ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ. ನಾಲ್ಕೆಂಬುದನ್ನು ಗುಣಾಕಾರದಿಂದ ತಿಳಿಯುವ ಹಾಗೆ ಅಡಿಯಿಂದ ಅಡಿಗೆ ಮುಂದುವರಿಯುವುದು, ರಾಗದ ಪದ್ಧತಿಯು ದಿವಂಗತರಾದ ಮದರಾಸಿನ ರಾಮಾನುಜರ ಗಣಿತದ ಬುದ್ದಿಯ ಹಾಗೆ, ಅದಕ್ಕೆ ಅನೇಕ ವೇಳೆ ಫಲವ, ಗೊತ್ತುನ್ಯಾಸವು ತಿಳಿಯದು, ತಿಳಿದ ಫಲಕ್ಕೆ ಇತರರೂ ನ್ಯಾಸಗಳನ್ನು ಹೇಳಲು ತೊಂದರೆಪಡಬೇಕಾಗುವುದು. ಮೆಸ್ಮರಿಸ ಮಿನಿಂದ ಒಂದು ಮಾದರಿಯ ಶಕ್ತಿ ಬರುವಂತೆ ರಾಗದ ವಶದಲ್ಲಿರುವಾಗ ನಮಗೆ ಪರೋಕ್ಷ ಜ್ಞಾನವುಂಟಾಗುವುದು. ಕವಿಯು ಆವೇಶದಲ್ಲಿ ಪರವಸ್ತುವಿನ ಮೆಸ್ಮರಿಸವಿಗೆ ಸಿಕ್ಕಿದ ಹಾರುವನು. ಅವನ ರಾಗಕ್ಕೆ ಆಗ ಅನೇಕ ವಿಷಯಗಳು ತಿಳಿಯುವುವ, ಅವೆಲ್ಲಕ್ಕೂ ಬುದ್ದಿಯ ದಾರಿಯಿಂದ ಸಮರ್ಥನವನ್ನು ತರಬೇಕೆಂದರೆ ನಮ್ಮಿಂದ ಸಾಧ್ಯವಲ್ಲ. ಬುದ್ಧಿ ರಾಗಗಳ ಅನ್ವೇಷಣವೆರಡರ ಸ್ವಭಾವವೂ ಫಲವೂ ಒಂದೇ, ಅನ್ವೇಷಣಗ ದಾರಿಯು ಬೇರೆಯಾ) ಕಂಡಮಾತ್ರಕ್ಕೆ ಅದರ ಸ್ವಭಾವವೂ ಬೇರೆಯೆಂದಾಗಲಿ ಫಲವ ಬೇರೆಯೆಂದಾಗ ತಿಳಿಯ ಬಾರದು. ಒಟ್ಟಿಗಾದರೂ ರಾಗಕ್ಕಾದರೂ ಆತ್ಮವನ್ನು ಮುಟ್ಟುವಬಗ್ಗೆ ಒಂದೇ ಸಾಧನವಿರುವುದು : ಪ್ರತಿಭಾಶಕ್ತಿ, ಒದ್ದಿಯ ಪ್ರತಿಭೆಯು ಸಣ್ಣ ಹೆಜ್ಜೆಯನ್ನಿಡುವುದರಲ್ಲಿಯೇ ಇರುತ್ತದೆ ; ರಾಗದ ಪ್ರತಿಭೆಯು ಹೆಚ್ಚು ದೂರಹೋಗುವ ಸ್ವಭಾವದ್ದು. ಬುದ್ದಿಯ ಕೂಡ ಈ ಪ್ರತಿಭೆ ಯನ್ನು ಸ್ವಲ್ಪ ಹೆಚ್ಚಾಉಪಯೋಗಿಸಿಯೇ ಅದರ ಅತ್ಯುತ್ತಮವಾದ ಫಲಗಳನ್ನು ನಡೆಯತಕ್ಕದ್ದು, ಒಂದು ವಿಷಯವನ್ನು ಸಮರ್ಥಿಸುವ ಹತ್ತಾರು ವಿಷಯಗಳನ್ನು ಕಂಡುಹಿಡಿಯಬಹುದು ; ಅದೆಲ್ಲದರಿಂದ ತಿಳಿಯಬೇಕಾದುದೇನು ಎಂದು ತಿಳಿಯುವುದು ಪ್ರತಿಭೆಯಿಂದಲ್ಲದೆ ಸಾಧ್ಯವಲ್ಲ. ಕಲ್ಲು ಮೇಲಿಂದ ಕೆಳಕ್ಕೆ ಬೀಳುತ್ತದೆ, ಹಣ್ಣು ಮೇಲಿಂದ ಕೆಳಕ್ಕೆ ಬೀಳುತ್ತದೆ, ನಕ್ಷತುವು ಆಕಾಶದಿಂದ ಕೆಳಕ್ಕೆ ಬೀಳುತ್ತದೆ, ಯಾ ವದನ್ನು ಎತ್ತರದಲ್ಲಿ ಬಿಟ್ಟರೂ ಅದು ಕೆಳಕ್ಕೆ ಬೀಳುತ್ತದೆ. ಹೀಗೆ ಕತೆ ಯಲ್ಲಿ ಹಂಸಗಳು ಒಂದೊಂದಾಗಿ ಹಾರುವುದಕ್ಕೆ ಹೊರಟವು ಎಂದು ಹೇಳಿದಂತೆ ಮೊದಲು ಕೊನೆ ಇಲ್ಲದೆ ಇದು ಬೀಳುತ್ತದೆ, ಅದು ಬೀಳು ತದೆ ಎಂದು ಹೇಳುತ್ತಲೇ ಇರಬಹುದು, ಕಂಡುಹಿಡಿಯುತ್ತಲೇ ಇರ