62 ಸಾಹಿತ್ಯ. ಇಟ್ಟುಕೊಳ್ಳಬಹುದು ; ಅದು ನೀತಿಗೆ ಅನುಸಾರವಾಗಿರಬೇಕೆ ಇಲ್ಲವೆ; ನೀತಿಗೆ ಅನುಸಾರವಾಗಿಲ್ಲದ ಸಾಹಿತ್ಯವನ್ನು ಒಳ್ಳೆಯದೆನ್ನು ವುದೆ ಕೆಟ್ಟು ದೆನ್ನು ವುದೆ ; ಎಂಬುದನ್ನು ಕವಿಯಪರವಾಗಿ ಹೇಗೋ ಹಾಗೆಯೇ ಓದುವವರ ಪರವಾಗಿಯೂ ನಾವು ಚರ್ಚೆಮಾಡಲು ಇಲ್ಲಿ ಪ್ರಯತ್ನ ಮಾಡಬಹುದು, ... ೧೫, ಚರ್ಚೆಗೆ ಸೇರದ ಕೆಲವು ಸಾಹಿತ್ಯಭಾಗಗಳು. ಮೊದಲಲ್ಲಿ ಈ ವಿಧವಾದ ಸಂದೇಹ ಬರದಂತ ಕೆಲವು ಸಾಹಿತ್ಯ ಭಾಗಗಳನ್ನು ಕುರಿತು ಒಂದೆರಡು ಮಾತನ್ನು ಹೇಳಬಹುದು, ಆವೇಶವೇ ಮೊದಲಿಂದ ಕೊನೆಗೂ ಕಾರಣವಲ್ಲದ ಸಾಹಿತ್ಯ ಶಾಖೆಯಲ್ಲಿ ಅದದಕ್ಕೆ ತಕ್ಕ ಉದ್ದೇಶವೇ ಇರುವುದಕ್ಕೆ ಸಂದೇಹವೇನೂ ಇಲ್ಲ. ಕೃತಿ ವಿಮರ್ಶೆ ಎನ್ನೊಣ, ಅದರಲ್ಲಿ ನಿರ್ದಿಷ್ಟ ಕೃತಿಯ ಅರ್ಥವನ್ನು ವಿವರ ಪಡಿಸುವ ಉದ್ದೇಶವಿರಲೇಬೇಕು ; ಅಥವಾ ಗ್ರಂಥಕರ್ತನ ಭಾವಗಳನ್ನು ಚರ್ಚಿಸಿ ಅವು ಸರಿಯೇ ತಪ್ಪೇ ಎಂದು ಹೇಳುವ ಉದ್ದೇಶವಿರಬೇಕು. ಇತಿಹಾಸವನ್ನು ಬರೆಯುವುದರಲ್ಲಿ ಸಾಹಿತ್ಯಕ್ಕೆ ಸೇರಿದಂತ ಗ್ರಂಥಗಳ ನ್ನು ಬರೆಯುವರೆನ್ನೋಣ, ಅವುಗಳಲ್ಲಿ ಪ್ರಪಂಚದ ಐತಿಹಾಸಿಕ ವಿಷಯ ಗಳಿಂದ ಒಂದು ವಿಧವಾದ ಪಾಠವನ್ನು ಕಲಿಯುವುದು ಆವಶ್ಯಕ ವೆಂಬುದು ತೋರುವಂತೆ ಅವುಗಳನ್ನು ಬರೆಯಬಹುದು. ಹೀಗೆ ಸಾಹಿತ್ಯದ ಒಂದು ಅಂಗ ಮಾತ್ರ ಆದ ಬರವಣಿಗೆಯಲ್ಲಿಯ ರೀತಿಯಲ್ಲಿ ಸಾಹಿತ್ಯವಾಗಿದ್ದರೂ ಇತರ ಮುಖ್ಯ ವ್ಯಾಪಾರಗಳಿಗೆ ಸೇರಿದ ಗ್ರಂಥ ಗಳಲ್ಲಿಯೂ ಸ್ಪಷ್ಟವಾದ ಒಂದು ಉದ್ದೇಶವು ಕೆಲವು ವೇಳೆ ಇರಲೇ. ಬೇಕು. ಇದೇ ರೀತಿಯಲ್ಲಿ ಸಾಹಿತ್ಯವಾದರೂ ನಿಯಮಭೇದದಿಂದ ನೀತಿಯ ಮಾಪನಕ್ಕೆ ಒಳಗಾಗದ ಗ್ರಂಥಸಮುದಾಯ ಒಂದುಂಟು. ಕೃಷ್ಣ ಗೋಪಿಕೆಯರ ಕ್ರೀಡೆಯನ್ನು ಕುರಿತು ಬೇಕಾದ ಕತೆಗಳನ್ನು ಗ್ರಂಥಕರ್ತನು ಬರೆಯಬಹದು ; ಅವುಗಳಲ್ಲಿ ಬೇಕಾದ ವಿಷಯಗಳನ್ನು ವರ್ಣಿಸಬಹುದು. ಕೃಷ್ಣನನ್ನು ದೇವರೆನ್ನುವವರಿಗೆ ಅದು ತಪ್ಪಾಗಿ
ಪುಟ:ಸಾಹಿತ್ಯ1924.djvu/೭೫
ಗೋಚರ