ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಕಗುಚ್ಛ. ನಾಲ್ಕು ಜನರ ಒಳಗೆ ನುಗ್ಗಿ ದರು. ಒಂದು ಮೂಲೆಯಲ್ಲಿ ಕುಳಿತಿದ್ದ ಕಾಳೀ ಚರಣನು ಮತ್ತೊಂದು ಕಡೆಯಿಂದ ಕೇಳಿಬರುವಂತ, 11 ಈ ಕತ್ತಲೆಮನೆಯಲ್ಲಿ ನಿಮ್ಮೊಂದಿಗೆ ಇನ್ನು ನಾಲ್ಕು ಜನರು ಸೇರಿದರೂ ನನ್ನನ್ನು ಹಿಡಿಯಲಾರಿರಿ. ಈಗ ನಿಮ್ಮ ಪ್ರಾಣವು ನನ್ನ ಧೀನದಲ್ಲಿದೆ! ” ಎಂದಂದನು. ಈ ಮಾತನ್ನು ಕೇಳಿ ಅವರು ಶಬ್ದ ವಾದಂತೆ ಕೇಳಿಬಂದಕಡೆಗೆ ನುಗ್ಗಲು ಕಾಳೇ ಚರಣನು ಬಾರ್‌ಮಾಡದೇ ಇದ್ದ ರಿವಾಲ್ವರೊಂದನ್ನು ಜೋರಾಗಿ ಅವರ ಕಡೆಗೆ ಎಸೆ ದನು, ಅದು ಒಬ್ಬನ ತಲೆಗೆ ತಗುಲಿತು. ಅವನು II ಅಯ್ಯೋ! ಸತ್! ಸೂಳೇಮಗ ಪುನಃ ಕಲ್ಲಿನಿಂದ ಹೊಡೆದ!! ” ಎಂದು ಕಿರಿಚಿಕೊಳ್ಳುತ್ತ ನೆಲದಮೇಲೆ ಬಿದ್ದನು. ಉಳಿದ ಮೂರು ಜನರು, 1 ಕಾಳಿಚರಣ! ನೀನು ಈ ದಿವಸ ಈ ಗವಿಯಿಂದ ನಿನ್ನಿ ಪ್ರಾಣಸಹಿತನಾಗಿ ಹೋಗಲಾರೆ! ಅಷ್ಟರೊಳಗಾಗಿ ನೀನೇನೇನು ಅನಾಹುತಗಳನ್ನು ಮಾಡಬೇಕೆಂದಿರುವೆಯೋ ಮಾಡಿಬಿಡು! ” ಎಂದಂದು ಒಂದೊಂದು ಬಾಗಿಲಿನ ಸಮಾ ಪದಲ್ಲಿ ಒಬ್ಬೊಬ್ಬನು ನಿಂತುಕೊಂಡು ಕಾಳಿಚರಣನು ಹೊರಗೆ ಹೋಗದಂತೆ ನೋಡಿ ಕೊಳ್ಳಬೇಕೆಂತಲೂ ಮತ್ತೊಬ್ಬನು ಒಳಗೆಲ್ಲಾ ಹುಡುಕಬೇಕೆಂತಲೂ ನಿಶ್ಚಯಿಸಿ ಹಾಗೆಯೇ ಮಾಡಲಾರಂಭಿಸಿದರು. ಕಾಳಿಚರಣನಿಗೆ ಇವರ ಉಪಾಯದಿಂದ ಬಹು ಸಂತೋಷವಾಯಿತು. ಬಹು ಜಾಗರೂಕತೆಯಿಂದ, ಹುಡುಕಿಕೊಂಡು ಬರುತ್ತಿರುವವನನ್ನು ಪ್ರಥಮತಃ ಹಿಡಿಯಬೇ ಕೆಂದಿದ್ದನು. ಆ ವ್ಯಕ್ತಿಯು ದೀಪವನ್ನು ತೆಗೆದುಕೊಳ್ಳಲು ಹೋಗುತ್ತಿರುವುದನ್ನು ಕಂಡು ತನ್ನ ಕೈಯಲ್ಲಿದ್ದ ಪಿಸ್ತೂಲಿನಿಂದ ದೀಪಕ್ಕೆ ಹೊಡೆಯಲು ದೀಪವು ಕೆಳಗೆ ಬಿದ್ದು ಒಡೆದು ಹೋಯಿತು! ಕಾಳೀಕರಣನು ತತ್‌ಕ್ಷಣವೇ ಆ ವ್ಯಕ್ತಿಯ ಕಡೆಗೆ ಹಾರಿ ಅವನನ್ನು ಒಂದೇ ಹಿಡಿತದಿಂದ ಉಸಿರಾಡದಂತೆ ಹಿಡಿದು ಅವನಿಗೆ ಪ್ರಜ್ಞಾನಾಶಕದ್ರವ (Chloroform) ವನ್ನು ಉಪಯೋಗಿಸಿದನಲ್ಲದೆ ವಿಕಾರಸ್ವರದಿಂದ ಅಯ್ಯೋ! ಸತ್ತೆ ! ಹೊಡದೇಬಿಟ್ಟ!! ಎಂದು ಕೂಗಿಕೊಂಡನು. ಉಭಯದ್ವಾರಗಳಲ್ಲಿಯೂ ಇದ್ದವರು ಈ ಕೂಗನ್ನು ಕೇಳಿ ತಮ್ಮ ಕಡೆಯವರೀಲ್ವರೂ ಕಾಳೀಕರಣನಿಗೆ ತುತ್ತಾದುದರಿಂದ ಕಾವಲಿ ರುವುದನುಚಿತವೆಂದಂದುಕೊಂಡು ಪಲಾಯನಸೂಕ್ತವನ್ನು ಪಠಿಸಲಾರಂಭಿಸಿದರು, ಆಗ ಕಾಳೀಚರಣನು ಅವರನ್ನು ಆ ರೀತಿಯಲ್ಲಿ ಓಡಾಡಿಸುವುದು ಅಯುಕ್ತವೆಂದು