ಪುಟ:ಸ್ವಾಮಿ ಅಪರಂಪಾರ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ

"ಖಾವಂದರಿಗೆ ಕೃತಜ್ಞತೆ ಸೂಚಿಸೋದಕ್ಕೆ ಯಾವ ಪದ ಬಳಸಬೇಕೋ ತೋಚುತ್ತಿಲ್ಲ." "ಬೋಪನ್, ಸುಮ್ಮನಿದೀರಲ್ಲ? ಪದಕದ ತೂಕ ಎಷ್ಟಿರತದೆ ಹೇಳತೀರಾ?" ಬೋಪಣ್ಣನೆಂದ:

"ತಾವೆ ತಿಳಿಸಬೇಕು, ಖಾವಂದರೇ",

"ಹನ್ನೊಂದೂವರೆ ತೊಲ !”
ಆಶ್ಚರ್ಯದಿಂದ ತೆರೆದುಕೊಂಡ ಬೋಪಣ್ಣನ ಬಾಯಿ ಪುನಃ ಮುಚ್ಚಿಕೊಳ್ಳುವುದನ್ನು

ಮರೆಯಿತು. ...ದಿವಾನ ಲಕ್ಷ್ಮಿನಾರಾಯಣ ಮಾತ್ರ ಆಂಗ್ಲ ಒಡೆಯರ ಅವಕೃಪೆಗೆ ಪಾತ್ರನಾದ. ಕೊಡಗಿಗೊದಗಿದ ದುರವಸ್ಥೆಗೆ ಒಂದು ಬಗೆಯಲ್ಲಿ ತಾನೂ ಕಾರಣನಾದೆ: ಚಿಕವೀರ ರಾಜನ ವಿರುದ್ಧ ಬೋಪಣ್ಣ ಒಳಸಂಚು ನಡೆಸಿದಾಗ ತಾನು ಪ್ರತಿಭಟಿಸಲಿಲ್ಲ: ಆಂಗ್ಲರು ಅರಸೊತ್ತಿಗೆಯನ್ನೇ ಮುಕ್ತಾಯಗೊಳಿಸಲು ಹೊರಟಾಗ ತಾನು ಸಮ್ಮತಿಸಬಾರದಿತ್ತು ; ರಾಜಕುಮಾರಿಗಾದರೂ ಪಟ್ಟ ದೊರಕಿಸುವಂತೆ ಯತ್ನಿಸಬೇಕಾಗಿತ್ತು.,,

 –ಇವೆಲ್ಲ ವಿಚಾರಗಳು ಲಕ್ಷ್ಮಿನಾರಾಯಣನನ್ನು ಕಾಡಿದುವು. ಆತ ತನ್ನ

ಉದ್ಯೋಗಕ್ಕೆ ಸಂಬಂಧಿಸಿ ನಿರುತಾಹಿಯನೂ ನಿರಾಸಕ್ತನೂ ಆದ.

   ಬಂಡಾಯದ ಘೋಷ ಕೊಡಗಿನಾದ್ಯಂತ ಮೊರೆದಾಗ, ಕನ್ನಡ ಜಿಲ್ಲೆಯನ್ನೂ  ಆವರಿಸಿ ದಾಗ, ಅವನಿಗೆ ಸಹಜವಾಗಿಯೇ ಸಂತೋಷವೆನಿಸಿತು, ಗೂಢಚಾರರ ಮೂಲಕ

ಬಂಡಾಯದ ಕೆಲ ಸಿದ್ಧತೆಗಳಿಗೆ ಸಂಬಂಧಿಸಿ ಅವನು ಮಾಹಿತಿ ಪಡೆದಿದ್ದ. ಅದು ಇತರ ದಿವಾನರಿಗೆ ತಿಳಿಯದು ಎಂಬುದು ಖಚಿತವಾದಾಗ, ಅವರಿಗಾಗಲಿ ಲೀಹಾರ್ಡಿಗಾಗಲಿ ತಾನಾಗಿ ತಿಳಿಸುವ ಗೊಡವೆಗೆ ಆತ ಹೋಗಿರಲಿಲ್ಲ.

ಲಕ್ಷ್ಮಿನಾರಾಯಣ ಮೈಗಳ್ಳ, ವೇತನಕಷ್ಟೆ ಕೈಯೊಡ್ಡುವವನು--ಎಂದು ಲೀಹಾರ್ಡಿ ಮೊದಲು ಸಿಟ್ಟಾದ. ಬಳಿಕ, ಇವನು ವಿದ್ರೋಹಿಗಳ ಬೆಂಬಲಿಗನಿರಬಹುದು-ಎಂದು ಸಂಶಯ ತಳೆದ, ಮುಂದೆ ರಾಜದ್ರೋಹದ ಆರೋಪ ಈತನ ಮೇಲೆ ಹೊರಿಸುವುದೇ ಸರಿ- ಎಂದು ತೀರ್ಮಾನಿಸಿದ. ಆಂಗ್ಲರ ವಕ್ರನೋಟಕ್ಕೆ ಗುರಿಯಾದವನ ಗತಿ ಏನಾಗುತ್ರ ದೆಂದು ಇತರರು ತಿಳಿಯಲಿ-ಎಂಬ ಅಪೇಕ್ಷೆ ಅವನಿಗೆ.
 ಮೈಸೂರಿನ ದಿವಾನ ವೆಂಕಟರಮಣಯ್ಯನ ಉದ್ಯೋಗ ಮಾತ್ರ ಹೋಗಿತ್ತು, ಇಲ್ಲಿ

ಅದರ ಜತೆಗೆ ದಿವಾನ ಲಕ್ಷ್ಮಿನಾರಾಯಣನ ಸ್ವಾತಂತ್ರ್ಯವೂ ಅಪಹರಿಸಲ್ಪಟ್ಟಿತು.

 ಲೀಹಾರ್ಡಿ, ಪೊನ್ನಪ್ಪ-ಬೋಪಣ್ಣರ ಎದುರಲ್ಲಿ ಲಕ್ಷ್ಮಿನಾರಾಯಣನನ್ನು ಹೀನಾಯ

ವಾಗಿ ಜರೆದ.

"ನೀನು ನೀಚ!ಸ್ವಾಮಿದ್ರೋಹಿ"
ಶಾಂತವಾಗಿ ಲಕ್ಷ್ಮಿನಾರಾಯಣನೆಂದ: 
"ನೀಚ ಹೌದೋ ಅಲ್ಲವೋ ಹೇಳಲಾರೆ, ಸ್ವಾಮಿದ್ರೋಹಿ ಎನ್ನುವುದರಲ್ಲಿ ಮಾತ್ರ ಅನುಮಾನವಿಲ್ಲ."
ಲೀಹಾರ್ಡಿ ಹುಬ್ಬು ಹಾರಿಸಿ ಪೊನ್ನಪ್ಪ-ಬೋಪಣ್ಣರ ಕಡೆ ನೋಡಿ ಹೇಳಿದ:       "ಕೇಳಿದಿರಾ ! ಸಾಮಿದ್ರೋಹಿ ಅಂತ ಒಪ್ಪಿಕೊಳ್ಳುತಾ ಇದಾನೆ."
"ಉಪ್ಪುತಿಂದ ಮನೆಗೆ ಎರಡು ಬಗೆದು, ನೀವು ಇಲ್ಲಿ ಬೇರೂರೋದಕ್ಕೆ ಅವಕಾಶ