ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಸಾಹಿತ್ಯ. " ಸಂದೀಪನು ನಮ್ಮ ಸೀಮೆಯೆಣ್ಣೆಯ ಬುಡ್ಡಿಗಳ ಉರಿಯಂತೆ ನೀಚ ಸ್ವಭಾವದ ಮನುಷ್ಯ, ನಿಖಿಲನ ಬೆಳ್ಳಿಂಗಳಲ್ಲಿ ಇದ್ದ ಪತಂಗವು ಬಂದು ಈ ಬುಡ್ಡಿಯ ದೀಪಕ್ಕೆ ತನ್ನ ಸುಖವನ್ನೆಲ್ಲಾ ಬಲಿಹಾಕುವುದನ್ನು ನೆನೆದರೆ ಆಗುವ ದುಃಖವನ್ನು ಈ ಕತೆಯನ್ನು ಓದಿದರೆಯೇ ತಿಳಿಯಬಹುದು. ಕೊನೆಗೆ ಸಂದೀಪನ ರಾಜಕೀಯ ವ್ಯಾಪಾರಗಳಿಂದ ಊರಲ್ಲಿ ಬಂದು ದೊಂಬಿ ಎದ್ದು ನಿಖಿಲನು ಅದನ್ನು ನಿಲ್ಲಿಸಹೋಗಿ ಏಟುತಿಂದು ಜ್ಞಾನ ತಪ್ಪಲು ಅವನನ್ನು ಯಾರೂ ಮನೆಗೆ ಕರೆತರುವರು. ಅವನು ಬದುಕು ವನೋ ಇಲ್ಲವೋ ಕವಿಯು ಹೇಳುವುದಿಲ್ಲ, ಈ ಸಮಯಕ್ಕೆ ಸ್ವಲ್ಪ ಮುಂದೆಯೇ ವಿಮಲೆಗೆ ಜ್ಞಾನೋದಯ ಉಂಟಾಗಿರುವುದರಿಂದ 'ದೇವರೇ, ನಿಖಿಲನು ಬದುಕಲಿ' ಎಂದು ನಾವು ಆಸೆಪಡುತ್ತೇವೆ.ಇಲ್ಲದೆ ಇದ್ದರೆ ಅವನು ಸಾಯುವುದೇ ಸರಿ ಎನ್ನುತ್ತಿದ್ದೆವು. ಈ ಕತೆಯನ್ನು ಓದಿ ಅತಿ ಪರಿತಾಪಪಟ್ಟ ಬಂಗಾಳೀ ಮಹಿಳೆಯೊಬ್ಬರು, ಕವಿಯು ಈ ದುಃಖದ ಕತೆಯನ್ನು ಬರೆದ ಉದ್ದೇಶವೇನಿರಬಹುದು, ಇದನ್ನು ಓದಿದವರಿಗೆ ಇದರಿಂದ ಉಪಯೋಗವೇನು, ಕವಿಯ ಅಭಿ ಪ್ರಾಯವು ರಾಜಕೀಯ ವ್ಯಾಪಾರದಲ್ಲಿ ಸ್ತ್ರೀಯರು ಕೈಹಾಕಕೂಡದೆಂ ತಲೆ, ಇಲ್ಲ ನೌಷಾದಲ್ಲಿರುವ ಸ್ತ್ರೀಯರು ಹೊರಗೆ ಒಂದೊಡನೆ ಈ ಕತೆಯಲ್ಲಿ ವಿಮಲೆ ಕೆಡುವಂತೆ ಕೆಡುವರೆಂತಲೆ,” ಎಂದು ಯೋಚಿಸಿರ ಬೇಕು, ರವೀಂದ್ರನಾಥಠಾಕೂರರವರು ಬ್ರಹ್ಮಸಮಾಜಕ್ಕೆ ಸೇರಿದ ವರು, ಆ ಸಮಾಜದಲ್ಲಿ ಸ್ತ್ರೀಯರು ಇಂಥ ಕೆಲಸಕ್ಕೆ ಬರುವುದಕ್ಕೆ ಅವ ಕಾಶ ಉಂಟು. ಈ ಮಹಿಳೆಯ ಪ್ರಾಯಶಃ ಘೋಷಾಪದ್ದತಿಯಲ್ಲಿ ಇರುವರೆಂದು ತೋರುತ್ತದೆ, ಅದರಿಂದ ಇದು ಘೋಷಾದ ಸ್ತ್ರೀಯರ ನ್ನು ಕುರಿತು ಬರೆದಿರುವ ಕತೆಯೆಂದು ತಿಳಿದರೇನೋ, ಇಲ್ಲವೆ ಘೋಷಾ ದಲ್ಲಿಯೇ ಇದ್ದರೆ ಸ್ತ್ರೀಯರು ವಿಮಲೆಯಂತೆ ಕೆಡುವ ಸಂಭವವೇ ಇಲ್ಲ ವೆಂಬ ಅಭಿಪ್ರಾಯದಿಂದಲೋ ಏನೋ, ಅವರು ಠಾಕೂರರನ್ನು ಈ ಕತೆಯ ಉದ್ದೇಶವೇನೆಂದೂ, ಇದು ನಡೆದದ್ದು ಪೂರ್ವಾಚಾರವನ್ನು ಬಿಡದ ಜನರಲ್ಲಿಯೇ ಅಥವಾ ನವೀನ ನಾಗರಿಕತೆಯ ಜಾಲಕ್ಕೆ ಸಿಕ್ಕಿದ ವರಲ್ಲಿಯೇ ಎಂದು ಕೇಳಿ ಅವರಿಗೆ ಒಂದು ಕಾಗದವನ್ನು ಬರೆದಂತೆ