ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

83 ಸಾಹಿತ್ಯ. ಸ್ವರೂಪವಾದ ಪರವಸ್ತುವಿನ ಬೇರೊಂದು ಮುಖವೆಂದೂ ಈ ಮೊದಲೇ ನಿರ್ಧರವಾಗಿದೆ. ಈ ವಿಷಯದಲ್ಲಿ ಜನರ ಕರ್ತವ್ಯ. ಸಾಹಿತ್ಯದ ಸರಿಯಾದ ಅರ್ಥವನ್ನು ತಿಳಿಯುವುದಕ್ಕೆ ಇಷ್ಟು ಚರ್ಚೆ ಬೇಕೆ ಎಂದು ಕೇಳಬಹುದು, ಚರ್ಚೆ ಬಾರದ ಸಾಹಿತ್ಯದ ವಿಷಯ ದಲ್ಲಿ ಈ ಚರ್ಚೆ ಒಂದೂ ಬೇಕಾದದ್ದಿಲ್ಲ, ಅದು ಬಂದಾಗ್ಯ ಈ ಆಕ್ಷೇಪಣೆ ಗಭೂ ಸಮಾಧಾನಗಳೂ ಬರುವುವ, ಮನುಷ್ಯನು ಬುದ್ದಿಯನ್ನೂ ರಾಗವನ್ನೂ ಉಳ್ಳವನು. ರಾಗದ ಫಲಗಳಾದ ಕುಶಲಕಲೆಗಳೂ ಕೂಡ ಬುದ್ದಿಯ ಮಾರ್ಗಕ್ಕೆ, ಕೇವಲ ವಿರೋಧವಾಗಿ ನಡೆಯಬಾರದು. ನಡೆಯುವುದಾದರೆ,ಅವಸರಿ, ಬುದ್ಧಿಯ ನೆಪ್ಪು ತಪ್ಪು ಎಂಬುದು ತೋರು ವಂತೆಯಾದರೂ ಇರಬೇಕು, ಆದರೆ ಬುದ್ಧಿಯದಾರಿಗೆ ವಿರೋಧವಾಗಿ ರುವ ಸಾಹಿತ್ಯ, ಒಂದುಭಾಗ ನಿಜವಾಗಿ ಒಳ್ಳೆಯದಾಗಿದ್ದರೆ, ಹತ್ತು ಭಾಗ ಕೆಟ್ಟುದಾಗಿರುತ್ತದೆ, ದಿನೇದಿನೇ ಕ್ಷುದ್ರಗ್ರಂಥಗಳ ಸಂಖ್ಯೆ ಹೆಚ್ಚುತ್ತಿದೆ ; ಬರೆಯುವ ಪುಸ್ತಕ ಹತ್ತರಲ್ಲಿ ಒಂದೋ ಅರ್ಧವೋ? ಒಳ್ಳೆಯವು. ಈ ಹತ್ತು ಪುಸ್ತಕಗಳ ಜತೆಗೆ ಸೇರಿರುವ ಆ ಒಂದು ಪುಸ್ತಕವನ್ನು ಗುರುತಿಸುವುದು ಹೇಗೆ ? ಉತ್ತಮ ಸಾಹಿತ್ಯದ ಲಕ್ಷಣ ಗಳನ್ನು ಸರಿಯಾಗಿ ತಿಳಿದರೆಯೇ ಇದು ಸಾಧ್ಯ. ಹೀಗಿಲ್ಲದಿದ್ದರೆ ಕೆಟ್ಟ ಪುಸ್ತಕಗಳ ಜತೆಗೆ ಒಳ್ಳೆಯ ಪುಸ್ತಕವೂ ಹೋಗುವುದು; ಕುಶಲಕಲೆಯು ಜನರ ಜೀವನದಲ್ಲಿ ತನ್ನ ಸ್ನಾನವನ್ನು ಕಳೆದುಕೊಳ್ಳು ವದು, ನಮಗೆ ತಿಳಿದಹಾಗೆ ಸಂibತವು ಸಾಹಚಯ್ಯದ ಕಾರಣದಿಂದ ನಮ್ಮ ಜೀವನದಲ್ಲಿ ತಾನು ಇಟ್ಟುಕೊಂಡಿರಬೇಕಾದ ಸ್ಥಾನವನ್ನು ಇಟ್ಟುಕೊಂಡಿಲ್ಲ. ನಾವು ಅಜಾಗರೂಕರಾದರೆ ಹೀಗಿಯೇ ಸಾಹಿ ತ್ಯವೂ ತನ್ನ ಸ್ಥಾನವನ್ನು ಕಳೆದುಕೊಂಡೀತು. ಇದೂ ತನ್ನ ಸ್ಥಾನ ವನ್ನು ಕಳೆದುಕೊಂಡರೆ ಇನ್ನು ಜನಾಂಗದಲ್ಲಿ ರಾಗಸಂಸ್ಕಾರಕ್ಕೆ ಸಾಮಗ್ರಿಯೆ ಇಲ್ಲವಾಗುವುದು, ಈ ದುರವಸ್ಥೆ ಬರದೆ ಇರಲಿ ಎನ್ನು ವವರು ಉತ್ತಮ ಸಾಹಿತ್ಯವನ್ನು ತಿಳಿದು ಅದನ್ನು ಉತ್ತಮ ಪದವಿಯಲ್ಲಿರಿಸಿ ಅದರಿಂದ ಮಾತ್ರ ಸಾಧ್ಯವಾದ ಸಂಸ್ಕಾರವನ್ನು ಜನಾಂಗಕ್ಕೆ ಉಳಿಸಬೇಕು.