ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

~ - ಒಣಗಳ ಸ೨ | ಆಷಾಢ ನಿವಿಧ ವಿಷಯ ಏಮರ್ಶ ಕರ್ನಾಟಕ ಸಾಹಿತ್ಯ -~~ ~-~- ವಿವಿಧ ವಿಷಯ ವಿಮರ್ಶೆ ಹೋದ ರ್ಜ ತಿಂಗಳಲ್ಲಿ ನಡೆದ ಕರ್ಣಾಟಕ ವಿದ್ವನ್ಮಂಡಲಿಯ ತೃತೀಯ ಸಮ್ಮೇಳನದಲ್ಲಿ ಶ್ರೀಮದ್ಯುವರಾಜರವರು ಅಗ್ರಾಸನವನ್ನು ಅಲಂಕರಿಸಿ ಪರಿಷತ್ತಿಗೆ ಪ್ರೋತ್ಸಾಹವನ್ನು ಏಟುಮಾಡಿರುವುದಕ್ಕಾಗಿ ಕನ್ನಡಿಗರೆಲ್ಲರೂ ಸಂತೋಷಪಡಬೇಕಾಗಿದೆ ಶ್ರೀಮದ್ಯುವರಾಜರವರ ಭಾಷಣವನ್ನು ಪರಿಷತ್ತಿನ ಸದಸ್ಯರುಗಳೂ ಕರ್ಣಾಟ ಭಾಷಾ ಭಿಮಾನಿಗಳ ಸಾವಧಾನದಿಂದೋದಿ ಅವರ ಮುಖ್ಯಾಂಶಗಳನ್ನು ಮನನಮಾಡಬೇ ಕಂದು ಬೇಡಿಕೊಳ್ಳುತ್ತೇವ (ಸುಲಭವಾದ ಹೊನಗನ್ನಡದ ಅಭಿವೃದ್ಧಿಗೆ ಕು೦ದಕ ಬಾರದಂತ ಹಳಗನ್ನಡ ರೂಪಗಳನ್ನು ಎಷ್ಟು ಮಟ್ಟಿಗೆ ಪುನಃ ಉಪಯೋಗಕ್ಕೆ ತರಬಹುದು ಎಂಬ ಅ೦ಶಕ್ಕೆ ಅಗ್ರಸ್ಥಾನವನ್ನು ಕೊಟ್ಟು, ಈ ವಿಷಯಕ್ಕೆ ಸರಿ ಪನವರು ಮುಂದೆ ವಿಶೇಷ ಗಮನ ಕೊಡುವರೆಂದು ನಂಬುತ್ತೇವೆ' ಎಂದು ಶ್ರೀಮ ದ್ಯುವರಾಜರವರು ಅಪ್ಪಣೆ ಕೊಡಿಸಿರುವ ಸಂಗತಿಯನ್ನು ಧಾರಾಡ ಮುಂತಾದ ಪ್ರಾಂತಗಳ ಕನ್ನಡಿಗರು ಪದ್ಯಾಲೋಚಿಸಬೇಕೆಂದು ಪ್ರಾರ್ಥಿಸುತ್ತೇವೆ ನೀವು ಕೈ ಕೊoದಿರುವ ಕಾರ್ಯವು ಶ್ಲಾನ್ಯವಾದುದು ಅದನ್ನು ನೆರವೇರಿಸುವ ವಿಷಯದಲ್ಲಿ ನಿಮಗೆ ಅನೇಕ ತೊಂದರೆಗಳುಂಟಾಗಬಹುದು ಆದರೆ ನೀವು ಅಧೈರ್ಯಪಡು ವುದಕ್ಕೆ ಕಾರಣವಿಲ್ಲ” ಎಂದು ಶ್ರೀಮದ್ಯುವರಾಜರವರು ಅಭಯಪ್ರದಾನವನ್ನು ಮಾಡಿರುವುದಕ್ಕಾಗಿ ಕನ್ನಡಿಗರೆಲ್ಲರೂ ಸಂತೋಷ ಪಡಬೇಕಾಗಿದೆ || ಎಸ್ ಎನ್, ನರಹರಯ್ಯನವರು ತಾವು ಗ್ರಾಧಿಕ ರೂಪಗಳ ಏಕೀ ಕರಣದ ವಿಷಯವನ್ನು ಕುರಿತು ಬರೆದ ಉಪನ್ಯಾಸದಲ್ಲಿ ನೃಪತುಂಗನು ಕವಿರಾಜ ಮಾರ್ಗವೆಂಬ ಗ್ರಂಥದಲ್ಲಿ ತೋರಿಸಿರುವ ದಕ್ಷಿಣೋತ್ತರ ಮಾರ್ಗಗಳ ವಿಚಾರವಾ ಗಿಯೇ ಆಗಲಿ, ಕರ್ಣಾಟಕ ಕವಿಚರಿತೆಯಲ್ಲಿ ಕ್ರಿ ಶ ೧೨ನೆಯ ಶತಮಾನದಲ್ಲಿ ಪ್ರಚುರವಾಗಿದ್ದಂತೆ ತೋರಿಸುವ ಹೊಸಗನ್ನಡದ' ರಸಗಳ ಏಷಯವಾಗಿಯೇ ಆಗಲಿ, ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಈ ವಿಷಯವನ್ನು ಕುರಿತು ಇತ ರರು ಬರೆದಿರುವ ಲೇಖನಗಳನ್ನು ಕುರಿತೇ ಆಗಲಿ, ಯಾವ ಮಾತನ್ನೂ ಆಡದಿರು ವುರು ವಿಸ್ಮಯವನ್ನುಂಟು ಮಾಡುತ್ತದೆ. ಈ ವಿಷಯಗಳನ್ನೆಲ್ಲಾ ನೋಡಿದ ಮೇಲೆ ಅವರು ತಮ್ಮ ಉಪನ್ಯಾಸವನ್ನು ಬದಲಾಯಿಸುವರೋ ಇಲ್ಲವೋ ಎಂಬ ಅಂಶವು ವಿಚಾರಾರ್ಹವಾಗಿರುವುದು, ೨೦೦