ಪುಟ:ಸುವರ್ಣಸುಂದರಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಕೇಳಿದನು ಆಗ ಸುವರ್ಣಸುಂದರಿ ತನ್ನ ಸೀರೆಯ ಸೆರಗಿನ ಲ್ಲಿಟ್ಟು ಕೊಂಡಿದ್ದ ಚಿನ್ನದ ಗುಲಾಬಿ ಹೂವನ್ನು ತಂದೆಗೆ ತೋರಿಸಿ ದಳು (ಅಹಹ ಎಷ್ಟು ಸುಂದರವಾಗಿದೆ, ಇಂತಹ ಅಂದವಾದ ಚಿನ್ನದ ಪುಷ್ಪವನ್ನು ನೋಡಿ ಯಾರಾದರೂ ಅಳುವುದುಂಟೆ? ? ಎಂದು ಕೇಳಿದನು ಅದಕ್ಕೆ ಆ ಬಾಲೆಯು ಬಿಕ್ಕಿಬಿಕ್ಕಿ ಅಳುತ್ತ, ಗದ್ದದ ಸ್ವರದಿಂದಲೇ, “ಎಲೈ ತಂದೆಯೆ, ಇದು ಸುಂದರವಾದ ಪುಷ್ಪವೆಂದರೇನು ” ಕೆಲಸಕ್ಕೆ ಬಾರದ ಹೂ ಇದರಲ್ಲಿ ಸ್ವಲ್ಪವಾ ದರೂ ವಾಸನೆ ಎಂಬುದೇ ಇಲ್ಲ ನಾನು ಎಂದಿನಂತೆ ಪ್ರಾತಃ ಕಾಲದಲ್ಲಿ ನಿನಗಾಗಿ ಒಳ್ಳೆಯ ಹೂಗೊಂಚಲುಗಳನ್ನು ಕಿತ್ತು ತಂದು ಕೊಡಬೇಕೆಂದು ಹೋದೆನು ಆದರೆ ಯಾವ ಹೂವನ್ನು ಕಿತ್ತ ರೂ ವಾಸನೆಯೇ ಇರಲಿಲ್ಲ ಕಿತ್ತು ಕಿತ್ತು ಪುಷ್ಪಗಳನ್ನು ಬಿಸುವೆನು ಒಂದಕ್ಕಾದರೂ ಅದರ ಕಾಂತಿಯೇ ಇಲ್ಲ ಎಲ್ಲೆಲ್ಲಿ ನೋಡಿದರೂ ಹೂಗಳೆಲ್ಲವೂ ಹಳದಿಯಾಗಿವೆ ! ಅವುಗಳ ವಾಸ ನೆಯ, ಅಂದವಾದ ಬಣ್ಣವೂ ಹೇಗೆ ಮಾಯವಾಗಿ ಹೋದುವೋ ಕಾಣೆ ಇನ್ನು ಆ ತೋಟದಿಂದ ಪ್ರಯೋಜನವೇನು? ನಿನಗೆ ನಿತ್ಯವೂ ತಂದುಕೊಡುತ್ತಿದ್ದಂತೆ ಸೊಗಸಾದ ಗುಲಾಬಿ ಹೂಗಳನ್ನು ಇನ್ನು ಮೇಲೆ ಎಲ್ಲಿಂದ ತಂದುಕೊಡಲಿ ! ನಾನು ತಂದ ಪುಷ್ಪ ಗಳೆಂದು ನೀನು ಮತ್ತಷ್ಟು ಪ್ರೀತಿಯಿಂದ ಆದರಿಸುತ್ತಿದ್ದೆಯಲ್ಲವೆ? ಈ ತೋಟವು ಹೀಗಾಗುವುದಕ್ಕೆ ಕಾರಣವೇನಿರಬಹುದು ? ೨೨ ಎಂದಳು ಅದಕ್ಕೆ ಸುವರ್ಣಶೇಖರನು ಮಗಳನ್ನು ಕುರಿತು ತಾನು ಮಾಡಿದ ಕೆಲಸವನ್ನು ಹೇಳಿಕೊಳ್ಳಲಾರದೆ, «ಎಲೇ ಮಗು, ಇದ ಕ್ಯಾಗಿ ಇಷ್ಟೊಂದು ಅಳುವುದೆಇಗೋ ನೋಡು, ಊಟಕ್ಕೆ ಎಲ್ಲವೂ ಬಡಿಸಿ, ಸಿದ್ದವಾಗಿದೆ ಕೂತುಕೊಂಡು ಊಟಮಾಡು ಹಿಂದಿನ ಗುಲಾಬಿ ಹೂ ಸ್ವಲ್ಪ ಕಾಲಕ್ಕೆ ಬಾಡಿ ಹೋಗುತಿದ್ದಿತು ಇದು ಹಾಗಲ್ಲ, ನೋಡು! ಯಾವಾಗಲೂ ಹೀಗೆಯೇ ಇರುತ್ತದೆ?