ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಸಾಹಿತ್ಯ, ಸಾಹಿತ್ಯದ ಸಾಮಗ್ರಿ ರೂಪಾದಿಗಳು. ... ೨೧. ಇದುವರೆಗೆ ಸಾಹಿತ್ಯದ ಕಾರ್ಯವನ್ನೂ ಅದು ಅದನ್ನು ಸಾಧಿ ಸುವ ರೀತಿಯನ್ನೂ ಈ ಕಾರದ ದೆಸೆಯಿಂದ ಸಾಹಿತ್ಯವು ಜನಾಂಗದ ಜೀವನದಲ್ಲಿ ಯಾವ ಉನ್ನತ ಸ್ಥಾನಕ್ಕೆ ಅಧಿಕಾರಿಯಾಗಿದೆ ಎಂಬುದನ್ನೂ ಸೂಕ್ಷ್ಮವಾಗಿ ಹೇಳಿದೆ. ಇದೆಲ್ಲದರ ಮುಖ್ಯವಾದ ಆಶಯವೂ ಸಾಹಿ ತ್ಯಕ್ಕೆ ಸರಿಯಾದ ಗೌರವವನ್ನು ಕೊಡಬೇಕೆಂಬುದನ್ನು ನಿರೂಪಿಸು ವುದು, ಅದಕ್ಕೆ ಸೇರಿದ ಹಾಗೆ ಈ ವಿಷಯಗಳನ್ನು ತಿಳಿಯುವುದರಿಂದ ಇನ್ನೊಂದು ಪ್ರಯೋಜನವೂ ಉಂಟು. ಸಾಹಿತ್ಯ ಪಠನದಿಂದ ಅಧಿಕ ವಾದ ಸುಖವನ್ನು ಪಡೆಯುವುದು ಸಾಧ್ಯವಾಗುವುದೆಂಬುದೇ ಈ ಪ್ರಯೋಜನ, ಸಾಹಿತ್ಯದ ಸರಿಯಾದ ಸ್ಥಾನವನ್ನು ನಿರ್ಧರಿಸುವು ದಕ್ಕಿಂತ ಇದು ಕಡಿಮೆಯಾದ ಪ್ರಯೋಜನವೆಂದು ಹೇಳಲಾಗುವುದಿಲ್ಲ: ಓದುವವರ ಸುಖದಿಂದ ಸಾಹಿತ್ಯವು ಸಫಲ, ಯಾವುದಾದರೊಂದು ಪುಸ್ತಕವನ್ನು ಸಾಧ್ಯವಾದಷ್ಟು ಸುಖ ಬರುವಂತೆ ಓದಬೇಕಾದರೆ ತಿಳಿಯ ಬೇಕಾದ ಇನ್ನು ಕೆಲವು ವಿಷಯಗಳನ್ನು ಈಗ ಹೇಳಲು ಯತ್ನ ಮಾಡಿದೆ. ... ೨೨, ಕಾವ್ಯದ ಸಾಮಗ್ರಿ. ಕಾವ್ಯ ದವಸ್ತು ಕವಿಯ ಭಾವನೆ. ಈ ವಿಷಯಗಳಲ್ಲಿ ಮೊದಲನೆಯದು ಕಾವ್ಯದ ಸಾಮಗ್ರಿ ಯಾವುದು ಎಂಬುದು, ಕಾವ್ಯವನ್ನು ಬರೆಯುವುದಕ್ಕೆ ಕವಿಯು ಉಪಯೋಗಿಸುವ ಸಾಮಗ್ರಿ ಯಾವುದು ಎಂದರೆ ಒಟ್ಟಿನಲ್ಲಿ ಅವನ ಭಾವಗಳು ಎಂದು ಹೇಳಬಹುದು, ಎಷ್ಟು ಹೇಳಿದರೂ ಮೊತ್ತವೇನೋ ಇಷ್ಟೇ, ಆದರೆ ಈ ಮಾತಿನ ಅರ್ಥವನ್ನು ವಿವರವಾಗಿ ತಿಳಿಯುವುದು ಆವಶ್ಯ ಕವು, ಕವಿಯ ಮನಸ್ಸಿನಲ್ಲಿ ಭಾವಗಳು ಉತ್ಪನ್ನವಾಗಿ ಅವು ಗಳಿಂದ ಅವನ ಹೃದಯವು ತುಂಬಿದಾಗ ಅವುಗಳನ್ನು ವ್ಯಕ್ತಗೊಳಿಸು