82 ಸಾಹಿತ್ಯ. ಕಾವ್ಯದಲ್ಲಿ ಗೌರವಿಸಬೇಕೆಂದರೆ ಸಾಹಿತ್ಯವು ತನ್ನ ಕರ್ತವ್ಯದಲ್ಲಿ ಭುಷ್ಟತೆಯನ್ನು ಹೊಂದುವುದಲ್ಲದೆ ಜನರು ಎಂದಿಗಾಗಲಿ ಸ್ವಲ್ಪ ಮುಂದಕ್ಕೆ ಬಂದಾರು ಎಂಬ ಆಸೆಯೇ ನಿರ್ಮಲವಾಗುವುದು. ೨೦, ಚರ್ಚೆಯ ಫಲ. - ಉತ್ತಮ ಸಾಹಿತ್ಯವು ಉದಾತ್ತ ನೀತಿಯನ್ನು ಸಾಧಿಸುವುದು. ಮುಖ್ಯವಾಗಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯ ವೇನೆಂದರೆ : ಸಾಹಿತ್ಯವೆನ್ನು ವುದು ಕೇವಲ ಪುಸ್ತಕಗಳ ಸಮುದಾಯ ವಲ್ಲ ; ಅದರ ಮೊದಲು ಮಾನವಹೃದಯದಲ್ಲಿ ; ಅದರ ಕೊನೆಯು ಮಾನವಹೃದಯದಲ್ಲಿ : ಕಾವ್ಯವು ಕವಿ ಮತ್ತು ಪಾಠಕರ ಮನಸ್ಸಿಗೆ ಸಂಬಂಧವನ್ನುಂಟುಮಾಡುವ ಸಾಧನ, ಉತ್ತಮ ಸಾಹಿತ್ಯವು ಮೂಲ ದಲ್ಲಿ ಉತ್ತಮವಾಗಿರಬೇಕು, ರೂಪದಲ್ಲಿ ಉತ್ತಮವಾಗಿರಬೇಕು, ಅಂತ್ಯದ ಫಲದಲ್ಲಿ ಉತ್ತಮವಾಗಿರಬೇಕು, ಇದನ್ನು ಗ್ರಹಿಸಿದರೆ ಗ್ರಂಥಕರ್ತನು ತನ್ನ ಸ್ವಾತಂತ್ರಕ್ಕಾಗಿ ಎಷ್ಟು ಆತುರದಿಂದ ಹೊಡೆ ದಾಡುವನೋ ಅಷ್ಟು ಆತುರದಿಂದ ಪಾಠಕರ ಕ್ಷೇಮವನ್ನೂ ಯೋಚಿ ಸುವನು, ಪಾಠಕನು ತನ್ನ ಕ್ಷೇಮವನ್ನು ಕುರಿತು ಎಷ್ಟು ಶ್ರದ್ಧೆ ಯಿಂದ ಯೋಚಿಸುವನೋ ಅಷ್ಟು ಶ್ರದ್ದೆಯಿಂದಲೂ ಗುಂಥಕರ್ತನಿಗೆ ಸ್ವಾತಂತ್ರವನ್ನು ಬಿಡಲು ಒಪ್ಪುವನು. ಒಬ್ಬರನ್ನೊಬ್ಬರು ವಿರೋಧ ಪಕ್ಷವೆಂದು ಎಣಿಸರು, ಸಾಹಿತ್ಯವು ತಾನಾಗಿಯೇ ಉತ್ತಮ ಸ್ಥಿತಿಗೆ ಬಂದು ತನ್ನ ಕರ್ತವ್ಯವನ್ನು ನೆರವೇರಿಸುವುದು, ಹೀಗಾಗುವುದರಿಂದ ಜನಾಂಗವು ಮುಂದಕ್ಕೆ ಬರುವುದು. ಈ ನೀತಿಯನ್ನು ಬಯಸುವವರೂ ಈ ಸಂದರ್ಭದಲ್ಲಿ ಯಾವ ಶಂಕೆ ಯನ್ನೂ ಇಟ್ಟುಕೊಳ್ಳಬೇಕಾದದ್ದಿಲ್ಲ. ನೀತಿಯನ್ನು ವುದು ಬುದ್ದಿಗೆ ಸಮ್ಮತವಾದ ನಿಯಮವು, ಸಾಹಿತ್ಯದ ರಸವು ರಾಗವರ್ಗಕ್ಕೆ ಸಮ್ಮತ ವಾದ ವಸ್ತುಲಕ್ಷಣವು, ಸಾಹಿತ್ಯವು ತನ್ನ ಕರ್ತವ್ಯವನ್ನು ಸರಿಯಾಗಿ ನೆರವೇರಿಸಿದರೆ ಬುದ್ಧಿಯಿಂದ ಒಪ್ಪಬಹುದಾದ ಫಲಬರುವುದೇ ಹೊರತು ಬೇರೆಯಿಲ್ಲ, ಎಂದರೆ ಅದು ನೀತಿಗೆ ವಿರೋಧವಾಗಿರಲಾರದು, ಸತ್ಯವೂ. ಸೌಂದರ್ಯವೂ ಒಂದೇ ಎಂಬ ಮಾತಿನಲ್ಲಿಯೇ ಇದು ಅಡಕವಾಗಿದೆ. ಸಾಹಿತ್ಯ ವ್ರ ಸೌಂದರ್ಯವನ್ನು ಸಾಧಿಸುವುದೆಂದೂ ಅದು ಸತ್ಯ.
ಪುಟ:ಸಾಹಿತ್ಯ1924.djvu/೯೫
ಗೋಚರ