ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಲಾಸಿನಿ ೬೯ AYYMM A /\/ YA/\/\/\/\ / \/\/ \ \ ೧೭ *

  • * *
  • * *
  • *
  • * *hhhh # # # # * Ar\ ** ** *** ***** **** Ahr\

೧೧೧೧೧ ಟ್ಟಿದ್ದು ವು. ಭುಜಂಗನು ಮನೆಯಿಂದ ಹೊರಹೊರಟನು, ಕಡಲೆ ವೇಷಧಾರಿಯಾಗಿದ್ದ ಕಾಳಿಚರಣನು ತನ್ನ ವಾದ್ಯವನ್ನು ಧ್ವನಿಮಾಡಿ « ಜಯ ಜಯ!!” ಎಂದು ಹೊಗ ಳಿದನು, ಭುಜಂಗನಿಗೆ ಇಂತಹ ಜನಗಳ ಮಾತಿನಲ್ಲಿ ಹೆಚ್ಚಾಗಿ ನಂಬುಗೆಯಾಗಿದ್ದುದ ರಿಂದ, ಏ! ಹಕ್ಕಿನರಸಯ್ಯ! ಈ ದಿವಸ ಹಕ್ಕಿ ಹೇಳಿದ ವಿಶೇಷ ವಾರ್ತೆಯೇನಾದರೂ ಉಂಟೋ? ” ಎಂದು ಕೇಳಿದನು. - ಕಾಳಿಚರಣ:-(ಬುಡುಬುಡುಕೆಯನ್ನು ಬಹು ರಭಸದಿಂದ ಧ್ವನಿಗೆಯ್ಯು (ಸ್ವಾಮಿಗೆ ಜಯವುಂಟು! ಹೆಣ್ಣಿನದೆಶೆಯಿಂದ ಹೇರಳವಾಗಿ ಹೊನ್ನು ಕೈಸೇರುವುದು, ಹೆಣ್ಣಿನ ಸ್ವಾಧೀನವಾಗಲಿಲ್ಲವೆಂದು ಸಂಕೋಚ. ಭಯಕಾಲವು ಕಳೆಯಿತು! ಜಯಕಾಲವು ಸಮಿಾಪಿಸಿತು!! ” ಎಂದಂದು, ಮತ್ತೊಮ್ಮೆ ವಾದ್ಯದ ವಿಚಿತ್ರವಾದ ಧ್ವನಿಯನ್ನು ವ್ಯಕ್ತಗೊಳಿಸಿ, “ ಸ್ವಾಮಿಗೆ ಜಯವಾಗುತ್ತದೆ! ನರಸನ ಮಾತು ಎಂದಿಗೂ ಸುಳ್ಳಲ್ಲ!! ಸ್ವಾಮಿ ಸುಮ್ಮನಿರಕೂಡದು. ನರಸನು ವಂಶಪಾರಂಪರೆಯಾಗಿ ಬಂದಿರುವ ಗೀರ್ವಾಣಭಾಷೆಯ ಮಹಿಮೆಯಿಂದ ಹಕ್ಕಿ ಹೇಳಿದ್ದೆಲ್ಲವನ್ನೂ ತಿಳಿದು ಕೊಂಡು ಬಂದಿರುವನು. ದಿಟವಾದರೆ ದಿಟವೆನ್ನ ಬೇಕು ! ಸತಿಯಾದರೆ ಸಭೆಯನ್ನ ಬೇಕು. ಸ್ವಾಮಿಯು ಒಂದು ದೊಡ್ಡ ಇನಾಮು ಕೊಡಬೇಕು. ನರಸನು ನಾಡಾಡಿಯವನಲ್ಲ ಹೇಳಿದ ಮಾತೆಂದೂ ಸುಳ್ಳಾಗುವುದಲ್ಲ. ಸ್ವಾಮಿಯ ಸಮಾಚಾರವನ್ನು ಇಂತಹ ಬಹಿರಂಗಸ್ಥಳದಲ್ಲಿ ಹೇಳತಕ್ಕದ್ದಲ್ಲ. ” ಎಂದಂದು ಮತ್ತೊರ್ಮೆ ವಾದ್ಯರವವನ್ನು ಮಾಡಿ ಇನಾಮು ಬರಬೇಕು ಸ್ವಾಮಿಾ !” ಎಂದಂದನು. ಭುಜಂಗನಿಗೆ ಆಶೆಯು ಹೆಚ್ಚಾಯಿತು. ಬುಡುಬುಡುಕೆಯವನನ್ನು ಕೇಳಕೇಳುತ್ತ ಹೋದ ಹಾಗೆಲ್ಲ ಅವನು ತನ್ನ ವಾಗೈಖರಿಯಿಂದ ಭುಜಂಗನಿಗೆ ಮತ್ತಷ್ಟು ಆಶೆಯು ಹೆಚ್ಚಾಗುವಂತೆ ಮಾಡಿದನು. ಭುಜಂಗನು ಇವನಿಂದೆಲ್ಲಾ ಸಂಗತಿಗಳನ್ನೂ ತಿಳಿದು ಕೊಳ್ಳಬೇಕೆಂದೆಣಿಸಿ, “ ನರಸ | ಇದು ನಮ್ಮ ಮನೆಯಲ್ಲ ! ನಮ್ಮ ಮನೆಗೆ ಹೋಗೋಣ ಬಾ ! ನಿನ್ನ ಹಕ್ಕಿಯು ಹೇಳಿದುದನ್ನೆಲ್ಲ ಹೇಳುವಿಯಂತೆ !! ” ಎಂದಂದನು. ನರಸನು ಪುನಃ ಬುಡುಬುಡುಕೆಯನ್ನು ಚೆನ್ನಾಗಿ ಬಾರಿಸಿ, - ಪರಾಕು ಸ್ವಾಮಿ ! ಜಯವಾಗಲಿ ಸ್ವಾಮಿ !! ಬುದ್ದಿಯವರಿಗೆ ಈ ಮನೆಯಲ್ಲಿ ಸರ್ವಸ್ವತಂತ್ರವುಂಟು. ದೇವರ ಜೀವವಾದ ಅಮ್ಮನವರು ಇಲ್ಲೇ ಉಂಟು !! ಈ ಹೊತ್ತು ದೇವರು ಕೃಪೆಮಾಡಿಯಾನು !!! ಲಕ್ಷ್ಮಿ ಕಟಾಕ್ಷ ಒದಗೀತು ! ಬುದ್ದಿಯವರಿಗೆ ಸಂತೋಷವಾದೀತು !! ನರಸನ ಮಾತು ಸುಳ್ಳಲ್ಲ ! ” ಎಂದು ಹೇಳಲು, ಭುಜಂಗನಿಗೆ ಆಶೆಯು ಮಿತಿಮೀರಿತು.