ಪುಟ:ಸ್ವಾಮಿ ಅಪರಂಪಾರ.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಸ್ವಾಮಿ ಅಪರಂಪಾರ

೧೭೩

ಬಾಳ್ವೆ ಮಾಡೋದನ್ನೂ ಕಂಡೆ ! ಮೊಮ್ಮಕ್ಕಳನ್ನು ಎತ್ತಿ ಆಡಿಸಿದೆ ! ನಾನು ಇನ್ನೂ ಇಲ್ಲಿ
ಯಾಕಿರಬೇಕು, ಅಂತೀನಿ ? ಹೊರಡತೀನಿ ನಮ್ಮವ್ವ.
ಗಂಗಮ್ಮ ಹೊರಟೇಬಿಟ್ಟಳು, ಮಲೆತಿರಿಕೆ ಬೆಟ್ಟದ ತಪ್ಪಲಿಗೆ ಪಯಣ, ಮೇನೆ ಇರ
ಲಿಲ್ಲ, ಬೋವಿಗಳಿರಲಿಲ್ಲ, ರಾಜಭಟರಿರಲಿಲ್ಲ. ಒಬ್ಬ ಆಳು ಮತ್ತು ಆಕೆ. ಕಾಲ್ನಡಿಗೆ.

ತಾಯಿ ಹೋದಳೆಂದು ರಾಜಮ್ಮಾಜಿ ಅಳಲಿಲ್ಲ.

೬೨

ಪೆರಿಯಾಪಟ್ಟಣದ ಹತ್ತಿರವೋ ಎಲ್ಲೋ ಇರಬೇಕು ; ಶಂಕರಪ್ಪನ ಧ್ವನಿ ಕೇಳಿಸಿತ್ತಲ್ಲ?
ಮಲ್ಲಪ್ಪಣ್ಣನೂ ತಾನೂ ಬೆಂಗಳೂರಿಗೆ ಬರುತಿದೇವೆ-ಎಂದು ಹೇಳಿದಂತೆ ಆಗಿತ್ತಲ್ಲ?
ಆದರೆ ತಡಿಕೆಯ ರಂಧ್ರದಿಂದ ದಿಟ್ಟಿಸಿ ನೋಡಿದಾಗ ಏನನ್ನು ಕಂಡೆ ? ಕುಂಪಣಿ ಸಿಪಾಯರ
ಸಮವಸ್ತ್ರವನ್ನು ಮಾತ್ರ...
ಮಲ್ಲಪ್ಪನೂ ಶಂಕರಪ್ಪನೂ ಆ ಉಡುಗೆಯಲ್ಲಿ ಇದ್ದುದೇ ಹೌದಾದರೆ ಮುಂದೆ
ಏನಾದರು ?
ಆ ಉಡುಪನ್ನು ಅವರು ಧರಿಸುವುದಾದರೂ ಹೇಗೆ ಸಾಧ್ಯವಾಯಿತು ? ಅವರು
ಕುಂಪಣಿ ಸರಕಾರದ ನೌಕರರಾದರೆ ? ಛೇ ! ಛೇ !
ಊಹೂಂ . ಶಂಕರಪ್ಪನ ಧ್ವನಿ ಎಂದು ತಾನು ಭ್ರಮಿಸಿರಬೇಕು, ಅಷ್ಟೆ. ಆ ದಿನ
ಆತನನ್ನು ಧೂರ್ತರು ಮರಕ್ಕೆ ಬಿಗಿದುದನ್ನು ಕಣ್ಣಾರೆ ಕಾಣಲಿಲ್ಲವೆ ತಾನು ?
ಧೂರ್ತರು ಹೊರಟುಹೋದ ಬಳಿಕ ಯಾರಾದರೂ ಸಹಾಯಕ್ಕೆ ಬಂದು ಶಂಕರಪ್ಪ
ಬದುಕಿ ಉಳಿದಿದ್ದರೆ ?
__ಯೋಚನೆ ಹಾಗೂ ಹರಿಯುತ್ತಿತ್ತು; ಹೀಗೂ ಹರಿಯುತ್ತಿತ್ತು.
ಇದೊಂದು ಬಗೆಹರಿಯದ ಸಮಸ್ಯೆ, ಎಂದುಕೊಂಡ ಅಪರಂಪಾರಸ್ವಾಮಿ,
ಆದರೊಂದು ದಿನ ಒಗಟು ಒಡೆಯಿತು.
ಸೆರೆಮನೆಯಲ್ಲಿ ಊಟ ನೀಡುವ ವೇಳೆ ಸದ್ದು ಗದ್ದಲ ಬಹಳ, ಒಂದಕ್ಕೊಂದು ತಗಲಿ.
ಕೊಂಡು ಸಾಲಾಗಿ ಕಟ್ಟಿದ ಕೊಠಡಿಗಳು, ಅವುಗಳೆದುರು ಉದ್ದಕ್ಕೂ ಜಗಲಿ. ಅನ್ನದ
ಕಡಾಯಿಯನ್ನು ಹೊತ್ತು ಜಗಲಿಯ ಒಂದು ಕೊನೆಯಲ್ಲಿ ಇಬ್ಬರು ಆಳುಗಳು ಕಾಣಿಸಿ
ಕೊಳ್ಳುತ್ತಿದ್ದರು. ಅವರ ಜತೆಯಲ್ಲಿ ಬಡಿಸುವವನಿರುತಿದ್ದ. ಕೊಠಡಿಯ ಎದುರು ನಿಂತು
ಅವನು “ತಟ್ಟೆ ! ಎಂದು ಕೂಗುವ ಕೈದಿ ತನ್ನಲ್ಲಿರುವ ತಟ್ಟೆಯನ್ನು ಬಾಗಿಲ ಬಳಿ
ಹಿಡಿಯಬೇಕು, ಬಡಿಸುವವನು ನಿರ್ದಿಷ್ಟ ಮಾಪನವಾದ ದೊಡ್ಡ ಸೌಟಿನ ತುಂಬ ಅನ್ನವ
ನ್ಯೂಯು ತಟ್ಟೆಗೆ ಸುರಿಯುತ್ತಿದ್ದ. ಅದು ಉಪ್ಪು ಸೋಂಕಿದ ಅನ್ನ, ಆ ಮೂವರು
ಮುಂದೆ ಸಾಗಿದಂತೆ ಇನ್ನೊಬ್ಬ ಆಳು ನೀರಿನೊಡನೆ ಬರುತ್ತಿದ್ದ. ಕೊಡದಿಂದ ಆತ
ಕೈದಿಯ ಬಳಿ ಇರುವ ಮಣ್ಣಿನ ಪಾತ್ರೆಗೆ ನೀರು ಸುರಿಯುತ್ತಿದ್ದ. ಹೀಗೆಯೇ ಬರಾಕುಗಳು
ಪ್ರತಿಯೊಂದು ಸಾಲಿನ ಎದುರಿಗೂ ನಡೆಯುತ್ತಿತ್ತು.
ಕೈದಿಗಳಲ್ಲಿ ರಾಜಕೀಯ ಕಾರಣಕ್ಕಾಗಿ ಬಂಧಿತರಾದವರಿದ್ದರು. ದಂಡಿನಲ್ಲಿ ಅವಿಧೇಯತ
ತೋರಿದುದಕ್ಕಾಗಿ ಕಾರಾಗೃಹವಾಸಕ್ಕೆ ಗುರಿಯಾದವರಿದ್ದರು. ಸುಲಿಗೆಗಾರರೋ ದರೋಡೆ
ಖೋರರೋ ಆಗಿ ಕಂಪನಿಯ ರಾಜ್ಯಭಾರಕ್ಕೆ ಅಡ್ಡಿ ಆತಂಕ ಒಡ್ಡಿದವರಿದ್ದರು. ಅನ್ನ ನೀಡು


ಕರರೋ ಆಗಿ ಕಂಪನಿಯ ರಾಜ್ಯಭಾರಕ್ಕೆ ಅಡ್ಡಿ ಆತಂಕ ಒಡ್ಡಿದವರಿದ್ದರು. ಅನ್ನ ನೀಡು