ಸಾಹಿತ್ಯ. ವುದು ಕವಿಗೆ ಅವಶ್ಯ ಕರ್ಮವಾಗುವುದು, ಭಾವಗಳ ಉತ್ಪತ್ತಿಗೆ ಮುಖ್ಯ ವಾದ ಮಲವು ರಸಾನುಭವವು, ಇನ್ನೊಂದು ಮಲವು ಆಲೋ ಚನೆ, ಮೊದಲನೆಯದು ಕವಿಯ ಸ್ವಾನುಭವ, ಎರಡನೆಯದು ಅವನು ಪ್ರತಿಭಾಶಕ್ತಿಯಿಂದ ತನ್ನ ವಿಷಯದಲ್ಲಿಯೂ ಇತರರ ವಿಷಯದಲ್ಲಿಯ ತಿಳಿಯಬಹುದಾದದ್ದು, ಇತರರಿಗಿರುವುದಕ್ಕಿಂತ ಕವಿಗೆ ಜ್ಞಾನೇಂದ್ರಿಯ ಕರ್ಮೇಂದ್ರಿಯಗಳ ಪಾಟವವು ಅಧಿಕವಾಗಿರುವುದೆಂದೂ ಅವನು ಪ್ರಪಂಚದ ಸೌಂದರದಲ್ಲಿ ದೇವರ ಸೌಂದರ್ಯವನ್ನು ಕಾಣುವುದು ತಾಜನ್ನು ಮಗು ತಿಳಿಯುವರೀತಿಯಿಂದ ಎಂದೂ ಈ ಮೊದಲೇ ಹೇಳಿದೆ, ಕೇವಲ ಪಾಟವದ ಆಧಿಕ್ಯವಲ್ಲದೆ ಕವಿಯ ನೋಟದಲ್ಲಿ ಒಂದು ವಿವೇಚನಾ ಶಕ್ತಿಯು ಸೇರುತ್ತದೆ. ಪಾಟವದ ಆಧಿಕ್ಯದಿಂದ ಅನುಭವವು ತೀವ್ರವಾಗುವುದು ; ವಿವೇಚನೆಯಿಂದ ಅದರ ಲಕ್ಷಣವು ತಿಳಿಯುವುದು, ನಾವೆಲ್ಲ ಪುಪಂಚದಲ್ಲಿರುವುದು ತಾಯನ್ನು ತಿಳಿಯದೆ ಸುಮ್ಮನೆ ಅವಳ ಕೈಯಲ್ಲಿ ಇರುವ ಮಗುವಿನಂತೆ, ಅಂತಹ ಮಗುವಿಗೆ ತಾಯ ಆಕಾರವ ಸುತ್ತಣ ಪ್ರಪಂಚದಲ್ಲಿ ಲೀನವಾಗಿ ಹೋಗಿರುವುದು, ಅದು ಆ ಆಕಾರದ ಮೇರೆಯನ್ನು ತಿಳಿಯಲಾರದು, ಅದನ್ನು ಅದರ ಸುತ್ತಣ ಆವರಣದಿಂದ ಬೇರೆಯಾಗಿ ಕಾಣಲಾರದು, ನಮ್ಮ ಪ್ರಪಂಚ ಜ್ಞಾನವು ಇಂಥದು, ಒಂದು ಹೂವನ್ನು ನೋಡಿದೆವು ; ಒಂದು ಕೊಳ ವನ್ನು ನೋಡಿದೆವು ; ಆ ಹವೂ ಅದರ ಪಕ್ಕದ ಒಣ ಎಲೆಯ ಸೇರಿಯೇ ನಮ್ಮ ಕಣ್ಣಿಗೆ ಕಾಣುವುವು ; ನಮ್ಮ ಮನಸ್ಸನ್ನು ಪ್ರವೇಶಿ ಸುವುವು, ಕೊಳವೂ ಅದರ ಪಕ್ಕದ ಒಣಕಡ್ಡಿಯ ಬೇಲಿಯ ನಮಗೆ ಏಕರೀತಿಯ ಪ್ರಾಮುಖ್ಯವನ್ನು ತಳೆಯುವವು. ನಾವು ಪ್ರಪಂಚದ ಸೌಂದರ್ಯವನ್ನು ಅದರ ಸುತ್ತಣ ಆವರಣದಿಂದ ಪ್ರತ್ಯೇಕಿಸಿ ತಿಳಿಯ ಲಾರೆವು, ಸೌಂದರ್ಯದೊಂದಿಗೆ ಆವರಣವೂ ಸೇರಿ ನಮಗೆ ಎರಡೂ ಅಸ್ಪಷ್ಟವಾಗುತ್ತದೆ. ಕವಿಗೆ ಹೀಗೆ ಇರುವುದಿಲ್ಲ. ದಿನ ಕಳೆದು ತಾಯ ಆಕಾರವನ್ನು ಸ್ಪಷ್ಟವಾಗಿ ತಿಳಿದಿರುವ ಮಗುವಿನಂತೆ ಅವನು ಈ ಪ್ರಪಂ ಚದ ಆವರಣದಲ್ಲಿ ಲೀನವಾಗಿರುವ ಪರವಸ್ತುವಿನ ಆಕಾರವನ್ನು ಪ್ರತ್ಯೇಕಿಸಿ ತಿಳಿಯುವನು. ಅವನು ಆವರಣ ಆಕಾರಗಳಿಗೆ ಅದ
ಪುಟ:ಸಾಹಿತ್ಯ1924.djvu/೯೮
ಗೋಚರ