ಸಾಹಿತ್ಯ ಹೋಗಿ ಒಳ್ಳೆಯದನ್ನು ಪಡೆಯುವುದು ಎನ್ನು ವುದು ಸುಲಭಸಾಧ್ಯವಲ್ಲ. ರಾಗಗಳಲ್ಲಿ ಸರಿಯಾದ ಭಾಗವಿದೆ, ಸರಿಯಲ್ಲದ ಭಾಗವಿದೆ. ಜೋಕೆ ಯಿಂದ ನೋಡಿಕೊಳ್ಳದಿದ್ದರೆ ಒಳ್ಳೆಯ ಸಂಸ್ಕಾರ ಹೇಗೆ ಬರಬಹುದೋ ಕೆಟ್ಟ ಸಂಸ್ಕಾರವೂ ಹಾಗೆಯೇ ಬರಬಹುದು. ಈ ಕೆಟ್ಟ ಸಂಸ್ಕಾರವನ್ನು ಕವಿಯು ತಪ್ಪಿಸಿಕೊಳ್ಳಬೇಕು, “ ಅದು ಅವನ ಇಷ್ಟ ಅವನ ಸಂಸ್ಕಾ ರವು ಅವನದೇ ನಮಗೇನು ” ಎಂದರೆ ಅದಕ್ಕೆ ನಾವು ಉತ್ತರವಾಗಿ (* ಆಗಬಹುದು, ಅವನ ಸಂಸ್ಕಾರವು ಗ್ರಂಥವನ್ನು ಒದರಿದ ಒಡನೆ ಮುಗಿಯಿತು, ಅಚ್ಚು ಹಾಕುವುದಾದರೆ ನಮ್ಮ ಹಿತಾಹಿತವನ್ನು ಯೋಚಿಸಬೇಕು.” ಎಂದು ಹೇಳಬೇಕಾಗುವುದು. ಪ್ರಚುರಪಡಿಸುವ ವರೆಗೆ ಒಂದು ಕಾವ್ಯದ ವಿಷಯದಲ್ಲಿ ಗ್ರಂಥಕರ್ತನ ಅಭಿಪ್ರಾಯದಷ್ಟು ಮುಖ್ಯವಾದ ಅಭಿಪ್ರಾಯ ಯಾವುದೂ ಇಲ್ಲ, ಪ್ರಚುರಪಡಿಸಿದಮೇಲೆ ಅವನ ಅಭಿಪ್ರಾಯದಷ್ಟು ಅಪ್ರಮುಖವಾದ ಅಭಿಪ್ರಾಯವೂ ಇಲ್ಲ. ವಿಷವನ್ನು ಕೂಡಿಟ್ಟುಕೊಂಡು ನಾಗರಹಾವು ನನ್ನ ಸಂಸ್ಕಾರವನ್ನು ಮುಗಿಸಿಕೊಳ್ಳಬೇಕು, ಕಚ್ಚುತ್ತೇನೆ ಎಂದು ಬಂದರೆ ನಾವು ಅದರ ತಲೆಯನ್ನು ಚಚ್ಚಿ ನಮ್ಮ ಸಂಸ್ಕಾರವನ್ನು ಮುಗಿಸಿಕೊಳ್ಳಬೇಕಾಗು ವುದು, ಈ ಸಾಮ್ಯವು ದುಷ್ಟ ವೆಂದು ಕೆಲವರಿಗೆ ತೋರಬಹುದು. ಅದು ಅಷ್ಟು ದುಷ್ಟವಲ್ಲ. ವಿಷಪ್ರಾಯವಾದ ಸಾಹಿತ್ಯಕ್ಕಲ್ಲದೆ ಅತಿ ವೀರ ಕಲಾ ಉಪಾಸಕರ ಈ ಸಮರ್ಥನವು ಬೇಕಾಗಿಲ್ಲ, ಅಂಥ ಸಾಹಿ ತ್ಯಕ್ಕೆ ಈ ಮಾತು ಹೆಚ್ಚಾದುದಲ್ಲ. - $ ೧೯, ಕಾವ್ಯದ ಉದ್ದೇಶ ನೀತಿಗಳ ಲಕ್ಷಣ. ಕಾವ್ಯ ನಿರ್ಮಾಣ ಸೌಲಭ್ಯಕ್ಕಾಗಿಯ ಪಾಠಕರ ಸ್ಥಿರವಾದ ಶ್ರೇಯಸ್ಸಿಗಾಗಿಯ ಕಾವ್ಯದ ಉದ್ದೇಶವು ಕಾವ್ಯಕ್ಕೆ ಮೂಲವಾದ ಸಂಸ್ಕಾರದಲ್ಲಿ ಒಂದಾಗಿರಬೇಕೆಂದೂ ಕಾವ್ಯದಲ್ಲಿ ತೋರಿಬರುವ ಆವ ಶ್ಯಕವಿಲ್ಲವೆಂದೂ ಅದರಲ್ಲಿ ಪ್ರಯತ್ನ ಪೂರ್ವಕವಾಗಿ ಸೇರಿಸತಕ್ಕದ್ದಲ್ಲ ವೆಂದೂ ಈಗ ಹೇಳಿದ್ದಾಯಿತು, ಹೀಗೆ ಸಂಸ್ಕಾರದ ಸೌಜನ್ಯದಿಂದ ಪಾಠಕರು ತೃಪ್ತರಾಗಿರಬೇಕಾದದ್ದಕ್ಕೆ ಇನ್ನು ಕೆಲವು ಕಾರಣಗಳುಂಟು. ಅವುಗಳನ್ನು ಇಲ್ಲಿ ಸ್ವಲ್ಪ ವಿವರವಾಗಿ ಹೇಳುತ್ತದೆ.
ಪುಟ:ಸಾಹಿತ್ಯ1924.djvu/೮೭
ಗೋಚರ