ಸಾಹಿತ್ಯ. $ ೧೮, ಕಾವ್ಯದ ಮೇಲೆ, - ಈ ಮತದ ಮುಖ್ಯ ತತ್ವ. ಕಾವ್ಯದಲ್ಲಿ ಉದ್ದೇಶವಿರುವುದು ಸಂಸ್ಕಾರದಲ್ಲಿ ಎಷ್ಟರಮಟ್ಟಿಗೆ ಅದು ಸೇರಿರುವುದೋ ಅಷ್ಟರಮಟ್ಟಿಗೆ ಮಾತ್ರ ಎಂಬುದೇ ಈ ಅಭಿ ಪ್ರಾಯವು, ಕವಿಯು ಒಂದು ವಿಧವಾದ ರಾಗಸಂಸ್ಕಾರವನ್ನೂ ಬುದ್ದಿ ಸಂಸ್ಕಾರವನ್ನೂ ಉಳ್ಳವನು, ಅವನಿಗೆ ಯಾವುದೋ ಒಂದು ವಿಷಯ ವನ್ನು ಕುರಿತು ಯೋಚಿಸುವುದರಲ್ಲಿ ಕೆಲವು ಭಾವನೆಗಳುಂಟಾಗಬಹುದು. ಅವು ಅವನ ಸಂಸ್ಕಾರಕ್ಕೆ ಅನುಗುಣವಾಗಿರುವುವ, ಆ ಭಾವನೆಗಳು ಉಬ್ಬಿ ಮನಸ್ಸನ್ನು ತುಂಬಿದಾಗ ಕಾವ್ಯವಾಗಿ ಪರಿಣಮಿಸುವುವು. ಆಗ್ಗೆ ಕೂಡ ಆ ಸಂಸ್ಕಾರದ ಫಲವನ್ನೆ ತೋರುವವ, ಆಲದ ಬೀಜ ದಲ್ಲಿ ಆಲದ ಮರದ ಎಲ್ಲಾ ಭಾಗಗಳೂ ಅಡಕವಾಗಿವೆ ಎಂದು ಶಾಸ್ತ್ರ ಜ್ಞರು ಹೇಳುತ್ತಾರೆ, ಬೀಜವ್ರ ಮರವಾಗಿ ಬೆಳೆಯುವುದು ವಿವರಣದ ನ್ಯಾಸ ಮಾತ್ರ, ಮೊದಲಿಂದ ಕೊನೆಗೂ ಆಲವು ಆಲವಾಗಿಯೇ ಇರು ವದು, ಇದರಿಂದ ಕವಿಯ ಸಂಸ್ಕಾರವು ಸರಿಯಾಗಿರಬೇಕಾದದ್ದು ಎಷ್ಟು ಮುಖ್ಯವೆಂದು ತೋರಬಹುದು, ಕಾವ್ಯ ಪ್ರಪಂಚದಲ್ಲಿ ಕೆಲಸಮಾಡು ವೆವೆನ್ನುವವರು ತಮ್ಮನ್ನು ಸೇರಿದ ಈ ಭಾರವನ್ನು ಸರಿಯಾಗಿ ತಿಳಿದು ತಾವು ತಾವು ಸರಿಯಾದ ಸಂಸ್ಕಾರವನ್ನು ಪಡೆಯುವುದಕ್ಕೆ ತಕ್ಕ ಪ್ರಯತ್ನ ವನ್ನು ಸರ್ವದಾ ಮಾಡುತ್ತಿರಬೇಕು, ಇದು ಓದುವವರ ಸಲುವಾಗಿ ಮಾತ್ರವಲ್ಲದೆ ತಮ್ಮ ಸಲುವಾಗಿಯ ಮಾಡಬೇಕಾದ ಪ್ರಯತ್ನ ವ್ರ, ಇದಿಷ್ಟನ್ನೂ ವಾಚಕವರ್ಗವು ಗ್ರಂಥಕಾರರಿಂದ ನಿರೀಕ್ಷಿಸ ಬಹುದು. ಕವಿಯ ಸಂಸ್ಕಾರವೂ ಸರಿಯಾದುದಾದರೆ ಅವನ ಗ್ರಂಥ ದಲ್ಲಿ ತೋರಿಬರಬಹುದಾದ ಉದ್ದೇಶವೂ ಸರಿಯಾದುದಾಗಿಯೇ ಇರ ಬೇಕು, ಅದರಲ್ಲಿ ತೋರಿಬರುವ ನೀತಿಯು ಸರಿಯಾದುದಾಗಿಯೇ ಇರಬೇಕು, ಅವುಗಳನ್ನು ಸರಿಯಿಲ್ಲದವುಗಳನ್ನಾಗಿ ಯಾರಾದರೂ ಕಂಡರೆ ಅದು ಓದುವವರ ತಪ್ಪೇ ಹೊರತು ಗ್ರಂಥಕಾರನ ತಪ್ಪಲ್ಲ. ಅಂತೂ ಕಾವ್ಯದ ಉದ್ದೇಶವೂ ನೀತಿಯ ವ್ಯಕ್ತವಾಗಿಯೇ ನಾವು ಒಪ್ಪ ತಕ್ಕುವಾಗಿಯೇ ಇರಬೇಕಾದದ್ದು ಆವಶ್ಯಕವಲ್ಲ.
ಪುಟ:ಸಾಹಿತ್ಯ1924.djvu/೮೪
ಗೋಚರ