ಪುಟ:ಸುವರ್ಣಸುಂದರಿ.djvu/೨೧

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


17 ನಾನು ಕಾಣೆ” ಎಂದು ಹೇಳಿದನು. 14ಅತಿ ಆಸೆ ಗತಿಕೆಡಿಸಿತು' ಎಂಬ ನಾಣ್ಣು ಡಿಯು ಸತ್ಯವಲ್ಲವೆ ! ಐದನೆಯ ಪ್ರಕರಣ. ಸುವರ್ಣಶೇಖರನ ಸ್ಥಿತಿಯನ್ನು ಕೇಳಿದರೆ ಎಷ್ಟು ದುಃಖ ವಾಗುತ್ತದೆ ! ಇದನ್ನು ಕಣ್ಣಾರೆ ಕಂಡಿದ್ದರಿನ್ನೆ ಷ್ಟು ದುಃಖವಾ ಗುತಲಿದ್ದಿತು ! ಪ್ರಪಂಚದಲ್ಲಿ ಯಾವುದರಿಂದಲೂ ಸಂಪೂರ್ಣ ಸುಖಎಲ್ಲ ಸೌಂದರ್ಯ, ಸಂಪತ್ತು, ಶಕ್ತಿ, ಸಾಹಸ, ಪದವಿ ಯಾವುದೂ ಶಾಶ್ವತವಲ್ಲ ಒಂದೊಂದಕ್ಕೂ ಆಸೆಪಟ್ಟು ಅದ ಕ್ಯಾಗಿಯೇ ಪ್ರಾರ್ಧಿಸುವುದು ದಡ್ಡತನ ಸುವರ್ಣಶೇಖರನು ಸುವರ್ಣ ಸ್ಪರ್ಶವು ತನಗುಂಟಾದರೆ ಸಾಕೆಂದು ಹಾರೈಸುತ್ತಿದ್ದನು. ಅದೂ ಕೈಗೂಡಿತು ಆದರೆ ಅದರಿಂದಾದ ಅನರ್ಧಗಳೆಷ್ಟು ? ಬೇಕಾದಷ್ಟು ಚಿನ್ನವಿದ್ದರೂ ಏನಾದರೂ ಅವನಿಗೆ ಅದರಿಂದ ಪ್ರಯೋಜನವಾಯಿತೆ ? ಅವನಿಗಿಂತಲೂ ಬೀದಿಯಲ್ಲಿ ಅಲೆಯುವ ಭಿಕಾರಿಯೇ ಸುಖಿಯಲ್ಲವೆ ? ತನಗೆ ದೊರೆತ ಹಿಟ್ಟನ್ನಾ ದರೂ ನಿರಾತಂಕವಾಗಿ ತಿನ್ನು ವನು ಸುವರ್ಣಶೇಖರನು ಹಸಿವನ್ನು ತಡೆ ವುದು ಹೇಗೆ ? ಹೀಗೆ ಅನ್ನ ನೀರಿಲ್ಲದೆ ಆತನು ಎಷ್ಟು ಕಾಲ ಬದುಕ ಲಾದೀತು , ಹೊಟ್ಟೆಗಿಲ್ಲದೆ ಸಾಯುವಗತಿ ಒಂದಿತಲ್ಲಾ ! ಇಂತಹ ಭೋಗವಸ್ತುವೇ ಬೇಕೆಂದು ಪ್ರಾರ್ಧಿಸುವುದು ಮೂ ೩೯ರ ಲಕ್ಷಣ• ಭಗವಂತನು ಕೊಟ್ಟು ದರಲ್ಲಿ ಯಾವನು ತೃಪ್ತಿ ನಾಗಿ ಜೀವಿಸುವನೋ, ಅವನೇ ಸುಖಿ, ಅವನೇ ಧನ್ಯನು ಈ ಅಂಶಗಳನ್ನೆ ಸುವರ್ಣಶೇಖರನೂ ಯೋಚಿಸುತ್ತ ಹೋದನು. ಆದರೂ ತಿಂಡಿಗೋಸ್ಕರ ಸುವರ್ಣಸ್ಪರ್ಶವನ್ನು ಕಳೆದುಕೊಳ್ಳುವು ದಕ್ಕೆ ಸುವರ್ಣಶೇಖತನ ಮನಸ್ಸು ಒಡಂಬಡುತ್ತಿರಲಿಲ್ಲ ಒಂದಿಷ್ಟು ತಿಂಡಿಗಾಗಿ ಅಕ್ಷಾಂತರ ರೂಪಾಯಿ ಬೆಲೆತರುವ ಸುವರ್ಣಸ್ಪರ್ಶ