ಪುಟ:ಸ್ವಾಮಿ ಅಪರಂಪಾರ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೧೭೨

ಸ್ವಾಮಿ ಅಪರಂಪಾರ

“ವಿಶ್ವಾಸಘಾತಕರು! ಆ ಕೆಂಪು ಮುಸುಡಿನವರನ್ನ ನೀವು ಹೊಗಳೋದು ನನಗಿಷ್ಟ
ವಿಲ್ಲ.”
ಅವನ ಮನಸ್ಸು ಒಳಗಿಂದೊಳಗೇ ಮಿಡಿಯಿತು :
“ಗಣಪತೀನ ಮಾಡೋಕೆ ಹೋದೆ. ಇನ್ನೇನೋ ಆಯಿತು.”
...ದೇವಮ್ಮಾಜಿಯನ್ನು ಅಪ್ಪಂಗಳದಲ್ಲಿ ಬಿಟ್ಟು. ಚನ್ನಬಸಪ್ಪ ಮಡಕೇರಿಗೆ ಹೋಗಿ
ಲೀಹಾರ್ಡಿಗೆ ಮುಜುರೆ ಸಲ್ಲಿಸಿದ.
“ನೀವು ನಿಮ್ಮ ಜಹಗೀರಿನ ಆದಾಯದ ಲೆಕ್ಕಪತ್ರ ಇಡಬೇಕು. ವರ್ಷಂಪ್ರತಿ ಒಂದಂಶ
ನಮ್ಮ ಖಜಾನೆಗೆ ಸಂದಾಯ ಮಾಡಬೇಕು. ಎಷ್ಟು ಅಂತ ಮುಂದೆ ತಿಳಿಸತೇವೆ.”
“ಅಂದರೆ ನಾವು ತಮ್ಮ ಒಕ್ಕಲಾಗುತೇವೆ. ಅನ್ನಿ.”
“ಛೇ! ಛೇ ! ಇದು ನಿಮಗೆ ನಾವು ನೀಡುವ ರಕ್ಷಣೆಗೆ ಪ್ರತಿಫಲ...”
ನಾಲಗೆಯ ತುದಿಯವರೆಗೂ ಬಂದ ಕಟೂಕ್ತಿಯನ್ನು ಹತ್ತಿಕ್ಕಿ ಚನ್ನಬಸಪ್ಪನೆಂದ :
“ಒಳ್ಳೆದು ಖಾವಂದರೇ, ಈ ರಕ್ಷಣೆ ಆಚಂದ್ರಾರ್ಕವಾಗಿ ನಡೆಯಲಿ...”
“ಖಂಡಿತ. ಖಂಡಿತ.”
ಅಲ್ಲಿಂದ ಹೊರಬಿದ್ದು ಚನ್ನಬಸಪ್ಪ ದಿವಾನರನ್ನು ಕಂಡ.
“ಕೈಕೊಟ್ಟಿರಿ ಎಂದ.
“ತೆಪ್ಪಗೆ ಮುಚ್ಕಂಡ್ಹೋಗು. ಇಲ್ಲದೀರ ಜಾಗೀರೂ ಕೈಬಿಟ್ಟಾತು” ಎಂದ
ಪೊನ್ನಪ್ಪ.
ಬೋಪಣ್ಣನೆಂದ :
ತಮ್ಮ, ನಿನ್ನ ಒಳ್ಳೇದಕ್ಕೆ ಒಂದು ಮಾತು ಹೇಳತೀನಿ. ಯಾರ ಹತ್ತರಲೂ ನಾಲಗೆ
ಸಡಿಲಬಿಟ್ಟು ಮಾತಾಡಬೇಡ.”
“ಆಗಲಿ. ನಾ ನಾಲಗೆ ಕೊಯ್ಕೋತೀನಿ. ನೀವು ಸುಖವಾಗಿ ಬಾಳಿ” ಎಂದು ನುಡಿದು
ಚನ್ನಬಸಪ್ಪ ಹೊರಟುಹೋದ.

***

ದೇವಮ್ಮಾಜಿ ತನ್ನ ಗಂಡನೊಡನೆ ಅಪ್ಪಂಗಳಕ್ಕೆ ಹಿಂತಿರುಗುವುದಕ್ಕೆ ಮುನ್ನವೇ
ಗಂಗಮ್ಮ ಮಗಳೊಡನೆ ಪಟ್ಟು ಹಿಡಿದಿದ್ದಳು :
“ಇಲ್ಲಿ ಇರೋಣ ಬ್ಯಾಡ. ನಮ್ಮ ಹಳ್ಳಿಗೆ ಒಂಟೋಗಾನ.”
ಪ್ರತಿ ದಿನವೂ ಅದೇ ಆಗ್ರಹ .
ರಾಜಮಾಜಿ ಕೊಡುತ್ತ ಬಂದುದೊಂದೇ ಉತ್ತರ :
“ಇದು ನನ್ನ ಗಂಡನ ಮನೆ. ನಾ ಇಲ್ಲೇ ಇರತೀನಿ.'
ದೇವಮ್ಮಾಜಿ ಹಿಂತಿರುಗಿದ ಮೇಲೆ ಗಂಗಮ್ಮ ಮತ್ತಷ್ಟು ಹಟ ತೊಟ್ಟಳು
“ಇಲ್ಲಿಯ ಸೌಭಾಗ್ಯ ಕಂಡದ್ದಾಯಿತಲ್ಲ ? ಓಗಿಬಿಡಾನ ಬಾ ಮಗ.
ರಾಜವಾಜಿಯ ಉತ್ತರದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ:
“ಇದು ನನ್ನ ಗಂಡನ ಮನೆ. ನಾ ಇಲ್ಲೇ ಇರತೀನಿ.”
ಗಂಗಮ್ಮ ಕೊನೆಯಲ್ಲಿ ಅಂದಳು :
'ಹುಚ್ಚುಂಡೆ ವ್ಯಾಮೋಹ. ಮದುವೆ ಮಾಡಿಕೊಟ್ಟೆ.
ಗಂಡ ಹೆಂಡತಿ ಸುಖವಾಗಿ