ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ಸಾಹಿತ್ಯ, ಯಾದ ವೃತ್ತವನ್ನು ಸರಿಯಾದ ಪದ್ದತಿಯಲ್ಲಿ ಸದಸೌಷ್ಟವ ಬರುವಂತೆ ಬರೆಯುವನು, ಹಾಗಾದರೆ ಪದಕೋಶವನ್ನೂ ವ್ಯಾಕರಣಸೂತ್ರ ಗಳನ್ನೂ ಛಂದಸೂತ್ರಗಳನ್ನೂ ಅಡಿಗಡಿಗೆ ನೆನೆದುಕೊಂಡು ಬರೆಯು ವನೆ ? ಇದನ್ನು ಮಾಡುವುದಿಲ್ಲ. ಹೀಗೆ ಮಾಡಬೇಕಾದ ಸ್ಥಿತಿಯಲ್ಲಿ ರುವವನು ತಪ್ಪು ಪದಗಳನ್ನು ಉಪಯೋಗಿಸದೆ ಬಿಡನ್ನು, ವ್ಯಾಕರಣ ದಲ್ಲಿ ಎಡರಿಯೇ ತೀರುವನು, ವೃತ್ತದ ಗೌರವವನ್ನು ವಿಾರಿಯೇ ಮುಗಿಯುವನು. ಹೀಗೆ ತಪ್ಪುಗಳನ್ನು ಮಾಡದೆ ಮಿತವಾಗಿಯೂ ಬಹಳ ಎಚ್ಚರಿಕೆಯಿಂದಲೂ ಸರಿಯಾಗಿಯೇ ಬರೆದರೆ ಮೇಲೆಯೇ ಬೆವರು ಕಾಣುವ ಸೋತಿರುವ ನೀರಸವಾದ ಕಾವ್ಯವನ್ನು ಬರೆಯುವನು. ಕೊಶಸೂತ್ರಗಳನ್ನು ಹಿಡಿಯದೆ ಉತ್ತಮ ಕಾವ್ಯವನ್ನು ಒರೆಯುವವನು ಕೊಶಸೂತ್ರಗಳನ್ನು ವಿಾರದೆ ಬರೆಯಲು ಹೇಗೆ ಶಕ್ತನಾದನು ? ಅವನು ಕೊಶಸೂತ್ರಗಳನ್ನು ಹಿಡಿದು ಮುಗಿಸಿ ಕಾವ್ಯವನ್ನು ಬರೆಯುವುದಕ್ಕೆ ಬಂದಿದ್ದಾನೆ. ಭಾಷೆಯು ಅವನು ಮಗುವಾದಂದಿನಿಂದ ಕಲಿತ ಭಾಷೆ ; ಅವಸ್ಥೆಗೆ ತಕ್ಕ ಮಾತು ತಾನಾಗಿ ಬರುವುದು, ವ್ಯಾಕರಣ ಛಂದಸ್ಸಿನ ಸೂತ್ರಗಳು ಅವನ ತಿಳಿವಿನಲ್ಲಿ ರಕ್ತದಲ್ಲಿ ಬಣ್ಣದಂತೆ ಲೀನವಾಗಿವೆ. ಕೇವಲ ಸೂತ್ರಗಳೂ ಅಲ್ಲ ಅವುಗಳ ಮಲತಂತ್ರವೇ ಅವನ ಹೃದಯ ಗತವಾಗಿದೆ. ಅವನು ಬರೆಯಲು ಯತ್ನ ಮಾಡಿದರೆ ಇವು ತಾನಾಗಿ ಹೊಂದಿಕೊಂಡು ಬರುವುವು. ಇದರಂತೆಯೇ ನಾವು ಉದ್ದೇಶ ಎನ್ನು ವುದೂ ನೀತಿ ಎನ್ನು ವುದೂ ಕವಿಯ ಆತ್ಮದ ಸಂಸ್ಕಾರದಲ್ಲಿ ಸೇರಿಹೋಗಿರಬೇಕು, ಆಗ ಅವನು ಬರೆಯುವ ಗ್ರಂಥದಲ್ಲಿ ವ್ಯಾಕ ರಣಸೂತ್ರಗಳೂ ಛಂದಸೂತ್ರಗಳೂ ಹೇಗೆ ಗೌರವವನ್ನು ಪಡೆ ಯುವವೋ ಹಾಗೆಯೇ ನೀತಿಯ ಓದುವವರ ಕ್ಷೇಮವೂ ಗೌರವಿ ಸಲ್ಪಡುವುವು, ನದಿಯಲ್ಲಿ ಆವೇಶದಿಂದ ಹರಿಯುವ ನೀರು ದಡ ಗಳನ್ನು ಗೌರವಿಸಿಯೇ ಹರಿಯುವುದು ; ಹರಿಯುವ ಆವೇಶವನ್ನೂ ಮರೆಯುವುದಿಲ್ಲ. ಕವಿಯ ಆವೇಶವು ಅವನ ಸಂಸ್ಕಾರದ ನೀತಿಗೆ ಅನುಗುಣವಾಗಿಯೇ ಇರುವುದು, ತನ್ನ ಅಕ್ಷಣವನ್ನೂ ಉಳಿಸಿ: ಕೊಳ್ಳುವುದು.