ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಿತ್ಯ. 85 ಸ್ನೇಹಿತ ನೀತಿಪಕ್ಷಪಾತಿಯೊಬ್ಬನು ಒರುವನು. ಕಲಾಪಕ್ಷಪಾತಿಯು ಅಲ್ಲಲ್ಲಿ ಕಣ್ಣಿಗೆ ಅಂದವಾದ ಚಿತ್ರಗಳನ್ನೂ ವಿಗ್ರಹಗಳನ್ನೂ ಇರಿಸಿ ದ್ವಾನೆ, ಅವುಗಳಲ್ಲಿ ಒಂದು Sleeping Venus ವಿಗ್ರಹ, ವೀನಸ್‌ ವಿಗ್ರಹವು fಕರ ಪುರಾಣದ ಸುಂದರಿಯಾದ ದೇವತೆಯೊಬ್ಬಳ ಆಕಾರವನ್ನು ಅರ್ಧಸಸ್ತ್ರ ಅಥವಾ ಪೂರ್ಣಪ್ರಸ್ತವಾದ ವಸ್ತ್ರದೊಡನೆ ತೋರಿಸುತ್ತದೆ. ಇಂತಹ ವಿಗ್ರಹವನ್ನು ನೋಡಿಯ ಮನಸ್ಸು ಕೇವಲ ಶುಚಿಯಾಗಿಯೇ ಇರಬೇಕಾದರೆ ಸಾಮಾನ್ಯನಿಗೆ ಸಾಧ್ಯ ವಲ್ಲದ ಮನೋದಾರ್ಢವು ಬೇಕು. ಈ ಸುಂದರವಾದ ನಗ್ನ ವಿಗ್ರಹ ವನ್ನು ಮಲಗಿರುವಂತೆ ತೋರುತ್ತಿದ್ದ ಆ ವೀನಸ್ ಪ್ರತಿಮೆ ಯನ್ನು ನೋಡಿ ನೀತಿಪಕ್ಷಪಾತಿಗೆ ಅಸಮಾಧಾನವಾಯಿತು. ಶಿಲ್ಪ ದಲ್ಲಿ ಇದು ಮಾಘಕಾವ್ಯ, ಅವನು ಕಲಾಪಕ್ಷಪಾತಿಯನ್ನು ಕುರಿತು (ಅಯಾ, ನಿಮಗೆ ಒಬ್ಬ ಮಗಳಿದ್ದಾಳೆ, ವಯಸ್ಸಾದ ಹುಡುಗಿ, ನೀವು ಸಂಸಾರಿಗಳು, ಹೇಳಿ, ಅದು ಒಳ್ಳೆಯ ವಿಗ್ರಹ ಎನ್ನು ತ್ತೀರಾ” ಎಂದನು. ಕಲಾಪಕ್ಷಪಾತಿಯು ಇನ್ನದಕ್ಕಿಂತ ಒಳ್ಳೆಯ ವಿಗ್ರಹ ಎಲ್ಲಿಂದಬರಬೇಕು ಎಂದನು. “ ಒಳ್ಳೆಯ ದೆಂದರೆ ನಾನು ಹೇಳಿದ್ದು ಅದಲ್ಲ. ಅದು ಇರುವ ರೀತಿಯನ್ನು ,- “ರೀತಿ ಏನಾಗಿದೆ ? ಚೆನ್ನಾಗಿದೆಯಲ್ಲ; ಸ್ವಭಾವವಾಗಿ ಹೇಗಿರುವುದೊ ಹಾಗೆಯೇ ಇದೆ.-ಅದನ್ನೇ ನಾನು ಕೆಟ್ಟದು ಎನ್ನು ವುದು. ತಿಳಿ ದವರಿಗೆ ಅದರಿಂದ ಏನೂ ತೊಂದರೆ ಬರಲಾರದು, ತಿಳಿಯದವರಿಗೆ ಅದು ಬಟ್ಟೆಯಿಲ್ಲದ ಸ್ತ್ರೀರೂಪಮಾತ್ರವೆಂದು ಕಾಣುವುದು.”- ಕಾಣಲಿ. ಅದನ್ನು ನೋಡಿ ಜನರು ಮಾನವನ್ನು ಕಲಿಯಲಿ-'ಮಾನವನ್ನು ಕಲಿಯುವುದೇ ? ನನಗೆ ಬೇಕಾದವನು ಯಾವನಾದರೂ ಮಾನ ವನ್ನು ಕಲಿಯಬೇಕಾದರೆ ನಾನು ಅವನನ್ನು ಮಲಗಿರುವ ವೀನಸಿನ ಬಳಿಗೆ ಕಳುಹಿಸುವುದಿಲ್ಲ.'-'ಮಾನವಲ್ಲವೆನ್ನುವಿರೇನು ? ನಾವು ಮಾನ ಮಾನ ಎನ್ನು ತ್ತೇವೆ, ನಮಗೆ ಅದರ ಸಮಾಚಾರವೇ ತಿಳಿಯದು. ಏಥೆನ್ಸಿನ ಜನರು ಇಂತ ಗೊಂಬೆಗಳನ್ನು ಬೇಕಾದಷ್ಟು ಇಟ್ಟುಕೊಂಡಿ ದ್ದರು, ಅವರು ನಮಗಿಂತ ಮಾನವಂತರಾಗಿದ್ದರು. ಇಟಲಿಯ