ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ. 43 ಕಾಲಿಗೆ ಕಟ್ಟಿದ ಕಾಗದವನ್ನು ಅದು ಇನ್ನು ಯಾರಲ್ಲಿಯಾದರೂ ತೆಗೆದು ಕೊಂಡು ಹೋದರೆ ಅದು ಹಾರಿಹೋt ಉಪಯೋಗವೇನು ? ಪ್ರಿಯೆ ಇರುವ ಕಡೆಗೆ ಅದು ಹೋಗುವಂತೆ ಅದನ್ನು ತಿದ್ದಬೇಕು, ಹೀಗೆ ನಮ್ಮ ರಾಗವನ್ನು ತಿನ್ನುವುದು ಬುದ್ದಿಯು. ಸರಿಯಾದ ಫಲವನ್ನು ಪಡೆ. ಯುವ ರೀತಿಗೆ ರಾಗವನ್ನು ಸಾಧ್ಯವಾದಷ್ಟು ಮಟ್ಟಿಗೆ ತಂದುಕೊಂಡು ಅದುಹಾಗೆಯೇ ನಡೆಯುವುದೆಂದು ಧೈರ ಬಂದಮೇಲೆ ಅದನ್ನು ಈ ರೀತಿ ಫಲಗಳನ್ನು ಪಡೆಯುವುದಕ್ಕೆ ಬಿಡಬಹುದು, ಅಂತಃಕರಣ ಪ್ರವೃತ್ತಿಯ ಪ್ರಮಾಣವಾಗುವ ಮೊದಲು ಈ ಸಂಸ್ಕಾರವು ಕೇವಲ ಆವಶ್ಯಕ. ಆದದ್ದರಿಂದ ಮನುಷ್ಯನಿಗೆ ರಾಗಗಳೂ ಬುದ್ದಿಯ ಎರಡೂ ಬೇಕು, ಒಂದು ಶಕ್ತಿ, ಒಂದು ಮಾರ್ಗದರ್ಶಿ, ಒಂದರಗತಿ ತೀವ, ಅವ್ಯಕ್ತ ; ಇನ್ನೊಂದರಗತಿ ವ್ಯಕ, ಸಾವಧಾನ. ಮನುಷ್ಯನಿಗೆ ಎರಡೂ ಇವೆ, ಅವನು ಎರಡನ್ನೂ ಉಪಯೋಗಿಸಬೇಕು, ರಾಗವ ಕೆಲವ್ರ ಕಡೆಗೆ ತೆಗೆದುಕೊಂಡು ಹೋಗಬಹುದು, ಅದನ್ನು ಬುದ್ದಿಯು ತಿದ್ದಬೇಕು. ಬುದ್ದಿಯು ಕೆಲವು ಕಡೆ ತೆಗೆದುಕೊಂಡು ಹೋಗಬಹುದು, ಅದರಿಂದ. ರಾಗವ ಫಲವನ್ನು ಪಡೆಯಬೇಕು, ಹೀಗೆ ಒಂದಕ್ಕೊಂದು ಕುರುಡನಿಗೆ ಹೆಳವನ ಹೆಳವನಿಗೆ ಕುರುಡ ಸಹಾಯವಾಗಿ ಇಬ್ಬರೂ ದಾರಿ ನಡೆಯುವಂತೆ ಎರಡೂ ಅವುಗಳ ಕರ್ತವ್ಯವನ್ನು ನೆರವೇರಿಸಬೇಕು. - $ ೧೧, ಇನ್ನೊಂದು ಸೂತ್ರ, ಸಾಹಿತ್ಯ: ಶಾಸ್ತ್ರ. ರಾಗಗಳ ಸಂಸ್ಕಾರಕ್ಕೆ ಸಾಹಿತ್ಯವು ಸಾಧಕವಾದುದರಿಂದ ಅದು ಮನುಷ್ಯನಜೀವನಕ್ಕೆ ಕೇವಲ ಆವಶ್ಯಕವಾದ ಫಲಗಳನ್ನು ಕೊಡತಕ್ಕದ್ದು ಎಂದು ತಿಳಿಯಬೇಕು. ಮನುಷ್ಯನ ಆತ್ಮದ ಒಂದು ಭಾಗದ ಬೆಳವಣಿಗೆ ಎಲ್ಲಕ್ಕೂ ಅದು ಫಲವು, ಅದು ಸಾಧನವು ; ಅದರ ಕಾವ್ಯವು ಇನ್ನು ಯಾವ ದರಕಾರಕ್ಕಿಂತಲೂ ಕಡಿಮೆಯಾದದ್ದಲ್ಲ; ಅದರ ಜತೆಯ ಕಲೆಗಳಲ್ಲಿ ಹೊರತು ಇನ್ನು ಯಾವುದರಿಂದಲೇ ಆಗಲಿ ಆಗುವ ಕಾವ್ಯವೂ ಅಲ್ಲ. ಆದರೆ