64 ಸಾಹಿತ್ಯ. ನೀತಿ, ಆದದ್ದರಿಂದ ಪ್ರಾಯಶಃ ಅದನ್ನು ಗಣನೆಗೆ ತಂದುಕೊಳ್ಳುವುದು ಆವಶ್ಯಕವೆಂದು ಎಲ್ಲರೂ ಒಪ್ಪುವರು. ಆದರೂ ಕವಿವರರಾದ ಠಾಕೂ ರರು ಹೇಳಿರುವಂತೆ ತಿಳಿದಂತ ಜನರನೇಕರು ಕತೆಯನ್ನು ಬರೆಯುವ ಉದ್ದೇಶ ಕತೆಯನ್ನು ಬರೆಯುವುದೇ ಎಂದು ಹೇಳುವರು, ಈ ಪಕ್ಷ ದವರಲ್ಲಿ ಕೆಲವರ ಅಭಿಪ್ರಾಯವು ಕತೆ ಓದುವುದಕ್ಕೆ ಚೆನ್ನಾಗಿದ್ದರೆ ಸರಿ, ವರ್ಣನೆ ಉತ್ಸಾಹಕಾರಿಯಾಗಿದ್ದರೆ ಸರಿ ಎಂಬುದು, ಅದು ಓದುವವರಲ್ಲಿ ಯಾವ ಭಾವಗಳನ್ನುಂಟುಮಾಡುವುದೋ ಎನ್ನುವ ಯೋಚನೆ ಇವರಿಗೆ ಇಲ್ಲಇವರು ಕಲಾಕೌಶಲದಲ್ಲಿ ಮಾತ್ರ ಕುತೂಹಲರಾದವರು. ಈ ಮತವನ್ನು ಇಂಗ್ಲೀಷಿನಲ್ಲಿ Art for art's sake ಎಂದು ಹೇಳು ತಾರೆ, ಇದಕ್ಕೆ ಪ್ರತಿಯಾಗಿ ಇನ್ನೊಂದು ಮತ ಉಂಟು, ಅದರಲ್ಲಿ ಕತೆ ಮಾತ್ರ ಚೆನ್ನಾಗಿದ್ದರೆ ಸಾಲದು ಅದು ನಾವ್ರ ಅನುಭವದಿಂದ ಸರಿ ಯೆಂದು ತಿಳಿದಿರುವ ಯಾವದಾರಿಗೂ ವಿರೋಧವಾದ ದಾರಿಯನ್ನು ಹೇಳಿಕೊಡಬಾರದು ಎನ್ನು ವುದು ಮುಖ್ಯ ಭಾವವು, ವರ್ಣನೆಯನ್ನು ಓದಿದರೆ ಉತ್ಸಾಹವಾಗಬಹುದು ; ಅದರಿಂದ ಮನಸ್ಸು ಕೆಡುವದಾ ದರೆ ಅದನ್ನು ಓದುವುದು ಸರಿಯೇ ? ಆ ವರ್ಣನೆಯು ಎಷ್ಟೇ ಸುಂದರ ವಾದ ವಸ್ತು ಅಥವಾ ಸನ್ನಿವೇಶವನ್ನು ಕುರಿತದ್ದಾದರೂ ಅದು ಅಸಾಧುವೇ, ನೀತಿಗೆ ಒಳಗಾಗದೆ ಸೌಂದರ್ಯದ ಅನ್ವೇಷಣದಲ್ಲಿ ನಿರತರಾದರೆ ಎಷ್ಟು ತೊಂದರೆ ಬರುವುದೆಂಬುದನ್ನು ಯೋಚಿಸಿರುವವರು ಈ ಮತವನ್ನು ಒಪ್ಪುವರು, ಮಗನನ್ನು ಕೆಡಿಸುವದಾದರೆ ಮಾಘ ಕಾವ್ಯವು ಬೇಡ. ಎರಡು ಪಕ್ಷಗಳ ವಾದ. ಕಲಾಪಕ್ಷಪಾತಿಗಳೂ ನೀತಿ ಪಕ್ಷಪಾತಿಗಳೂ ತಮ್ಮ ತಮ್ಮ ಅಭಿ ಪ್ರಾಯಗಳಿಗೆ ಪ್ರಾಶಸ್ತ್ರವನ್ನು ಕೊಡುವುದರಲ್ಲಿ ಪ್ರತಿ ಪಕ್ಷದವರ ಅಭಿಪ್ರಾಯವು ಎಷ್ಟರಮಟ್ಟಿಗಾದರೂ ಸಮ್ಮತವೇ ಎಂದು ಯೋಚಿಸು ವುದಿಲ್ಲ. ಇವರಿವರಿಗೆ ಬರುವ ವಿವಾದವನ್ನು ಸ್ಯಾಮ್ಯುಯಲ್ ಪೀಕಾಕ್ ಎಂಬ ಗ್ರಂಥಕಾರನು ತನ್ನ ನಾವಲು ಒಂದರಲ್ಲಿ ಸ್ವಲ್ಪ ಹಾಸ್ಯರಸಯುಕ್ತ ವಾಗಿ ವರ್ಣಿಸಿದಾನೆ, ಕಲಾಪಕ್ಷಪಾತಿಯೊಬ್ಬನ ಮನೆಗೆ ಅವನ
ಪುಟ:ಸಾಹಿತ್ಯ1924.djvu/೭೭
ಗೋಚರ