ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78 ಸಾಹಿತ್ಯ. ಸೇರುವುದಾದರೆ ಅದನ್ನು ಅವನಿಗೆ ಬೇಕಾದ ಉದ್ದೇಶವೆನ್ನೋ ಣ. ಆದರೆ ಗ್ರಂಥಕಾರನಿಗೆ ಇಂಥ ಸಂದರ್ಭದಲ್ಲಿ ಹೇಳಲು ಸಾಧ್ಯವಾದ ಯಾವ ಒಂದು ಅಭಿಪ್ರಾಯವಾದರೂ ಮೂಲದಲ್ಲಿ ಇರುವುದರಲ್ಲಿ ಸಂದೇಹವಿಲ್ಲ, ಷೇಕ್ಸ್‌ಪಿಯರು ಯಾವುದೋ ಒಂದು ವಿಷಯವನ್ನು ಯೋಚಿಸುತ್ತಿದ್ದು ಅದರಿಂದ ತೋರಿದ ಭಾವಗಳನ್ನು ಆ ನಾಟಕವಾಗಿ ಬರೆದನು, ಆ ಭಾವಗಳಲ್ಲಿ ಮುಖ್ಯವಾದುವು ಯಾವುವು ? ಕವಿಯನ್ನು ಯಾರಾದರೂ ಕೇಳಿದ್ದರೆ ಅವನು ಹೇಳುತ್ತಿದ್ದನೆಂದು ತೋರುತ್ತದೆ. ಠಾಕೂರರ ಈ ಮೇಲೆ ಹೇಳಿದ ಸದ್ಯದ ಮಾತನ್ನು ನೋಡೋಣ. ಸದ್ಯಕ್ಕೆ ಅರ್ಥವೇನೋ ನಾಲ್ಕಾರು ಮುಖವಾಗಿ ತೋರಬಹುದು. ಅವರು ಅದನ್ನು ಬರೆಯುವುದಕ್ಕೆ ಮೊದಲು ಅದು ಅವರ ಮನಸಿನಲ್ಲಿ ಆಕಾರವನ್ನು ಪಡೆಯಿತಷ್ಟೆ, ಯಾವ ವಿಷಯವನ್ನು ಕುರಿತು ಯೋಚಿಸು ವಲ್ಲಿ ಈ ಭಾವವು ಅವರ ಮನಸ್ಸಿಗೆ ಬಂದಿತು ? ಅದು ಅವರಿಗೆ ಜ್ಞಾಪಕ ವಿದ್ದು ಅದನ್ನು ಅವರು ಹೇಳಬಲ್ಲರಾದರೆ ಈ ನಾಲ್ಕಾರು ಮುಖವಾದ ಅರ್ಥದಲ್ಲಿ ಯಾವುದು ಅವರ ಪರವಾದ ಅರ್ಥವೆಂದು ತಿಳಿಯುವುದು 4“ ಮನೆಯ ಒಳಗೂ ಮನೆಯ ಹೊರಗೂ ಎಂಬ ಅವರ ಕತೆಯ ಮಾತನ್ನು ಯೋಚಿಸೋಣ, ಕತೆಯಲ್ಲಿ ರಾಜಕೀಯರು ಕೆಲವರ ಅಚಿಂತ್ಯವಾದ ದೌಷ್ಟವನ್ನು ವರ್ಣಿಸಿರುವುದರಿಂದ ಕೆಲವರು ರಾಜ ಸ್ತ್ರೀಯರು ತಮ್ಮ ಕಾರ್ಯದಲ್ಲಿ ನೀತಿಬಾಹಿರರಾಗಿದ್ದದ್ದನ್ನು ನೋಡಿ ಕವಿವರರು ಅಸಮಾಧಾನಪಟ್ಟಿದ್ದರೆಂದು ವ್ಯಕ್ತವಾಗುತ್ತದೆ, ನಿಮ್ಮ ಕತೆಯ ಉದ್ದೇಶವೇನು ಎಂದು ಕೇಳುವಾಗ ಇದು ಹೌದೇ ಅಲ್ಲವೇ ಎಂಬುದು ತಿಳಿಯಲಿ ಎಂಬ ಆಸೆಯಿಂದ ನಾವು ಕೇಳುವುದು, ಕವಿಗೆ ಯಾವ ಕಾರಣದಿಂದಲಾದರೂ ಇದನ್ನು ಹೇಳುವುದಕ್ಕೆ ಇಷ್ಟವಿಲ್ಲದಿದ್ದರೆ ನಾವು ಬಲವಂತ ಮಾಡಬೇಕಾದದ್ದಿಲ್ಲ. ಆದರೆ ಯಾವ ಅಡ್ಡಿಯ ಇಲ್ಲದೆ ಅವರು ಹೇಳಿದರಾದರೆ ಆಗ್ಯ ಕಾವ್ಯದ ಮೂಲಭಾವವು ತಿಳಿದ ಹಾಗಾಗುವುದು, ಉದ್ದೇಶವೆಂದಲ್ಲ, ಮೂಲಭಾವವೆಂದು ಹೇಳಿದೆ. ಮಲಭಾವವು ತಿಳಿದರೂ ತಿಳಿಯದಿದ್ದರೂ, ಉದ್ದೇಶವು ವ್ಯಕ್ತವಾ ದರೂ ಆಗದಿದ್ದರೂ ಕಾವ್ಯವು ಉತ್ತಮವಾದದ್ದರಿಂದ ಅದರಿಂದ ಬರುವ