ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ </\\ AANAA Mvvvvvvvvvvvvvvvvvvvvvvvvvvvvvvvvvvvvvvvvv ರಾಯರು ಮನೆಯಲ್ಲಿದ್ದಾರೋ ?” ಎಂದು ಗಂಗಾರಾಮಿನ ಸ್ವರವನ್ನೇ ಅನುಕರಿಸಿ ಕೇಳಲು ಮುದುಕಿಯು, CC ಯಾರು ಗಂಗೂವೇ ? ಏನು ಸಮಾಚಾರ ನಲ್ಲಿ ಏಕೆ ಬಂದೆ ? ” ಎಂದು ಕೇಳಿದಳು. ಕಾಳೀಕರಣ- ಯಜಮಾನರು ರಾಯರನ್ನು ಕರಕೊಂಡು ಬರಹೇಳಿದರು.” ಮುದುಕಿ-ಅಯ್ಯೋ ! ಏನಾ ರಾಯನೋ ! ಏನುಗೊಳೋ ! ಯಾರೋ ಒಬ್ಬ ಅವನಿಗೆ ಗುರುತಾದವರಂತೆ, ಅವರು ಈ ಊರಿಗೆ ಬಂದಿದ್ದಾರಂತೆ, ನಿನ್ನೆ ದಿವಸ ದಿಂದ ಊಟಾ ತಿಂಡಿಯೆಲ್ಲಾ ಅಲ್ಲಿಯೇ ಕಣಪ್ಪ ! ಮನೆಗೆ ಕೂಡ ಬರುವುದಿಲ್ಲ ! ” ಕಾಳಿಚರಣ ಆ ಮನೆಗೆ ಹೊ: ದರೆ ಈಗ ಸಿಗಬಹುದೇನು ? ಅದೆಲ್ಲಿದೆ ?” ಮುದುಕಿ- ಅದೆಲ್ಲೋ ಅಪ್ಪ ನನಗೆ ಗೊತ್ತಿಲ್ಲ! ” ಎಂದು ಹೇಳಿದಳು. ಕಾಳೇಶರಣನು ಮನೆಯನ್ನು ಪತ್ತೆಮಾಡಲು ತಾನು ಉಪಯೋಗಿಸಿದ ಉಪಾಯವು ನಿಷ್ಪಲವಾದುದರಿಂದ ಹಿಂದಿರುಗಿದನು. ಆದರೇನು ನಿರಾಶನೆ ? ಇಲ್ಲ ! ಕೂಡಲೆ C ಸಂಭಾಷಣಯಂತ್ರ” (telephone) ದ (C ಎಕ್ಸ್ಂಜೆ ಆಫೀಸಿ ಗೆ ಹೋಗಿ, ನಗರದ ಎಲ್ಲಾ ಪೊಲೀಸ್ ಸ್ಟೇಷನ್ನು ಗಳಿಗೂ, ಆಯಾಯ ಸ್ಟೇರ್ಷ ಸರಹದ್ದುಗಳಲ್ಲಿ ಜನಾವಾಸರಹಿತವಾದ ಮತ್ತು ಒಂದೆರಡು ದಿವಸಗಳಿಂದೀಚೆಗೆ ಹೊಸಬರು ವಾಸಕ್ಕೆ ಉಪಯೋಗಿಸುತ್ತಿರುವ, ಮನೆಗಳನ್ನು ತಿಳಿಸಬೇಕೆಂತಲೂ, ಅವರವರ ಅಧೀನದಲ್ಲಿರುವ ಗೂಢಚಾರರನ್ನು ಕೂಡಲೆ ರ್ಇಸ್ಪೆಕ್ಟರ ಮನೆಗೆ ಕಳುಹಿಸಬೇಕೆಂತಲೂ, ಯಂತ್ರದ ಮೂಲಕ ತಿಳಿಸಿ ಇಸ್ಪೆಕ್ಟರ್ ತಾಂದೋಣಿರಾಯರ ಮನೆಗೆ ಹೋದನು. ಅಪ್ಪಣೆಯಪ್ರಕಾರ ಬಂದ ಗೂಢಚಾರರಿಗೆ ಮಾಡಬೇಕಾದ ಕೆಲಸವನ್ನು ತಿಳಿಸಿ ತಕ್ಕ ಪೊಲೀಸಿನವರನ್ನು ಕರೆದುಕೊಂಡು ನಗರದ ಹೊರವಳಯದಲ್ಲಿದ್ದ ಆ ಅರ ಗ್ಯಕ್ಕೆ ಹೋಗಿ ಗವಿಯಲ್ಲಿ ಬಂಧಿತರಾಗಿದ್ದ ಜನರನ್ನು ಹಿಡಿದುಕೊಂಡು ಪ್ರಭಾತಕಾ ಲಕ್ಕೆ ಮುಂಚಿತವಾಗಿಯೇ ಕಳೀkರಣನು ಊರನ್ನು ಸೇರಿದನು. ಆ ವೇಳೆಗೆ ಗೂಢ ಚಾರರು ಕಾಳೀಕರಣನು ಹೇಳಿದಂತೆ ಎಲ್ಲವನ್ನೂ ಸಿದ್ಧಗೊಳಿಸಿಕೊಂಡು ಬಂದಿದ್ದರು. ಕಾಳೀಕರಣನು ಸಂಗತಿಗಳೆಲ್ಲವನ್ನೂ ತಿಳಿದುಕೊಂಡು ಬುಡಬುಡುಕಿಯವನಂತೆ ಉಡು ಪುಗಳನ್ನು ಧರಿಸಿ, ಗೂಢಚಾರರಿಂದ ತಿಳುಹಿಸಲ್ಪಟ್ಟಿದ್ದ ಒಂದು ಮನೆಗೆ ಸೂರ್ಯೊ ದಯ ಸಮಯದಲ್ಲಿ ಹೋದನು. ಆ ಮನೆಯು ಆ ಊರಿನಲ್ಲಿ ಜನರು ಅತ್ಯಂತ ವಿರಳವಾಗಿದ್ದ ಒಂದು ಪ್ರದೇಶ ದಲ್ಲಿದ್ದಿತು, ಅದು ಬಹಳ ದೊಡ್ಡದು. ಅದರ ಕೆಲವು ಭಾಗಗಳು ಆಗತಾನೆ ಸರಿಪಡಿಸಲ್ಪ