ಪುಟ:ಸುವರ್ಣಸುಂದರಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ನು ಗೋಚರನಾದನು, ಆ ಮಹಾತ್ಮನನ್ನು ನೋಡಿದಕೂಡಲೆ ಸುವರ್ಣಶೇಖರನು ಮಾತನಾಡದೆ ನಾಚಿಕೆಯಿಂದ ತಲೆಯನ್ನು ತಗ್ಗಿ ಸಿದನು ತನ್ನ ನಿಧಿಯಿದ್ದ ಕೊರಡಿಯಲ್ಲಿ ಹಿಂದಿನ ದಿನ ತನ್ನ ಕಣ್ಣಿಗೆ ಕಾಣಿಸಿಕೊಂಡ ಮಹ ಪುರುಷನೇ ಆತನೆಂಬುದು ಅವನ ಮನಸ್ಸಿಗೆ ಹೊಳೆಯಿತು ತನ್ನ ಕಷ್ಟಗಳಿಗೆಲ್ಲ ಕಾರಣವಾದ ಸುವರ್ಣ ಸ್ಪರ್ಶವನ್ನು ಅನುಗ್ರಹಿಸಿದ ಪಾತ್ರವು ಆತನೇ ಎಂಬುದೂ ಗೊತ್ತಾಯಿತು ಆ ಮಹಾತ್ಮನು ಮಂದಹಾಸಯುಕ್ತನಾಗಿ ದ್ದನು ಅದರಿಂದ ಕೂರಡಿಯೆಲ್ಲವೂ ಸುವರ್ಣಕಾಂತಿಯಿಂದ ಹೊಳೆಯುತ್ತಿದ್ದಿತು ಮೊದಲೇ ಸುವರ್ಣವಾಗಿ ನೂರ್ಪಟ್ಟಿದ್ದ ಪದಾರ್ಥಗಳೆಲ್ಲವೂ ದತ್ತಷ್ಟು ಕಾಂತಿಯಿಂದ ಪ್ರಕಾಶಿಸಿದವು « ಏನಯಾ, ಸುವರ್ಣ ಶೇಖರನೇ, ಸುವರ್ಣಗ್ನರ್ಶದ ಮಾಹಾತ್ಮ ಯು ಹೇಗಿದೆ : ನಿನ್ನ ಮನಸ್ಸಿಗೆ ಈಗಲಾದರೂ ತೃಪ್ತಿಯಾಯಿತಷ್ಟೆ ಎಂದು ಆ ಮಹಾತ್ಮನು ಕೇಳಿದನು ಸುವರ್ಣಶೇಖರನು ಮಾತನಾಡದೆ ತಲೆಯನ್ನು ತೂಗುತ್ತಾ, « ಅಯ್ಯೋ ! ನಾನು ಒಹಳ ದು 8 ಎಪಡುತ್ತಿದ್ದೇನೆ " ಎಂದು ಹೇಳಿದನು, ಅದಕ್ಕೆ ಆ ಮಹಾಪುರುಷನು « ದುಃಖವೇ? ಇದೇನು, ಆಶ್ಚರ್ಯ ! ಅಂತಹ ದುಃಖಕ್ಕೆ ಕಾರಣವೇನಿದೆ ನಾನೇನೋ ಸೀನು ಕೇಳಿದುದನ್ನು ಕೊಟ್ಟೆನಲ್ಲವೆ? ಅದರಿಂದ ನಿನ್ನ ಮನೋರಧಗಳು ನೆರವೇರಲಿಲ್ಲವೋ ? ? ಎಂದು ಕೇಳಿದನು ಆಗ ಅರಸು, ಎಲೈ ಮಹಾತ್ಮನೆ, ಹಣವೇ ಮನುಷ್ಯನಿಗೆ ಸರ್ವಸ್ವವಲ್ಲ ಚಿನ್ನ ನಿದ್ದ ಮಾತ್ರಕ್ಕೆ ಸಮಸ್ತವೂ ಇದ್ದಂತಾಗುವು ದಿಲ್ಲ. ನನಗೆ ಬೇಕಾದ ಪದಾರ್ಥಗಳ, ಒಂದೂ ನನಗೆ ದೊರೆಯ ದಂತಾಗಿದೆ, ' ಎಂದನು : ಅಹ' ಹಾಗೆಯೇ ! ನಿನ್ನೆ ಯಿಂದೀಚೆಗೆ ನೀನು ಹೊಸ ವಿಷಯವನ್ನು ಕಂಡುಕೊಂಡಹಾಗಿದೆ. ಇಲ್ಲಿ ನೋಡು ' ಸುವರ್ಣಸ್ಪರ್ಶವು ಶ್ರೇಷ್ಠವೊ, ಒಂದು ಬಟ್ಟಲು ಶುದ್ಧ