ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ xl.ru/// </snAANI/AA wwAAAA \/\/ \/ wY Y A \/ \ \\/ ಏಕಮಾತ್ರ ಪುತ್ರಿಯನ್ನು ವಿವಾಹಮಾಡಿಕೊಟ್ಟು ನಿನ್ನನ್ನು ನನ್ನ ರಾಜ್ಯಕ್ಕೆ ಹಕ್ಕುದಾ ರನನ್ನಾಗಿ ಮಾಡಿಕೊಳ್ಳಬೇಕೆಂದು ಬೊಗಳುವಿಯೋ ? ಥು ! ನೀಚಾ !! ನನ್ನಿ ದಿರಿನಿಂದ ಆul1 ತೊಲಗಿ ಹೋಗು : ಒಂದು ಕ್ಷಣವಾದರೂ ನನ್ನಿದಿರಿನಲ್ಲಿ ನಿಲ್ಲ ಬೇಡ. ಹಾಗೆ ನಿಂತರೆ ನಿನಗೆ ನಿಸ್ವಾರವಿಲ್ಲ ಎಂದು ಗದರಿಸಿಕೊಂಡನು. 11 ಮಹಾರಾಜ! ಇಂದು, ನೀವು ನನಗೆ ಯಾವ ರಜಪೂತನೂ ಸಹಿಸಲಾರ ದಷ್ಟು ಅಪಮಾನವನ್ನು ಮಾಡಿರುವಿರಿ, ಅದಕ್ಕಾಗಿ ನಾನು ಮುಖ್ಯಿಗೆ ಮುಯ್ಯ ತೀರಿಸಿಕೊಳ್ಳದೆಬಿಡೆನು. ಮಹಾರಾಜ! ಈ ವಿಷಯವನ್ನು ಮಾತ್ರ ಚೆನ್ನಾಗಿ ಜ್ಞಾಪಕ ದಲ್ಲಿಟ್ಟಿರಿ, ಮರೆಯ ಬೇಡಿ ಎಂದು ಹೇಳುತ್ತ ಮೋಹನಸಿಂಹನು ಅರಮನೆಯನ್ನು ಬಿಟ್ಟು ಸ್ವಗೃಹಾಭಿಮುಖನಾದನು. .. ಮೋಹನಸಿಂಹನು ಹೊರಟುಹೋಗುತ್ತಲೇ ರಾಜನು ತನ್ನ ಮಂತ್ರಿಯಾದ ವಿಕ್ರಮಸಿಂಹನನ್ನು ಕರೆಯಿಸಿ ಮೋಹನನ ದುರಾಪಾರವನ್ನು ಅವನಿಗೆ ತಿಳುಹಿದನು. ಇದನ್ನು ಕೇಳುತ್ತಲೇ ವಿಕ್ರಮಸಿಂಹನ ಮುಖವು ಕೆಂಪಗಾಯಿತು. ಭೂಗಳು ಕೃಷ್ಣಸರ್ಪಗಳನ್ನು ಹೋಲಿದುವು. ತುಟಿಗಳು ಅದುರಿದುವು. ಅವನ ನೇತ್ರಗಳಲ್ಲಿ ಕ್ರೋಧಾನಲವು ಪ್ರಜ್ವಲಿಸಲಾರಂಭವಾಯಿತು. ತಕ್ಷಣವೇ ಅವನು ಒಬ್ಬ ಸೇವಕ ನನ್ನು ಕೂಗಿ, ಮೋಹನನನ್ನು ಕರೆದುಕೊಂಡು ಬಾರೆಂದು ಆಜ್ಞಾಪಿಸಿದನು. ಸ್ವಲ್ಪ ಹೊತ್ತಿನಲ್ಲಿಯೇ ಆ ಸೇವಕನು ಹಿಂತಿರುಗಿ ಬಂದು ಉತ್ತಮಾಶ್ವವೊಂದನ್ನು ಆರೋಪಿಸಿ ನಾಗೂರಿಗೆ ಅಭಿಮುಖನಾಗಿ ಪ್ರಯಾಣಮಾಡಿದನೆಂದು ಬಿನ್ನವಿಸಿದನು. ಆಗ, ವಿಕ ಮಸಿಂಹನು ಅತಿಪ್ರಯಾಸದಿಂದ ತನ್ನ ಕೋಪವನ್ನು ತನ್ನಲ್ಲಿಯೇ ಅಡಗಿಸಿಕೊಂಡು, «« ಮಹಾರಾಜ! ಸಮಾಧಾನಚಿತ್ತರಾಗಿರಿ. ಆ ಪರಮಪಾಪಿ-ಆಚಂಡಾಲನನ್ನು ಸ್ಮರಿಸಬೇಡಿ. ಇಂದಿನಿಂದ ಅವನು ನನಗೆ ತ್ಯಾಜ್ಯನಾದ ಪುತ್ರನಾಗಿರುವನು. ಆ ಅಧ ಮಾಧವನ ಗೊಡ್ಡು ಬೆದರಿಕೆಗೆ ತಾವು ಭಯಪಡಬೇಕಾದುದರವಶ್ಯವಿಲ್ಲ” ಎಂದನು. ಮೂರನೆಯ ಅಧ್ಯಾಯ. ಪಾಠಕಮಹಾಶಯ ! ಪಿತನ ಗೃಹವನ್ನು ಪರಿತ್ಯಜಿಸಿದ ಬಳಿಕ ಮೋಹನನು ನಾಗೂರನ್ನು ಕುರಿತು ಹೊರಟುದು ಸರಿಯಷ್ಟೆ ? ಈಗ ಅವನೇನಾದನೆಂಬುದನ್ನು ವಿಚಾರಿಸಿಕೊಳ್ಳುವವು.