ಸಾಹಿತ್ಯ. 77 ಸಂಸ್ಕಾರದ ಮೂಲಕ ಹಾಲು ಇರುವುದು ಏತಕ್ಕಾಗಿ ಎಂದು ಹಾಲಿನ ಸ್ವಭಾವವನ್ನೂ ಅದರ ರುಚಿಯನ್ನೂ ಚರ್ಚೆಯಿಂದಲೂ ವರ್ಣನೆ ಯಿಂದಲೂ ತಿಳಿಯುವದಕ್ಕೂ ಅದರ ರುಚಿಯನ್ನು ತಿಳಿಯುವ ನಾಲಿ ಗೆಯ ಸ್ವಭಾವವನ್ನೂ ಜೀರ್ಣಿಸಿ ದೇಹಕ್ಕೆ ಸೇರಿಸುವ ಜಠರದ ಸ್ವಭಾವವನ್ನೂ ವಿವರಗೊಳಿಸಿಕೊಳ್ಳುವದಕ್ಕೂ ಮೊದಲೇ , ಅದನ್ನು ಕುಡಿಯುವ ಮಗು ದೊಡ್ಡದಾಗಿ ಅದರ ಒಂದು ಉದ್ದೇಶವನ್ನು ನಿಜವಾಗಿಯೂ ನೆರವೇರಿಸುತ್ತದೆ. ಕಾವ್ಯವನ್ನು ಓದಿ ನಾಲ್ಕಾರು ಭಾವ ಗಳು ತೋರಿಬಂದರೆ ಅವುಗಳಲ್ಲಿ ನಮ್ಮ ಸ್ಮಿತಿಗೆ ಒಪ್ಪುವ ಭಾವವನ್ನು ನಾವು ಉಪಯೋಗಿಸೋಣ. ಎಂದರೆ ನಮ್ಮ ಇಷ್ಟಕ್ಕೆ ಸರಿಯಾಗಿ ಅದರ ಅರ್ಥವನ್ನು ತಿದ್ದಿಕೊಳ್ಳೋಣವೆಂದಲ್ಲ ; ತೋರುವ ಅರ್ಥಗಳಲ್ಲಿ ಯಾವದು ನಮ್ಮ ಸಂದರ್ಭಕ್ಕೆ ಸಂಬಂಧಪಟ್ಟುದೋ ಅದಕ್ಕೆ ನಾವು ಮನಸ್ಸು ಕೊಡೋಣ ಎಂದು, ಆದರೆ ಆ ನಾಲ್ಕಾರು ಭಾವಗಳೂ ಕಾವ್ಯದ ಭಾವಗಳೇ ಹೌದು. ವ್ಯಕ್ತವಲ್ಲ ದಿದ್ದರೂ ಮಲದಲ್ಲಿ ಭಾವಗಳಿರುವುವು. ಇದಕ್ಕೆ ತೋರುವ ಒಂದು ಅಡ್ಡಿಯ ಮಾತನ್ನು ಇಲ್ಲಿ ಹೇಳ ಬಹುದು, ಷೇಕ್ಸ್‌ಪಿಯರ ಒಥೆಲೋ ನಾಟಕದ ಉದ್ದೇಶವೇನೆಂದು ಕೇಳಿದರೆ ಷೇಕ್ಸ್‌ಪಿಯರು ಹೇಳಲು ಕಷ್ಟಪಡಬೇಕಾಗಿತ್ತು ಎಂದೂ ಕಷ್ಟವನ್ನು ಪಟ್ಟು ಒಂದು ಉದ್ದೇಶವನ್ನು ಅವನು ಹೇಳಿದ್ದರೆ ಅದು ತಪ್ಪಾಗುತ್ತಿತ್ತೆಂದೂ ಬ್ರಾಹ್ಮಣ ಸಮಾಜದ ಮೇಂಬರಾದವನು ವರ್ಣ ಸಂಕರ ಕೂಡದೆಂಬುದನ್ನು ಸಾಧಿಸುವುದೇ ಅದರ ಉದ್ದೇಶವೆನ್ನುತ್ತಿದ್ದ ನೆಂದೂ, ಸ್ತ್ರೀಯರ ಸ್ವಾತಂತ್ರಕ್ಕೆ ವಿರೋಧಿಯಾದವನು ಹೆಂಗಸರು ಗಂಡಸರೊಂದಿಗೆ ಧಾರಾಳವಾಗಿ ಓಡಿಯಾಡುವುದರ ತೊಂದರೆಯನ್ನು ತಿಳಿಸುವುದೇ ಅದರ ಉದ್ದೇಶವೆಂದು ಹೇಳುತ್ತಿದ್ದನೆಂದೂ ಮೊದಲಾಗಿ ಠಾಕೂರರವರು ಇನ್ನೊಂದು ಕಡೆ ಹೇಳಿದಾರೆ. ಇದು ಪ್ರಾಯಶಃ ಒಪ್ಪಬಹುದಾದ ಮಾತಲ್ಲ. ಬ್ರಾಹ್ಮಣ ಸಮಾಜದವನೂ ಸ್ತ್ರೀ ಸ್ವಾತಂತ್ರವಿರೋಧಿಯ ಒಥೆಲೋ ನಾಟಕಕ್ಕೆ ಯಾವ ಉದ್ದೇಶ ವನ್ನಾದರೂ ಆರೋಪಿಸಲಿ, ಅದು ನಾಟಕದಲ್ಲಿ ಸುಲಕ್ಷಣವಾಗಿ
ಪುಟ:ಸಾಹಿತ್ಯ1924.djvu/೯೦
ಗೋಚರ