ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಸಾಹಿತ್ಯ. ವಾಗಿಯೂ ನಮ್ಮ ಸುತ್ತಲೂ ಕಾಣುವ ಪ್ರಪಂಚವನ್ನು ಕುರಿತದ್ದಾದ ರಿಂದಲೂ ಅದರಲ್ಲಿ ನಮಗೆ ಅಗತ್ಯ ಹೆಚ್ಚಾಗಿರಬೇಕೆಂದು ತೋರುವುದು. ಸಂಜೆ ಅಂದವಾಗಿದ್ದರೇನು ? ಸಂಜೆ ದಿನವೂ ಬರುತ್ತಿದೆ. ಈ ಭೂಮಿ ಏತರಿಂದಾಯಿತು, ಇದರ ಗರ್ಭದಲ್ಲೇನಿದೆ, ಇದರ ಸ್ವರೂಪವೇನು ; ಸೂರನು ಯಾವ ದ್ರವ್ಯದಿಂದ ಆಗಿದ್ದಾನೆ, ಅವನಲ್ಲಿ ಈ ಸಭೆಯು ಹೇಗೆ ಉಂಟಾಗಿರುವುದು ; ನಕ್ಷತುಗಳು ಎಷ್ಟು, ಇವು ಎಷ್ಟರವರೆಗೆ ಹರಡಿವೆ, ಇವುಗಳ ಗಾತ್ರವೇನು ; ಇವುಗಳೆಲ್ಲ ನಡೆಯುವ ರೀತಿ ಯೇಸು ; ಪ್ರಪಂಚದಲ್ಲಿ ಮನುಷ್ಯನು ಜೀವಿಸುವುದಕ್ಕೆ ಆರಂಭಿಸಿ ದಾಗ ಯಾವ ಸಂದರ್ಭಗಳು ಇದ್ದುವು ; ಆಗಲಿಂದ ಈವರೆಗೆ ಯಾವ ರೀತಿಯಲ್ಲಿ ಅವನು ಜೀವಿಸಿಕೊಂಡು ಬಂದಿದಾನೆ ; ಅವನ ದೇಹವು ಯಾವರೀತಿಯ ಕಟ್ಟಡ, ಅದರ ವೈಚಿತ್ರ,ಗಳೇನು, ಇದಕ್ಕೂ ಇವನ ಸುತ್ತುಮುತ್ತಲೂ ಇರುವ ಗಿಡಮರಗಳ ಕಟ್ಟಡಕ್ಕೂ ಸಾಮ್ಯವಿದೆಯೆ; ಇವು ಎಲ್ಲಾ ಸೃಷ್ಟಿಯಾದದ್ದು ಹೇಗೆ, ಇವು ಜೀವಿಸುವುದು ಹೇಗೆ; ಈ ಮೊದಲಾದ ವಿಷಯಗಳನ್ನು ತಿಳಿಯುವುದು ಸಂಜೆ ಅಂದವಾಗಿದೆ ಎಂಬು ದನ್ನು ತಿಳಿಯುವುದಕ್ಕಿಂತ ಹೆಚ್ಚು ಆವಶ್ಯಕವಲ್ಲವೆ ? ಇವೆಲ್ಲ ನಮ್ಮ ಸುತ್ತ ಇರುವ ನಿಜವಾದ ವಿಷಯಗಳು ; ಇಂತವು ಅಸಂಖ್ಯಾತವಾಗಿವೆ. ಇವುಗಳನ್ನು ತಿಳಿಯುವದೆ ? ಇಲ್ಲವೆ ಎಲ್ಲೂ ಇಲ್ಲದವರ ಕತೆಗಳನ್ನು ಬರೆಯುತ್ತಾ ಆಹಾ, ಇದೆಷ್ಟು ಚೆನ್ನಾಗಿದೆ, ಆಹಾ ಅದೆಷ್ಟು ಸೊಗಸ ಗಿದೆ ಎನ್ನು ಇದೇ ? ತಿಳಿಯಬೇಕಾದ ವಿಷಯ ನೂರು ಇರುವಾಗ ಇಲ್ಲ ದ್ದನ್ನು ಸೃಷ್ಟಿಸಿಕೊಂಡು ಹೆಣಗಾಡುವುದು ವಿವೇಕವಾದ ಕೆಲಸವಾಗಿ ತೋರುವುದಿಲ್ಲ. ಹೀಗೆನ್ನು ವುದು ಒಂದು ಅಭಿಪ್ರಾಯ, ಆದರೆ ಇನ್ನೊಂದು ಪರವಾಗಿಯೂ ಎರಡು ಮಾತುಂಟು. ಇದಿಷ್ಟೂ ತಿಳಿಯಬೇಕಾದ ವಿಷಯವೇ ಸರಿ, ಆದರೆ ಇದೆಲ್ಲದರ ಫಲವೇನು ? ಭೂಮಿಯ ಸ್ವರೂಪ ಕಟ್ಟು ಕಟ್ಟಡ ; ಸೂರಾದಿಗ್ರಹಗಳ ಸ್ವರೂಪ, ರಚನಾವಿಶೇಷ, ಗತಿ ವೈಚಿತ್ತು , ; ಇವು ಎಲ್ಲ ಈ ಬುಹ್ಮಾಂಡದಲ್ಲಿ ಅನಂತವೆಂದು ತೋರುವ ಅಂತರವನ್ನು ತುಂಬಿರುವುದು ; ಮನುಷ್ಯನ ಗಿಡಮರಗಳ ಇತರ ಜೀವ ರಾಶಿಯ ಸೃಷ್ಟಿ, ವೃದ್ಧಿ, ಲಯ ; ಇವು ಎಲ್ಲವನ್ನೂ ವಿವರವಾಗಿ ತಿಳಿದು