದೇಶವನ್ನು ಇಟ್ಟುಕೊಳ್ಳದೆ, ವಿಷಯವನ್ನು ತಿಳಿಯಬೇಕೆಂಬ ಆಸೆಯಿಂದ ಮಾತ್ರ ಕಂಡುಹಿಡಿದರು. ರೇಖಾಗಣಿತದಲ್ಲಿ ಅವರೂ ಕೆಲವು ವಿಷಯಗಳನ್ನು ಬರೆದಿಟ್ಟರು ; ಇವುಗಳಲ್ಲಿ ಅನೇಕವು ಯಾವ ಯಜ್ಞಕ್ಕೇ ಆಗಲಿ ಇತರ ಉಪಯೋಗಕ್ಕೆ ಆಗಲು ಬರತಕ್ಕದ್ದಲ್ಲ. ಸಾಹಿತ್ಯದಲ್ಲಿಯೂ ಕೇಳುವುದಕ್ಕೆ ಚೆನ್ನಾಗಿರುವ ಓದಿದರೆ ಆನಂದ ಬಾಗುವ ಗ್ರಂಥಗಳನ್ನು ಸಾಧ್ಯವಾದಷ್ಟು ಚೆನ್ನಾಗಿ ಬರೆದರು ; ನೋಡಿ ದರೆ ಇಂಥದೇ ಒಂದು ನೀತಿಗಾಗಿ ಎಂದು ಹೇಳುವಂತಿಲ್ಲ, ಆ ರೇಖಾ ಗಣಿತವೂ ಈ ಗ್ರಂಥವೂ ಒಂದಕ್ಕೊಂದು ಸಹಾಯವಾದವೆ, ವಿರೋಧ ವಾದವೆ? ಜೀವನದಲ್ಲಿ ಇದನ್ನು ತಿಳಿಯಬೇಕೆನ್ನುವುದು ಸರಿಯೇ
ಪುಟ:ಸಾಹಿತ್ಯ1924.djvu/೪೬
ಗೋಚರ