ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39 ಸಾಹಿತ್ಯ, ಆಗತಕ್ಕದ್ದೇನು ? ಖಗೋಳಶಾಸ್ತ್ರವನ್ನು ತಿಳಿದವನು ಅಲ್ಲಿಗೇ ನಿಂತರೆ ಅವನಿಗೆ ಅದರ ಉಪಯೋಗವಿಲ್ಲ ; ಅದರಿಂದ ಆಚೆಗೆ ರಸಾನುಭಾವವು ಬರ ಬೇಕು ; ಆ ಶಾಸ್ತ್ರವು ಅವನಿಗೆ ತಿಳಿಸಿರುವ ವಿಷಯವು ಅವನಿಂದ ಆಹಾ ಇದು ಎಷ್ಟು ಅದ್ಭುತವಾದುದು ಎನ್ನಿಸಿದರೆ ಆ ಶಾಸ್ತ್ರವೂ ಪುಯೋ ಜನವಾಗುವುದು. ಇತರ ವಿಷಯಗಳನ್ನು ತಿಳಿಯುವುದರಿಂದ ಮನುಷ್ಯ ನಲ್ಲಿ ಆಶ್ಚಯ್ಯ, ಭಯ, ದಯ, ಸೃಷ್ಟಂತರ್ಗತವಾದ ಶಕ್ತಿಯನ್ನು ಕುರಿತ ಭಕ್ತಿ, ಈ ಮೊದಲಾದ ರಾಗರಸಗಳು ಹುಟ್ಟಬೇಕು, ಹುಟ್ಟದಿದ್ದರೆ ಈ ತಿಳಿವಿನಿಂದ ಆದದ್ದೇನು ? ಶಾಸ್ತ್ರವು ವಿಷಯವನ್ನು ಶೋಧಿಸುತ್ತದೆ. ಸಾಹಿತ್ಯವು ಆ ಶೋಧನೆಯ ಫಲವನ್ನು ವ್ಯಕ್ತಪಡಿಸುತ್ತದೆ. ಬುದ್ದಿಯ ಕೆಲಸವೆಲ್ಲ ಸಾರ್ಥಕವಾಗುವುದು ರಾಗದಿಂದಲೇ, ಶಾಸ್ತ್ರದ ಸಾಫಲ್ಯವು ಸಾಹಿತ್ಯದ ವಿನಾ ಇಲ್ಲ, ಇದು ಇನ್ನೊಂದು ಅಭಿಪ್ರಾಯ. - ಯಾವುದನ್ನು ಒಪ್ಪುವುದು. ಮನುಷ್ಯನ ಸ್ವಭಾವದ ಒಂದು ಕಾಂಡವನ್ನು ತೀರಾಸಿರಾಕರಿ ಸುವ ಮೊದಲನೆಯ ಅಭಿಪ್ರಾಯಕ್ಕಿಂತ ಎರಡು ಕಾಂಡವನ್ನೂ ಒಳ ಕೊಳ್ಳುವ ಈ ಎರಡನೆಯ ಅಭಿಪ್ರಾಯವು ಅಂಗೀಕಾರಾರ್ಹವೆಂದು ನಾವು ಒಪ್ಪಬೇಕೆಂದು ತೋರುತ್ತದೆ. ಇದರಿಂದ ಈ ವಿಷಯವೂ ತೋರಿಬರುವುದು, ರಸಾನುಭವಕ್ಕೆ ಮಲವಾಗದ ವಿಷಯ ಸರಿ ಜ್ಞಾನವು ನಿಷ್ಪಲ; ರಸಾನುಭವವು ರಾಗಗಳ ಮೂಲಕ ಮಾತ್ರ ಸಾಧ್ಯ; ರಾಗಸಂಸ್ಕಾರಕ್ಕೆ ಫಲವೂ ಸಾಧನವೂ ಆದ ಸಾಹಿತ್ಯವೂ, ವಿಷಯ ಸರಿ ಜ್ಞಾನಕ್ಕೆ ಶಾಸ್ತ್ರವು ಹೇಗೆ ಆವಶ್ಯಕವೋ ಹಾಗೆ ಅದರ ಮೇಲೆ ಬೇಕಾಗುವ ರಸಾನುಭವಕ್ಕಾಗಿ ಆವಶ್ಯಕ. ಇಲ್ಲಿ ಶಾಸ್ತ್ರವೆಂದರೆ ನಮ್ಮವರು ಹೇಳಿದ ಶಾಸ್ತ್ರ ಮಾತ್ರವಲ್ಲ ; ಭೌತಿಕಶಾಸ್ತ್ರಗಳೂ ಸೇರಿವೆ. ಸಾಹಿತ್ಯದ ಕಾರವು ಈ ಶಾಸ್ತ್ರಗಳ ಕಾರದಿಂದ ಬೇರೆಯಾದದ್ದು. ಅದನ್ನು ಇವು ಮಾಡಲಾರವು, ಅದು ಸಾಹಿತ್ಯದಿಂದಲೇ ಸಾಧ್ಯ. ರಾಗದ ಅನ್ವೇಷಣ ಶಕ್ತಿ. ತನ್ನ ಮೂಲಕ ಮಾತ್ರ ಸಾಧ್ಯವಾದ ರಸಾನುಭವದಿಂದಲೇ ಅಲ್ಲದೆ ರಾಗವು ಬುದ್ದಿಯೊಡನೆ ಅದರ ಅನ್ವೇಷಣ ಕೆಲವದರಲ್ಲಿ ಸಹಾಯ