ಸಾಹಿತ್ಯ. ... ೧೭, ಸಂಸ್ಕಾರಗತವಾದ ಉದ್ದೇಶ. ಕಲೆಯ ಉಪಾಸರಕರ ಅಭಿಪ್ರಾಯವೇನು. Art for art's sake ಎಂದರೆ ಕಲೆಯ ಉಪಾಸನೆಯನ್ನು ಕಲೆಯು ಸಲುವಾಗಿಯೇ ಮಾಡಬೇಕು, ಆಶೋತ್ತರವನ್ನು ಇಟ್ಟುಕೊಂಡು ಮಾಡಬಾರದು ಎನ್ನು ವವರ ಅಭಿಪ್ರಾಯವೇನಿರಬಹುದು ? ಕಲೆಯೆಂಬು ದೊಂದಾದರೆಗರಿ, ಅದರಿಂದ ಒಳ್ಳೆಯದಾಗುವುದೊ ಕೆಟ್ಟುದಾಗು ವುದೋ ಅದರ ಉದ್ದೇಶವು ಕೆಟ್ಟುದೋ ಒಳ್ಳೆಯದೊ, ಅದನ್ನು ನಾವು ನೋಡಬೇಕಾದುದಿಲ್ಲವೆಂತಲೆ ? ಪ್ರಾಯಶಃ ಹೀಗೆಂದು ಅನೇಕರು ಹೇಳಲಾರರು, ಹೇಳುವವರು ಕೆಲವರು ಇದ್ದರೆ ಅವರು ಒಂದು ಮುಖ್ಯವಿಷಯವನ್ನು ಮರೆತಹಾಗಾಗುವುದು, ಅದರ ಸಲುವಾಗಿಯೇ ಅಪೇಕ್ಷಿಸುವುದೆಂದರೆ ಪರಾತ್ಪರವಸ್ತುವನ್ನು ಮಾತ್ರ ಹೇಳಬಹುದು. ಇನ್ನು ಯಾವುದೂ ಅದರ ಸಲುವಾಗಿಯೇ ಅದು ಅಪೇಕ್ಷಣೀಯವಲ್ಲವು. ಮನೆ, ಮಠ ; ರಾಜ್ಯ, ಕೋಶ ; ತಿಳಿವು, ಸೊಗಸು ; ಮನುಷ್ಯನು ತನ್ನ ಜೀವನದ ಫಲವನ್ನು ಪಡೆಯುವುದಕ್ಕಾಗಿ ನಡೆಯುತ್ತಿರುವ ಪಥದ ಇನ್ನು ಯಾವ ಮಜಲೇ ಆಗಲಿ ಅದರ ಸಲುವಾಗಿಯೇ ಅದನ್ನು ಅಪೇಕ್ಷಿಸಬಹುದಾದ ವಸ್ತುವಲ್ಲ. ಇ.ದೆಲ್ಲಕ್ಕೂ ವಿಾರಿದ ಫಲವೊಂದಿದೆ. ಅದು ಕುಶಲ ಕಲೆಗಳನ್ನು ವಿಾರಿದ್ದು, ಕುಶಲಕಲೆಗಳು ಅದನ್ನು ಪಡೆಯುವುದಕ್ಕೆ ಸಿದ್ಧವಾಗಿರುವ ಸಾಧನಗಳು ಮಾತ್ರ, ಸಾಹಿತ್ಯ ವೆಲ್ಲವೂ ಆ ಫಲವನ್ನು ಸಾಧಿಸುವ ಉದ್ದೇಶವನ್ನು ಇುದಾಗಿರಬೇಕು. ಎಂದರೆ ಅದರ ಉದ್ದೇಶವ ಸದುದ್ದೇಶವಾಗಿರಬೇಕು; ಅದು ಆ ಉದ್ದೇಶ ವನ್ನು ಸಾಧಿಸುವಂತದಾಗಿರಬೇಕು. ಇದನ್ನು ಯಾವ ವೀರ ಕಲಾ ಉಪಾಸಕರೂ ಒಪ್ಪುವರು. ಕುಶಲಕಲೆಗಳು ಮಾನವವರ್ಗದ ಕಾರಸಮುದಾಯದಲ್ಲಿ ಒಂದುಭಾಗ. ಅವು ಇತರ ಭಾಗಗಳಿಗೆ ಸಂಬಂಧಿಸಿಯೇ ಸಫಲವಾಗಬೇಕು. ತಾವೇ ಬೇರೆಯಾಗಿದ್ದು ಇನ್ನು ಯಾವುದರೊಂದಿಗೂ ಹೊಂದದೆ ಸಫಲವಾಗ ಲಾರವು. ಹಾಗಾದರೆ ಇದನ್ನು ಒಪ್ಪಿದರೂ ನೀತಿಪಕ್ಷಪಾತಿಯಮಾತಿಗೆ
ಪುಟ:ಸಾಹಿತ್ಯ1924.djvu/೮೦
ಗೋಚರ