ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಸಾಹಿತ್ಯ: ಸಾಮಾನ್ಯನು ನೀತಿ ಎನ್ನು ವುದು ಮಲಸೂತುಗಳಿಂದ ಸ್ಪಷ್ಟವಾಗಿ ಆವರೆಗೆ ಗ್ರಹಿಸಲ್ಪಟ್ಟು ಕೊಡೀಕರಿಸಲ್ಪಟ್ಟ ನಿಯಮಗಳು, ಇವು ಸ್ವಲ್ಪಭಾಗಮಾತ್ರ, ಗ್ರಂಥಕಾರನ ನೀತಿಯು ಮೂಲಸೂತ್ರಗಳೇ. ಅವು ಎಷ್ಟು ವಿಸ್ತಾರವೋ ಅದೂ ಅಷ್ಟು ವಿಸ್ತಾರ, ಅವು ಎಷ್ಟು ಉದಾರವೋ ಅದೂ ಅಷ್ಟು ಉದಾರ, ಸಾಮಾನ್ಯನು ಸಾಮಾನ್ಯ ನೀತಿಯನ್ನು ಅನುಸರಿಸಬೇಕು, ಗ್ರಂಥಕಾರನು ಈ ವಿಸ್ತಾರವಾದ ಉದಾರವಾದ ಮೂಲಮಂತ್ರಸಮುತ್ಪನ್ನ ವಾದ ನೀತಿಯನ್ನು ಅಸು ಸರಿಸಬೇಕು, ಅದನ್ನು ಹಾಗೆ ಅನುಸರಿಸಿ ಸಾಮಾನ್ಯನೀತಿಯನ್ನು ವಿಸ್ತಾರದಲ್ಲಿಯೂ ಔದಾರ್ಯದಲ್ಲಿಯೂ ಬೆಳೆಯುವಂತೆ ಮಾಡಬೇಕು. ಕವಿಯು ನಮ್ಮ ನೀತಿಯನ್ನು ಧಿಕ್ಕರಿಸಬೇಕೆಂದಲ್ಲ. ಅವನ ದೃಷ್ಟಿಯ ಇದನ್ನು ಒಳಗೊಂಡು ಇನ್ನೂ ಸ್ವಲ್ಪ ಹೆಚ್ಚಾದ ನೀತಿಯನ್ನೂ ಒಳ ಕೊಂಡಿರಬೇಕೆಂಬುದು ಈ ಅಭಿಪ್ರಾಯ, ಸರೋವರದಿಂದ ನಮ್ಮ ಕೆರೆಗೆ ನೀರನ್ನು ತರುವ ಕೊಳವೆಗಳೂ ಆ ಕೆರೆಯಿಂದ ನಮ್ಮ ಮನೆಗಳಿಗೆ ನೀರನ್ನು ತರುವ ಕೊಳವೆಗಳಂತೆ ಕೃಪಣಜೀವಿಗಳಾದರೆ ನಮ್ಮೆಲ್ಲರ ಗತಿಯೇನು ? ಕವಿಯ ವಿಷಯದಲ್ಲಿ ನಾವು ಇದನ್ನು ಬ್ಲಾಪಕದಲ್ಲಿಡ ಬೇಕು, ಅವನು ನೀತಿಯೆಲ್ಲದರ ಮೂಲವನ್ನು ಬಲ್ಲನು. ಅವನು ಉದಾರಜೀವಿ. ಅವನ ಆತ್ಮವು ಬಹುಜನದ ಸೌಖ್ಯವನ್ನು ಆಶಿಸ ಬಲ್ಲುದು, ನಾವು ಅವನಂತೆ ಅಲ್ಲದ್ದರಿಂದ ನಮಗೆ ನೀತಿ ಎಂದು ತೋರದ ವಿಷಯವನ್ನು ಅವನು ನೀತಿಯೆಂಬಂತೆ ವಿವರಿಸಿದರೂ ನಾವು ಅದಕ್ಕೆ ಮನ್ನಣೆಯನ್ನು ಕೊಡಬೇಕು ; ನಮ್ಮಿಂದಾದರೆ ಅದನ್ನು ಗ್ರಹಿಸಿ ಅದರಂತೆ ನಡೆದುಕೊಳ್ಳಬೇಕು. ಒಂದೆರಡು ಉದಾಹರಣೆ. ಇದಕ್ಕೆ ಉದಾಹರಣೆಯನ್ನು ಕೊಡುವುದು ಆವಶ್ಯಕವೋ ಅಲ್ಲವೋ ತೋರಲಿಲ್ಲ. ಕೊಡುವುದಾದರೆ ಈ ಉಪನ್ಯಾಸದಿಂದ ದೂರ ವೆಂದು ತೋರುವ ವಿಷಯವನ್ನು ಹೇಳಬೇಕಾಗುವುದು. ಆದರೂ ಈ ಮಾತಿನ ಭಾವವು ವಿಶದವಾಗುವುದಕ್ಕಾಗಿ ಒಂದೆರಡು ಉದಾ ಹರಣೆಯನ್ನು ಸೂಚಿಸಬಹುದು. ಜನವೆಲ್ಲ ಭಗವಂತನ ಮಕ್ಕಳು,