ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀಃ || ಅಂಬಾಲಿಕೆ. ಒಂದನೆಯ ಅಧ್ಯಾಯ. ಒಂದು ದಿವಸ ದುರ್ಗದ ರಾಚೋದ್ಯಾನದಲ್ಲಿ ರಾಜಾ ಭಗವತೀದಾಸನ ಏಕ ಮಾತ್ರ ಪುತ್ರಿಯಾದ ಅಂಬಾಲಿಕೆಯು ವಿಹರಿಸುತ್ತಿದ್ದಳು, ಆಗ ಸಂಧ್ಯಾಕಾಲವಾಗಿತ್ತು. ಭಗರ್ವಾ ಪ್ರಭಾಕರನು ಕ್ಷೀಣತೇಜನಾಗಿ ಅಸ್ತಮಿಸುತ್ತಿದ್ದನು. ರಾಜಪುತ್ರಿಯಾದ ಅಂಬಾಲಿಕೆಯು ಅಸೀಮ ಸೌಂದಯ್ಯ ಮಯಿ. ಪೂರ್ಣಚಂದ್ರನಂತಹ ಮುಖ, ಅಂದ ವಾದ ಹುಬ್ಬುಗಳು, ಕಪ್ಪಾದ ಮುಂಗುರುಳು, ತೊಂಡೇಹಣ್ಣಿನಂತಹ ಕೆಂದುಟಿಗಳು, ವಿಶಾಲವಾದ ಕಣ್ಣುಗಳು. ಇವುಗಳಿಂದ ಕೂಡಿ ಸರ್ವರ ಪ್ರೀತಿಗೂ ಪಾತ್ರಳಾಗಿದ್ದ ಈ ರಾಜಕುಮಾರಿಗೆ ವಿವಾಹವಾಗುವ ವಯಸ್ಸು ಬಂದೊದಗಿದ್ದರೂ, ಅದಾವಕಾರಣಗಳ ದೆಸೆಯಿಂದಲೋ ಇನ್ನೂ ವಿವಾಹವಾಗಿರಲಿಲ್ಲ. ರಾಯಗುವರಿಗೆ ಪ್ರಕೃತಿಯ ಸೌಂದ ರ್ಯದ ಮೇಲೆ ಬಹಳ ಇಷ್ಟ. ಉದ್ಯಾನವು ಹೂವುಗಳನ್ನು ಹೊಮ್ಮಿಸುತ್ತಿರುವ ಚಂಪಕವೃಕ್ಷಗಳಿಂದಲೂ, ಚಿಗುರಿದ ಅಶೋಕವೃಕ್ಷಗಳಿಂದಲೂ ಮತ್ತು ಅನೇಕ ತರ ಹದ ಲತಾವೃಕ್ಷಗಳಿಂದಲಂಕೃತವಾಗಿತ್ತು. ತಂಗಾಳಿಯು ಬಹಳ ಮನೋಹರವಾಗಿ ಬೀಸುತ್ತಿದ್ದುದು, ಹೂವುಗಳಲ್ಲಿನ ಮಕರಂದವನ್ನು ಪಾನಮಾಡುವುದರ ಸಲುವಾಗಿ ಭ್ರಮರಗಳು ತಂಡತಂಡವಾಗಿ ಬಂದು ಬಹಳ ಆನಂದದಿಂದ ಗಾನಮಾಡುತ್ತಿದ್ದುವು. ಸ್ವಲ್ಪ ಹೊತ್ತಿನಲ್ಲಿಯೇ, ತೇಜೋನಿಧಿಯಾದ ಸೂರ್ಯಬಿಂಬವು ಅಸ್ಕಾಚಲದ ಹಿಂದೆ ಸಂಪೂರ್ಣವಾಗಿ ಮರೆಯಾಗಲು ಕಳಲೆಯು ಪ್ರಪಂಚವನ್ನು ಪರಿವೇಷ್ಟಿಸಿದುದು. ದನ್ನು ಕಂಡು, ಕತ್ತಲಾದಮೇಲೆ ಸ್ತ್ರೀಯರು ಹೊರಗೆ ಸಂಚರಿಸುವುದು ಸರಿಯಲ್ಲ ಬುವುದನ್ನು ಚೆನ್ನಾಗಿ ತಿಳಿದಿದ್ದ ಅಂಬಾಲಿಕೆಯು ಅರಮನೆಯನ್ನು ಕುರಿತು ಹೊರ ವಿದ್ಯುಕ್ತಳಾದಳು, ಅಂಬಾಲಿಕೆಯು ಒಂದೆರಡು ಹೆಜ್ಜೆ ಗಳಷ್ಟು ದೂರ ಮುಂದುವರಿಯುವಷ್ಟರ ಲ್ಲಿಯೇ, ಆರೋ ಅವಳ ಹಿಂದಣಿಂದ, ರಾಜಕುಮಾರಿ ! ಸ್ವಲ್ಪ ನಿಲ್ಲು. ಅನಂತರ ಅರಮನೆಗೆ ಹೋಗುವೆಯಂತೆ ! ” ಎಂದು ಸಣ್ಣ ಧ್ವನಿಯಲ್ಲಿ ಕೂಗಿದರು. ರಾಜ