ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 ಸಾಹಿತ್ಯ, ಕೊಂಡು ಒಬ್ಬರು ಕಲಿತದ್ದನ್ನು ಇನ್ನೊಬ್ಬರು ತಿಳಿಯುತ್ತಾ ಎಲ್ಲರ ಪುಯತ್ನದ ಫಲವನ್ನೂ ಒಟ್ಟುಗೂಡಿಸಿಕೊಂಡು ಮುಂದುವರಿಯಲು ಯತ್ನ ಮಾಡಬೇಕು. ಮಾನವವರ್ಗದ ಅನ್ವೇಷಣವೆಲ್ಲ ಒಂದೇ ; ಇದು ನಮ್ಮ ಅವಗಾಹನೆಗೆ ಬಂದರೆ ಈಗ ಜೀವನದಲ್ಲಿ ಹೇಗೆ. ನಡೆದುಕೊಳ್ಳುವುದೆನ್ನು ಇದಲ್ಲದೆ ಮಾನವವರ್ಗದ ಚರಿತ್ರೆಯ ಅರ್ಥವೂ ಕೂಡ ನಮಗೆ ವಿಶದವಾಗಿ ತಿಳಿಯುವುದು, ನೂರಾರುದೇಶಗಳ ಜನ ನೂರಾರು ದಾರಿಯಲ್ಲಿ ಸಿಕ್ಕಿ ಸಿಕ್ಕಿದಹಾಗೆ ಯೋಚಿಸಿ, ಶಾಸ್ತ್ರಗಳನ್ನು ಬರೆದು, ಸಾಹಿತ್ಯಗಳನ್ನು ನಿರ್ಮಿಸಿ, ಇದು ನಿಜ, ಇದು ನಿಜ, ಅದು ಸುಳ್ಳು ಇನ್ನೊಂದುಸುಳ್ಳು ಎಂದು ಕಾದಾಡಿ ನೂರಾರು ದಾರಿಯಲ್ಲಿ ಸ್ಥಿರಪಡಿಸಲು ಯತ್ನಿಸಿರುವ ಎಲ್ಲ ವಿಷಯಕ್ಕೂ ಒಂದು ಉಪಯೋಗ ತೋರುತ್ತದೆ, ಎಂದಾದರೂ ಒಂದು ಪ್ರಾತಃಕಾಲದಲ್ಲಿ ಯಾವುದಾದ ರೊಂದು ಕಡೆ ಸಿಕ್ಕಿ ಸಿಕ್ಕಿದ ಹಾಗೆ ಓಡಿಯಾಡುತ್ತಿರುವ ನೂರಾರು ಇರುವೆಗಳನ್ನು ನಾವು ನೋಡಿರಬಹುದು, ಅವ್ರು ಬಂದು ಹೋದದಾರಿ ಯಲ್ಲಿ ಇನ್ನೊಂದು ಹೋಗುವುದಿಲ್ಲ; ಒಂದಕ್ಕೊಂದು ಅಡ್ಡ ಬೀಳುತ್ತವೆ; ಹಿಂದಿರುಗುತ್ತವೆ ; ಮುಂದಕ್ಕೆ ಹೋಗುತ್ತವೆ, ಇದು ಏನು ಓಡಿಯಾಟ ಎಂದು ನಮಗೆ ತೋರುವುದು, ಹತ್ತಿರ ಎಲ್ಲಾದರೂ ಸ್ವಲ್ಪ ಸಕ್ಕರೆ ಬಿದ್ದಿರುವುದನ್ನು ನೋಡಿದೆವಾದರೆ ಈ ಇರುವೆಗಳ ಈ ಬಹುಮುಖವಾದ ಓಡಿಯಾಟವೆಲ್ಲದರ ಉದ್ದೇಶವೂ ಸ್ಪಷ್ಟವಾಗುವುದು, ಮಾನವ ಜೀವ ನವು ಇನ್ನೂ ಈ ಓಡಿಯಾಟದಲ್ಲಿದೆ. ಓಡಿಯಾಟದ ನಡುವೆ ಅದರ ಅಭಿಪ್ರಾಯವೇನೆಂದು ನಾವು ತಿಳಿಯಲು ಪ್ರಯತ್ನ ಪಡುತ್ತಿದೇವೆ. ಹೀಗೆ ಪ್ರಯತ್ನ ಪಡುವುದು ಮಾನವಬುದ್ದಿಯ ಲಕ್ಷಣ. ಆದರೆ ಅಭಿಪ್ರಾಯವು ಸ್ಪಷ್ಟವಾಗಿ ತಿಳಿಯುವುದಿಲ್ಲ, ಅಂತು ಮೊತ್ತದಲ್ಲಿ ಯಾವುದೋ ಒಂದು ಉದ್ದೇಶದಿಂದಲೇ ಮುಂದುವರಿಯುತ್ತಿರುವುದು ನಿಜ. ಈ ಉದ್ದೇಶದ ಸ್ವಭಾವವನ್ನು ಮೊತ್ತದಲ್ಲಿಯಾದರೂ ತಿಳಿ ಯದಿದ್ದಾಗ ನಮಗೆ ವ್ಯರ್ಥವೋ ಏನೋ ಎಂದು ತೋರುವ ಓಡಿ ಯಾಟವೆಲ್ಲವೂ ಉದ್ದೇಶವು ಸ್ವಲ್ಪಮಟ್ಟಿಗಾದರೂ ತಿಳಿದ ಮೇಲೆ